ಕಮ್ಮಿಯಾಗಿಲ್ಲ ಎಬಿಡಿ ಕ್ರೇಜ್, RCB ಆಪದ್ಭಾಂಧವ ವೈಲೆಂಟ್ ಆಗಿದ್ದೇಕೆ?

ಕಮ್ಮಿಯಾಗಿಲ್ಲ ಎಬಿಡಿ ಕ್ರೇಜ್,  RCB ಆಪದ್ಭಾಂಧವ ವೈಲೆಂಟ್ ಆಗಿದ್ದೇಕೆ?

ಎಬಿಡಿ.. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ.. ಎಬಿಡೀ ವಿಲಿಯರ್ಸ್ ಏಕದಿನ ಹಾಗೂ ಟ್ವೆಂಟಿ 20 ಪಂದ್ಯಗಳಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕನಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಪರವಾಗಿ ಆಡಿದ್ದರು .. ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಈತ ಬಲಗೈ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದು ಕೆಲವೊಮ್ಮೆ ಅಗ್ರಕ್ರಮಾಂಕದಲ್ಲೂ ಆಡುತ್ತಿದ್ದರು..

ಎಬಿ ಡಿ ವಿಲಿಯರ್ಸ್ ರವರು 2004ರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಕ್ರಿಕೆಟ್‌ಗೆ  ಪಾದಾರ್ಪಣೆ ಮಾಡಿದರು. ಇವರು ಗ್ರೆಮ್ ಪೊಲಾಕ್ ನಂತರ ಅತಿ ವೇಗವಾಗಿ ಸಾವಿರ ರನ್ ಗಡಿ ದಾಟಿದರು. ಈ ರೀತಿ ಮಾಡಿದ ದಕ್ಷಿಣ ಆಫ್ರಿಕಾದ ಎರಡನೆಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಹೀಗೆ ಅವರ ಕ್ರಿಕೆಟ್ ಪಯಣ ಪ್ರಾರಂಭವಾಯಿತು. ನಂತರದಲ್ಲಿ ಅವರು ಅನೇಕ ಪಂದ್ಯವನ್ನಾಡಿ ದಕ್ಷಿಣ ಆಫ್ರಿಕಾ ದೇಶಕ್ಕೆ ಒಬ್ಬ ಒಳ್ಳೇಯ ಪ್ರತಿಭೆಯಾಗಿ ಗುರುತಿಸಿಕೊಂಡರು. ಅಷ್ಟೇ ಅಲ್ಲದೆ ಇವರಿಗೆ ಏಕದಿನ ಹಾಗೂ T20  ಪಂದ್ಯಗಳಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕ ಪಟ್ಟ ದೊರೆಯಿತು..  ಇವರು ನಾಯಕನಾಗಿಯು ಯಶಸ್ಸು ಕಂಡಿದ್ದಾರೆ.  ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾವು ಅನೇಕ ಪಂದ್ಯದಲ್ಲಿ ಜಯಸಿದೆ.

