ಕಾರ್ಯಾಚರಣೆಗಿಳಿದ ಎರಡೇ ಗಂಟೆಯಲ್ಲಿ ಪುಂಡಾನೆಯನ್ನು ಸೆರೆಹಿಡಿದ ಅಭಿಮನ್ಯು!
ಕಾಡಾನೆಗಳನ್ನು ಸೆರೆಹಿಡಿಯಲು ಅಭಿಮನ್ಯು ಅಂಡ್ ಟೀಮ್ ಎಂಟ್ರಿಕೊಟ್ಟಾಗಿದೆ. ಗುರುವಾರ ಹಾಸನಕ್ಕೆ ಅಭಿಮನ್ಯು ಹಾಗೂ ಇತರ ಆನೆಗಳನ್ನು ಕರೆತರಲಾಗಿತ್ತು. ಶನಿವಾರದಿಂದ ಅಭಿಮನ್ಯು ಅಂಡ್ ಕಾರ್ಯಾಚರಣೆಗೆ ಇಳಿದಿದೆ. ಕಾರ್ಯಾಚರಣೆಗೆ ಇಳಿದ ಎರಡೇ ಗಂಟೆಯಲ್ಲಿ ಪುಂಡಾನೆಯೊಂದನ್ನು ಸೆರೆಹಿಡಿದಿವೆ.
ಇದನ್ನೂ ಓದಿ: ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟು- ಭುಗಿಲೆದ್ದ ಅಸಮಾಧಾನ, ನಾಯಕರಿಗೆ ತಲೆನೋವು..!
ದಸರಾ ಆನೆ ಅರ್ಜುನ ಆನೆ ಮೃತಪಟ್ಟ ಮೇಲೆ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಬ್ರೇಕ್ ನೀಡಲಾಗಿತ್ತು. ಶನಿವಾರದಿಂದ ಮತ್ತೆ ಕಾಡಾನೆಗಳನ್ನು ಸೆರೆಡಿಯಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಭಿಮನ್ಯು ನೇತೃತ್ವದಲ್ಲಿ ಶನಿವಾರ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆಗಿಳಿದ ಎರಡೇ ಗಂಟೆಯಲ್ಲಿ ಪುಂಡಾನೆ ಸೆರೆ ಸಿಕ್ಕಿದೆ. ಆಲೂರು ತಾಲೂಕಿನ ನಲ್ಲೂರು ಗ್ರಾಮದ ಸಾರಾ ಎಸ್ಟೇಟ್ನಲ್ಲಿ ಒಂಟಿ ಸಲಗವನ್ನು ಹಿಡಿಯಲಾಗಿದೆ.
ಪುಂಡಾನೆ ಅಭಿಮನ್ಯು ಟೀಮ್ನಿಂದ ತಪ್ಪಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿತ್ತು. ಆದರೆ ಯೋಜನೆಯಂತೆ ಪುಂಡಾನೆಯ ಆಟವನ್ನು ಅಭಿಮನ್ಯು ನಡೆಯಲು ಬಿಡಲಿಲ್ಲ. ಅಭಿಮನ್ಯು ಪುಂಡಾನೆಗೆ ಗುದ್ದಿ ಒಂದು ಕಡೆ ನಿಲ್ಲಿಸಿತು. ಬಳಿಕ ದೊಡ್ಡದಾದ ಹಗ್ಗಗಳಿಂದ ಕಟ್ಟಿಹಾಕಲಾಗಿತ್ತು.
ಹಗ್ಗದಿಂದ ಬಿಡಿಸಿಕೊಳ್ಳಲು ಪುಂಡಾನೆ ಸರ್ವ ಪ್ರಯತ್ನ ಮಾಡಿತು. ಆದರೆ ಸುತ್ತಲೂ ಅಭಿಮನ್ಯು ಟೀಮ್ ಹಾಗೂ ಸಿಬ್ಬಂದಿ ನಿಂತಿದ್ದರಿಂದ ಬಿಡಿಸಿಕೊಳ್ಳಲು ವಿಫಲ ಯತ್ನ ಮಾಡಿದಂತೆ ಆಯಿತು. ಅಭಿಮನ್ಯುವಿನ ಬಲಕ್ಕೆ ಹೆದರಿ ಪುಂಡಾನೆ ಸುಮ್ಮನಾಗಿದೆ.