RCB ರೀ ಎಂಟ್ರಿಗೆ ABD ರೆಡಿ – 2026ರ IPL ವೇಳೆಗೆ ಕಮ್ ಬ್ಯಾಕ್?
Mr.360 ಬ್ಯಾಟರ್ ಹೊಸ ಅಧ್ಯಾಯ

RCB ರೀ ಎಂಟ್ರಿಗೆ ABD ರೆಡಿ – 2026ರ IPL ವೇಳೆಗೆ ಕಮ್ ಬ್ಯಾಕ್?Mr.360 ಬ್ಯಾಟರ್ ಹೊಸ ಅಧ್ಯಾಯ

ಎಬಿ ಡಿವಿಲಿಯರ್ಸ್. ದಕ್ಷಿಣ ಆಫ್ರಿಕಾದ ಐಕಾನಿಕ್ ಬ್ಯಾಟರ್. ಅದ್ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಜೆಂಡರಿ ಪ್ಲೇಯರ್. ಕಳೆದ ನಾಲ್ಕು ವರ್ಷಗಳಿಂದ ಮೈದಾನದಿಂದ ದೂರವೇ ಉಳಿದಿದ್ದ ಡಿವಿಲಿಯರ್ಸ್ ಇತ್ತೀಚೆಗಷ್ಟೇ ವಿಶ್ವ ಲೆಜೆಂಡರಿ ಲೀಗ್ ಮೂಲಕ ಸದ್ದು ಮಾಡಿದ್ರು. ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ ಆರ್ಭಟಿಸಿದ್ರು. ಎಬಿಡಿ ಸ್ಟ್ರೆಂಥ್, ಸ್ಟ್ಯಾಮಿನಾ ನೋಡಿ ಆರ್​ಸಿಬಿ ಫ್ಯಾನ್ಸ್ ಅಂತೂ ತಂಡಕ್ಕೆ ವಾಪಸ್ ಬಂದುಬಿಡು ಅಂತಾ ಕೇಳಿಕೊಳ್ತಿದ್ರು. ಕೊನೆಗೂ 2026ರಲ್ಲಿ ಆರ್​ಸಿಬಿಗೆ ಬರೋಕೆ ರೆಡಿ ಅಂತಾ ಎಬಿಡಿ ಘೋಷಣೆ ಮಾಡಿದ್ದಾರೆ. ಬಟ್ ಪ್ಲೇಯರ್ ಆಗಿ ಅಲ್ಲ ಕೋಚ್ ಅಥವಾ ಮೆಂಟರ್ ಆಗಿ.

ಇದನ್ನೂ ಓದಿ : ಸೆಪ್ಟೆಂಬರ್‌ 1 ರಂದು ಸಿಗೋಣವಾ…! –  ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಸ್ಪೆಷಲ್‌ ಸಂದೇಶ!

ಎಬಿ ಡಿವಿಲಿಯರ್ಸ್ ಸೌತ್ ಆಫ್ರಿಕಾ ಪ್ಲೇಯರ್ ಆಗಿದ್ರೂ ಭಾರತದ ಮೇಲೆ ತುಂಬಾನೇ ಪ್ರೀತಿ. ಅದ್ರಲ್ಲೂ ಕರ್ನಾಟಕ ಹಾಗೇ ಆರ್​ಸಿಬಿ ಟೀಂ ಅಂದ್ರೆ ಇನ್ನೂ ಒಂದು ಕೈ ಜಾಸ್ತಿ. ವಿರಾಟ್ ಕೊಹ್ಲಿಯವ್ರ ಆಪ್ತ ಸ್ನೇಹಿತನಾಗಿರೋ ಎಬಿಡಿ ಬೆಂಗಳೂರು ಫ್ರಾಂಚೈಸಿ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ಮಾತನಾಡ್ತಾರೆ. ಅದ್ರಲ್ಲೂ 2025ರ ಐಪಿಎಲ್​ನಲ್ಲಿ ಆರ್​ಸಿಬಿ ಚೊಚ್ಚಲ ಕಪ್ ಗೆದ್ದ ವೇಳೆ ತಾವೂ ಸಂಭ್ರಮದಲ್ಲಿ ಭಾಗಿಯಾಗಿ ಭಾವುಕರಾಗಿದ್ರು. ಇದೀಗ ಆರ್​ಸಿಬಿಗೆ ಬರೋಕೆ ರೆಡಿ ಅಂದಿದ್ದಾರೆ. ಅಂದ್ರೆ ಬೆಂಗಳೂರು ತಂಡಕ್ಕೆ ಕೋಚ್ ಅಥವಾ ಮೆಂಟರ್ ಆಗಿ ಬರಲು ಇಷ್ಟವಿದೆ ಎಂದಿದ್ದಾರೆ.

