4 ವರ್ಷಗಳ ಬಳಿಕ ಮೈದಾನಕ್ಕೆ ಎಬಿ ಡಿವಿಲಿಯರ್ಸ್ – ದಿಗ್ಗಜರ ಜಟಾಪಟಿಗೆ ಕೌಂಟ್ ಡೌನ್!

ಲೆಜೆಂಡರಿ ಕ್ರಿಕೆಟರ್ಗಳ ಪವರ್ಫುಲ್ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಸೀಸನ್ 2 ಟೂರ್ನಿ ಇಂದಿನಿಂದ ಆರಂಭ ಆಗ್ಲಿದೆ. ಜಗತ್ತಿನ ಸರ್ವಶ್ರೇಷ್ಠ ಆಗಾರರು ಪಂದ್ಯಾವಳಿಯಲ್ಲಿ ಭಾಗಿಯಾಗ್ತಿರೋದ್ರಿಂದ ಕ್ರೇಜ್ ಕೂಡ ಜೋರಾಗಿದೆ. ಅದ್ರಲ್ಲೂ ಈ ಸೀಸನ್ನ ಸ್ಪೆಷಾಲಿಟಿ ಅಂದ್ರೆ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್. ಸೌತ್ ಆಫ್ರಿಕಾ ಕ್ರಿಕೆಟ್ನ ಧ್ರುವತಾರೆ, ಆರ್ಸಿಬಿ ಅಭಿಮಾನಿಗಳ ಪಾಲಿನ ಆಪತ್ಬಾಂಧವ ಎಬಿಡಿ ಈ ಸಲ ತಾವೂ ಕೂಡ ಮೈದಾನಕ್ಕೆ ಇಳಿಯೋಕೆ ರೆಡಿಯಾಗಿದ್ದಾರೆ. ಎಬಿಡಿಯವ್ರ ಇಂಪ್ರೆಸ್ಸಿವ್ ಬ್ಯಾಟಿಂಗ್ ನೋಡೋಕೆ ಕೋಟ್ಯಂತರ ಅಭಿಮಾನಿಗಳು ಕಾಯ್ತಿದ್ದಾರೆ.
ಇದನ್ನೂ ಓದಿ : ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಆರ್ಸಿಬಿಯೇ ನೇರ ಹೊಣೆ! – ಟೀಮ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕ್ಯಾಬಿನೆಟ್ನಲ್ಲಿ ತೀರ್ಮಾನ!
ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ಲೆಜೆಂಡರಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ 4 ವರ್ಷಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳೋಕೆ ರೆಡಿಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್ಮನ್ ಎಬಿಡಿ 2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ನಿಂದ ನಿವೃತ್ತಿ ಘೋಷಿಸಿದರು. ಅಂದಿನಿಂದ ಕ್ರಿಕೆಟ್ ಟರ್ಫ್ನಿಂದ ದೂರವೇ ಉಳಿದಿದ್ರು. ಈಗ ಆರ್ಸಿಬಿ ಮತ್ತು ಸೌತ್ ಆಫ್ರಿಕಾದ ಸೂಪರ್ಸ್ಟಾರ್ 2025 ರ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಸೀಸನ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಜುಲೈ 18 ರಿಂದ ಆಗಸ್ಟ್ 2 ರವರೆಗೆ ಬರ್ಮಿಂಗ್ಹ್ಯಾಮ್, ನಾರ್ಥಾಂಪ್ಟನ್, ಲೀಸೆಸ್ಟರ್ ಮತ್ತು ಲೀಡ್ಸ್ನಲ್ಲಿ ನಿಗದಿಯಾಗಿರುವ WCL ಫೈಟ್ನಲ್ಲಿ ದಿಗ್ಗಜರು ಫೈಟ್ ನಡೆಸಲಿದ್ದಾರೆ.