 ಆರ್‌ಸಿಬಿ ಪರ ಕಮಾಲ್ ಮಾಡಿದ್ದ ABD

RCB ಪರ 11 ವರ್ಷಗಳ ಕಾಲ ಆಡಿದ್ದ ಎಬಿಡಿ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ವೇಳೆ 157 ಪಂದ್ಯಗಳಿಂದ ಒಟ್ಟು 4522 ರನ್‌ಗಳನ್ನು ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಆರ್​ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಸಹ ಬರೆದಿದ್ದಾರೆ.  ಡಿವಿಲಿಯರ್ಸ್ ಅಲಿಯಾಸ್ ಎಬಿಡಿ ಐಪಿಎಲ್​ನಿಂದ ನಿವೃತ್ತರಾಗಿ ನಾಲ್ಕು ವರ್ಷಗಳೇ ಕಳೆದಿದೆ. 2021, ಅಕ್ಟೋಬರ್ 11 ರಂದು ಕೊನೆಯ ಬಾರಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಎಬಿಡಿ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಅಜರಾಮರ. ಇದಕ್ಕೆ ಸಾಕ್ಷಿ ಈ ಬಾರಿಯ ಆರ್​ಸಿಬಿ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ಕೇಳಿ ಬಂದ ABD, ABD ಎಂಬ ಹರ್ಷೋದ್ಗಾರ. ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ತಂಡದ ಅನ್​ಬಾಕ್ಸ್ ಕಾರ್ಯಕ್ರಮದಲ್ಲೂ ಎಬಿ ಡಿವಿಲಿಯರ್ಸ್ ಹೆಸರು ರಾರಾಜಿಸಿದೆ. ಅದು ಸಹ ಅಭಿಮಾನಿಗಳಿಂದಲೇ. ಮೂರು ವರ್ಷಗಳ ಹಿಂದೆಯೇ ಅರ್​ಸಿಬಿ ತಂಡವನ್ನು ತೊರೆದಿರುವ ಎಬಿ ಡಿವಿಲಿಯರ್ಸ್ ಅವರನ್ನು ಅಭಿಮಾನಿಗಳು ಈ ವಿಶೇಷ ಕಾರ್ಯಕ್ರಮದಲ್ಲಿ ನೆನೆದಿದ್ದಾರೆ. ಅಲ್ಲದೆ ಸ್ಟೇಡಿಯಂನಲ್ಲಿದ್ದ ಆರ್​ಸಿಬಿ ಫ್ಯಾನ್ಸ್ ಎಬಿಡಿ ಹೆಸರನ್ನು ಕೂಗುವ ಮೂಲಕ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

28 ಬಾಲ್, 15 ಸಿಕ್ಸ್ 101 ರನ್

ಕಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ಅಬ್ಬರಿಸಿದ್ದಾರೆ. 28 ಎಸೆತಗಳಲ್ಲಿ 15 ಸಿಕ್ಸರ್ ಸಹಿತ ಅಜೇಯ 101 ರನ್ ಗಳಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸೆಂಚುರಿಯನ್‌ನಲ್ಲಿ ನಡೆದ ಟೇಸ್ಟ್ ಆಫ್ ಸೂಪರ್‌ಸ್ಪೋರ್ಟ್ ಪಾರ್ಕ್ ಪ್ರದರ್ಶನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ದಂತಕಥೆ ಎಬಿ ಡಿವಿಲಿಯರ್ಸ್ ಕೇವಲ 28 ಎಸೆತಗಳಲ್ಲಿ ಶತಕ ಬಾರಿಸಿದ್ದು, ಫ್ಯಾನ್ಸ್ ಸಖತ್ ಖುಷಿಯಾದ್ರು. ಇನ್ನು ಎಬಿಡಿ ಅವರ ಕ್ರಿಕೆಟ್ ಸಾಧನೆಯನ್ನ ನೋಡೋದಾದ್ರೆ..

114 ಟೆಸ್ಟ್ ಪಂದ್ಯಗಳನ್ನ ಆಡಿರೋ ಎಬಿಡಿ 8765 ರನ್‌ಗಳಿಸಿದ್ದು ಇದ್ರಲ್ಲಿ 22 ಸೆಂಚುರಿ ಮತ್ತು 46 ಆಫ್ ಸೆಂಚುರಿ ಬಾರಿಸಿದ್ದಾರೆ. ಇನ್ನು 228 ಏಕದಿನ ಪಂದ್ಯಗಳನ್ನ ಆಡಿದ್ದು, 9577 ರನ್‌ಗಳಿಸಿದ್ದಾರೆ ಇದ್ರಲ್ಲಿ 25 ಸೆಂಚುರಿ ಮತ್ತು 53 ಆಫ್ ಸೆಂಚರಿ ಬಾರಿಸಿದ್ದಾರೆ. ಹಾಗೇ 78 ಟೀ 20 ಪಂದ್ಯಗಳನ್ನ ಆಡಿದ್ದು, 1672  ರನ್‌ಗಳಿಸಿದ್ದಾರೆ.. ಎಬಿಡಿ ಹೆಸರಲ್ಲಿ ಸಾಕಷ್ಟು ದಾಖಲೆಗಳಿದ್ದು, ಕ್ರಿಕೆಟ್ ಲೋಕಕ್ಕೆ ಸಾಕಷ್ಟು ಕೊಡುಗೆಯನ್ನ ಕೊಟ್ಟಿದ್ದಾರೆ.

Kishor KV

Leave a Reply

Your email address will not be published. Required fields are marked *