ಐಪಿಎಲ್​ ವೃತ್ತಿಜೀವನದ ಬಹುಪಾಲು ಸಮಯವನ್ನ ಆರ್​ಸಿಬಿ ಜೊತೆಗೇ ಕಳೆದಿರೋ ಡಿವಿಲಿಯರ್ಸ್​ 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಅಂದ್ರೆ ಈಗಿನ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಕರಿಯರ್ ಶುರು ಮಾಡಿದ್ರು.  ಆ ಬಳಿಕ 2011 ರಲ್ಲಿ ಆರ್‌ಸಿಬಿಗೆ ಸೇರಿದ್ದು ಅಲ್ಲಿಂದ ದಶಕದವರೆಗೂ ಬೆಂಗಳೂರು ಬಿಟ್ಟು ಕದಲಲಿಲ್ಲ. ಆದ್ರೆ 2021 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ರು. ಐಪಿಎಲ್​ನಲ್ಲಿ ಒಟ್ಟಾರೆಯಾಗಿ ಎರಡು ಫ್ರಾಂಚೈಸಿಗಳ ಪರ 184 ಐಪಿಎಲ್ ಪಂದ್ಯಗಳನ್ನು ಆಡಿದ್ದು 40 ಅರ್ಧಶತಕಗಳು ಮತ್ತು ಮೂರು ಶತಕಗಳನ್ನು ಒಳಗೊಂಡಂತೆ 151.68 ಸ್ಟ್ರೈಕ್ ರೇಟ್‌ನಲ್ಲಿ 5,162 ರನ್ ಗಳಿಸಿದ್ದಾರೆ. ಆರ್​ಸಿಬಿ ಪರ 157 ಪಂದ್ಯಗಳನ್ನ ಆಡಿದ್ದಾರೆ. 4,522 ರನ್‌ಗಳನ್ನು ಗಳಿಸಿದ್ದಾರೆ. ಅವರ ಸರಾಸರಿ 41.10 ಮತ್ತು 158.33 ರ ಅದ್ಭುತ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎರಡು ಶತಕಗಳು ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ. 2016 ರ ಸೀಸನ್​ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ಜೊತೆ ಎರಡನೇ ವಿಕೆಟ್‌ಗೆ 229 ರನ್‌ಗಳ ಬೃಹತ್ ಜೊತೆಯಾಟ ನೀಡಿದ್ರು. ಇಂದಿಗೂ ಕೂಡ ಐಪಿಎಲ್​ನಲ್ಲಿ  ಅತ್ಯಧಿಕ ಪಾಲುದಾರಿಕೆ ಎಂಬ ದಾಖಲೆ ಇದೆ. ಇದೇ ಸೀಸನ್​ನಲ್ಲಿ ಎಬಿಡಿ 687 ರನ್ ಗಳಿಸಿದರು ಮತ್ತು ರನ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ರು. ಆರ್​ಸಿಬಿ ಪರ ಎಬಿಡಿ ನೀಡಿರೋ ಕೊಡುಗೆಗೆ 2022 ರಲ್ಲಿ, ಕ್ರಿಸ್ ಗೇಲ್ ಜೊತೆಗೆ ಡಿವಿಲಿಯರ್ಸ್ ಅವರನ್ನು ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ.

Shantha Kumari