ವಯಸ್ಸಾದ್ರೂ ಕಮ್ಮಿಯಾಗಿಲ್ಲ ABD ಖದರ್ – 15 ಫೋರ್ 7 ಸಿಕ್ಸ್.. 41 ಬಾಲ್ಗೆ ಸೆಂಚುರಿ
ಫ್ಯಾನ್ಸ್ ದಿಲ್ ಗೆದ್ದ ಡಿವಿಲಿಯರ್ಸ್

ಯಾರು ಹೇಳಿದ್ದು ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಗೆ ವಯಸ್ಸಾಗಿದೆ ಅಂತ.. ಏಜ್ ಜಸ್ಟ್ ನಂಬರ್ ಅಷ್ಟೇ ನನ್ ಆಟಕ್ಕೆ ವಯಸ್ಸು ಆಗಿಲ್ಲ ಅಂತ ಎಬಿಡಿ ತಮ್ಮ ಆಟದಲ್ಲೇ ತೋರಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದು ಏಳೆಂಟು ವರ್ಷಗಳೇ ಕಳೆದರೂ ಅವರ ಆಟದಲ್ಲಿ ಚೂರೇ ಚೂರು ಚೇಂಜಸ್ಸ್ ಆಗಿಲ್ಲ.. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲೂ ಯುವಕರನ್ನೇ ನಾಚಿಸುವಂತೆ ಹೊಡಿಬಡಿ ಆಟ ಆಡುತ್ತಿದ್ದಾರೆ.
41 ವಯಸ್ಸಿನಲ್ಲಿ ABD ಇತಿಹಾಸ
ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ತಮ್ಮ ವಿನಾಶಕಾರಿ ಬ್ಯಾಟಿಂಗ್ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 41ನೇ ವಯಸ್ಸಿನಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಸಿದ್ದಾರೆ. ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಕ್ರೀಸ್‌ಗೆ ಬಂದ ಕ್ಷಣದಿಂದಲೇ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವ ಮೂಲಕ ಕೇವಲ 41 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಇಂಗ್ಲೆಂಡ್ ಚಾಂಪಿಯನ್ಸ್ ವಿರುದ್ಧ ಒಟ್ಟು 51 ಎಸೆತಗಳಲ್ಲಿ 116 ರನ್ ಗಳಿಸಿದರು. ಇದರಲ್ಲಿ 15 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳು ಸೇರಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು 41ನೇ ವಯಸ್ಸಿನಲ್ಲಿ ಎಂಥಾ ಅದ್ಭುತ ಆಟ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಎಬಿ ಡಿವಿಲಿಯರ್ಸ್ ಅಬ್ಬರದಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್‌ಗಳು ಕೇವಲ 12.3 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ ವಿನ್ ಆಯ್ತು..
ಬ್ಯಾಟಿಂಗ್ ಮಾತ್ರವಲ್ಲ ಫೀಲ್ಡಿಂಗ್‌ನಲ್ಲೂ ABD ಫಿಟ್
2025ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ನಲ್ಲಿ ತಮ್ಮ ಬ್ಯಾಟಿಂಗ್‌ನಿಂದ ಮಾತ್ರವಲ್ಲದೆ, ಮಿಂಚಿನ ಫೀಲ್ಡಿಂಗ್‌ನಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. 41ನೇ ವಯಸ್ಸಿನಲ್ಲಿ ಡಿವಿಲಿಯರ್ಸ್ ಬೌಂಡರಿ ಲೈನ್ ಬಳಿ ಕ್ಯಾಚ್ ಹಿಡಿದಿರೋ ವಿಡಿಯೋ ಇದ್ದಕ್ಕೆ ಸಾಕ್ಷಿ.. ABD ಫೀಲ್ಡಿಂಗ್ ಕಂಡು ನೆರೆದಿದ್ದ ಪ್ರೇಕ್ಷಕರು ಮಾತ್ರವಲ್ಲದೆ ಕ್ರಿಕೆಟ್ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ. ಸಾಹಸ ಪ್ರದರ್ಶಿಸಿದ ಹಿಡಿದ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಭಾರತದ ಬ್ಯಾಟಿಂಗ್ ಇನಿಂಗ್ಸ್ ವೇಳೆ ಯೂಸುಫ್ ಪಠಾಣ್ ಬಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿ ಜಾರುತ್ತಾ ಸಾಗಿ ಕ್ಯಾಚ್ ಪಡೆದ ವಿಲಿಯರ್ಸ್ ಇನ್ನೇನು ಬೌಂಡರಿ ಗೆರೆಗೆ ತಾಗುತ್ತೇನೆ ಎಂಬ ಹೊತ್ತಿನಲ್ಲಿ ಚೆಂಡನ್ನು ಮೈದಾನದ ಒಳಗಡೆ ಎಸೆದು ಸಹ ಆಟಗಾರ ಸರೆಲ್ ಎರ್ವೀ ಕ್ಯಾಚ್ ಹಿಡಿಯುಂತೆ ಮಾಡಿರು. 40ರ ಹರೆಯದಲ್ಲೂ 20ರ ಯುವಕನಂತೆ ಫೀಲ್ಡಿಂಗ್ ನಡೆಸಿದ ವಿಲಿಯರ್ಸ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದಾರೆ. ಎಬಿಡಿಗೆ ಆಸ್‌ಸಿಬಿ ಕ್ರೇಜ್ ಕಮ್ಮಿಯಾಗಿಲ್ಲ.. ಎಬಿಡಿ ಇಂಗ್ಲೆಂಡ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ಆಡುತ್ತಿದ್ದರು, ಕೆಲ ಫ್ಯಾನ್ಸ್ ಆರ್‌ಸಿಬಿ ಆರ್‌ಸಿಬಿ ಅಂತ ಕೂಗುತ್ತಿದ್ದರು.. ಆರ್‌ಸಿಬಿ ಹೆಸರು ಕೇಳುತ್ತಿದ್ದಂತೆ ಎಬಿಡಿ ಕೂಡ ಖುಷಿ ಪಡುತ್ತಿದ್ದರು..

ನೋಡಿರಿ