ಈ ಟೂರ್ನಿಯ ಸ್ಪೆಷಾಲಿಟಿ ಅಂದ್ರೆ ಕ್ರಿಕೆಟ್ನ ಲೆಗಸಿಯನ್ನ ಉತ್ತುಂಗಕ್ಕೇರಿಸಿದ ಸ್ಟಾರ್ ಪ್ಳೇಯರ್ಗಳೇ ಇದ್ದಾರೆ. ಭಾರತದ ಮಾಜಿ ಪ್ಲೇಯರ್ಗಳಾದ ಯುವರಾಜ್ ಸಿಂಗ್, ಶಿಖರ್ ಧವನ್ ಮತ್ತು ಹರ್ಭಜನ್ ಸಿಂಗ್ ಆಡ್ತಾರೆ. ಹಾಗೇ ಬ್ರೆಟ್ ಲೀ, ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಮತ್ತು ಇಯೊಯಿನ್ ಮಾರ್ಗನ್ ಅವರಂತಹ ಜಾಗತಿಕ ಐಕಾನ್ಗಳು ಭಾಗವಹಿಸಲಿದ್ದಾರೆ. ದಕ್ಷಿಣ ಆಫ್ರಿಕಾದ ತಂಡದಲ್ಲಿ ಡಿವಿಲಿಯರ್ಸ್ ಜೊತೆ ಆಲ್ಬಿ ಮಾರ್ಕೆಲ್, ವೇಯ್ನ್ ಪಾರ್ನೆಲ್, ಹಾರ್ಡಸ್ ವಿಲ್ಜೋಯೆನ್ ಮತ್ತು ಆರನ್ ಫಾಂಗಿಸೊ ಅವರಂತಹ ದಿಗ್ಗಜರು ಕಾಣಿಸಿಕೊಳ್ತಾರೆ. ಇನ್ನು ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 18000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು 114 ಟೆಸ್ಟ್ಗಳಲ್ಲಿ 8765 ರನ್, 228 ಏಕದಿನ ಪಂದ್ಯಗಳಲ್ಲಿ 9577 ರನ್ ಮತ್ತು 78 ಟಿ20ಐ ಪಂದ್ಯಗಳಲ್ಲಿ 1672 ರನ್ ಗಳಿಸಿದ್ದಾರೆ.
ಇನ್ನು 6 ತಂಡಗಳ ಈ ಟೂರ್ನಿಯು ರೌಂಡ್-ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಟಾಪ್ 4 ತಂಡಗಳು ಸೆಮಿಫೈನಲ್ಗೆ ಪ್ರವೇಶ ಪಡೆಲಿವೆ. ಜುಲೈ 18 ಅಂದ್ರೆ ಇವತ್ತು ಮೊದಲ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ಚಾಂಪಿಯನ್ಸ್ ವರ್ಸಸ್ ಪಾಕಿಸ್ತಾನ ಚಾಂಪಿಯನ್ಸ್ ತಂಡಗಳ ನಡುವೆ ರಾತ್ರಿ 9 ಗಂಟೆಗೆ ಪಂದ್ಯ ಆರಂಭ ಆಗ್ಲಿದೆ. ಭಾರತ ಚಾಂಪಿಯನ್ಸ್ ತಂಡವು ಜುಲೈ 20 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಎದುರಿಸಲಿದೆ. ಜುಲೈ 22 ರಂದು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ವಿರುದ್ಧ ಸೆಣಸಲಿದೆ. ಜುಲೈ 26 ರಂದು ಆಸ್ಟ್ರೇಲಿಯಾ ಚಾಂಪಿಯನ್ಸ್, ಜುಲೈ 27 ರಂದು ಇಂಗ್ಲೆಂಡ್ ಚಾಂಪಿಯನ್ಸ್ ಮತ್ತು ಜುಲೈ 29 ರಂದು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧ ಸೆಣಸಲಿದ್ದಾರೆ. ಕಳೆದ ವರ್ಷ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಚಾಂಪಿಯನ್ಸ್ ಹಾಲಿ ಚಾಂಪಿಯನ್ ಆಗಿದೆ.

ನೋಡಿರಿ

