ಎಬಿ ಡಿವಿಲಿಯರ್ಸ್ ಕೈಗೆ ಮತ್ತೆ ಬ್ಯಾಟ್ – RCB ಪರ ಆಡ್ತಾರಾ ಆಪತ್ಬಾಂಧವ?

ಐಪಿಎಲ್ನಲ್ಲಿ ಕಪ್ ಗೆಲ್ಲದೇ ಇದ್ರೂ ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಐದೈದು ಸಲ ಚಾಂಪಿಯನ್ ಆಗಿರೋ ತಂಡಗಳನ್ನೇ ಹಿಂದಿಕ್ಕಿರೋ ತಾಕತ್ತು ಆರ್ಸಿಬಿಯದ್ದು. ಕಪ್ ಗೆಲ್ತಾರೋ ಬಿಡ್ತಾರೋ ಸೆಕೆಂಡ್ರಿ. ಬಟ್ ಸತ್ರೂ ಬೇರೆ ಟೀಮ್ಗೆ ಸಪೋರ್ಟ್ ಮಾಡಲ್ಲ ಅನ್ನೋ ಲಾಯಲ್ ಫ್ಯಾನ್ಸ್ ಇರೋದು ಇಲ್ಲಿ ಮಾತ್ರವೇ. ಇದೇ ಕಾರಣಕ್ಕೋ ಏನೋ ಕೆಲ ಆಟಗಾರರೂ ಕೂಡ ಆರ್ಸಿಬಿ ತಂಡ ಮತ್ತು ಫ್ಯಾನ್ಸ್ ಜೊತೆ ಎಮೋಷನಲ್ ಬಾಂಡಿಂಗ್ ಇಟ್ಕೊಂಡಿದ್ದಾರೆ. ತಂಡ ಬಿಟ್ರೂ ಆ ಕನೆಕ್ಷನ್ ಮಾತ್ರ ಕಟ್ ಆಗಿಲ್ಲ. ಈ ಪೈಕಿ ಬೆಂಗಳೂರು ತಂಡದ ಆಪತ್ಬಾಂಧವ ಎಬಿ ಡಿವಿಲಿಯರ್ಸ್ ಟಾಪ್ನಲ್ಲಿದ್ದಾರೆ. ಎಬಿಡಿ ಆರ್ಸಿಬಿ ಬಿಟ್ಟ ಮೇಲೆ ಸಾಕಷ್ಟು ಕನ್ನಡಿಗರು ಬೇಸರಗೊಂಡಿದ್ರು. ಇನ್ನೊಂದಷ್ಟು ವರ್ಷಗಳ ಕಾಲ ಆಡ್ಬೋದಿತ್ತು ಅನ್ಕೊಳ್ತಿದ್ರು. ಈಗ ಆ ಟೈಮ್ ಮತ್ತೆ ಬಂದಿದೆ. ಸ್ಟೇಡಿಯಮ್ಗೆ ಇಳಿಯೋದಾಗಿ ಎಬಿಡಿಯೇ ಹೇಳಿದ್ದಾರೆ.
ಇದನ್ನೂ ಓದಿ : ಸಂಜು ಮುಗಿಸಲು ಮಹಾ ಸಂಚು – ಕೆರಿಯರ್ ಕಾಪಾಡಿದ್ದೇ ರಾಹುಲ್ ದ್ರಾವಿಡ್
ಎಬಿ ಡಿವಿಲಿಯರ್ಸ್. ಸೌತ್ ಆಫ್ರಿಕಾದ ಆಟಗಾರನೇ ಆಗಿದ್ರೂ ಕನ್ನಡಿಗರು ಕೊಟ್ಟಿರೋ ಪ್ರೀತಿ ಅಷ್ಟಿಷ್ಟಲ್ಲ. ನಮ್ಮ ಕನ್ನಡಿಗನೇ ಎನ್ನುವಷ್ಟರ ಮಟ್ಟಿಗೆ ಅಭಿಮಾನ ತೋರಿಸಿದ್ದಾರೆ. ಈಗಲೂ ಕೂಡ ಆರ್ಸಿಬಿ ಪಂದ್ಯಗಳ ಟೈಮಲ್ಲಿ ಎಬಿಡಿ ಫೋಟೋ ಹಿಡಿದ ಸ್ಟೇಡಿಯಮ್ಗೆ ಬರ್ತಾರೆ. ಇದೀಗ ಅವ್ರ ಆಟವನ್ನ ಮಿಸ್ ಮಾಡಿಕೊಂಡವರಿಗೆ ಮತ್ತೆ ಅವ್ರ ಆಟವನ್ನ ನೋಡೋ ಟೈಂ ಬಂದಂತಿದೆ. ರನ್ನಿಂಗ್ ಬಿಟ್ವೀನ್ ದಿ ವಿಕೆಟ್ಸ್ ಇಂಟರ್ ವ್ಯೂನಲ್ಲಿ ಮಾತ್ನಾಡಿರೋ ಡಿವಿಲಿಯರ್ಸ್, ನಾನು ಮತ್ತೆ ಕ್ರಿಕೆಟ್ ಅಂಗಳಕ್ಕೆ ಬರ್ತೇನೆ. ಯಾಕಂದ್ರೆ ನನ್ನ ಮಕ್ಕಳು ನಾನು ಆಡಬೇಕೆಂದು ಒತ್ತಡ ಹೇರುತ್ತಿರುತ್ತಾರೆ. ಅವರಿಗಾಗಿ ನಾನು ಮತ್ತೆ ಕ್ರಿಕೆಟ್ ಆಡಬೇಕೆಂದಿರುವೆ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ಡಿವಿಲಿಯರ್ಸ್ ಏನೂ ವಯಸ್ಸಿನ ಕಾರಣ ಅಥವಾ ಕಳಪೆ ಫಾರ್ಮ್ನಿಂದ ಆಟ ನಿಲ್ಲಿಸಿರಲಿಲ್ಲ. ಈ ಹಿಂದೆ ಕಣ್ಣು ದೃಷ್ಟಿ ಸಮಸ್ಯೆಯ ಕಾರಣ ದಿಢೀರ್ ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ಮಾತನಾಡಿದ ಎಬಿಡಿ, ನನ್ನ ಎಡಗಣ್ಣು ಸ್ವಲ್ಪ ಮಸುಕಾಗಿದ್ದರೂ, ಈಗ ಬಲಗಣ್ಣು ಪ್ರಬಲವಾಗಿದೆ. ಹೀಗಾಗಿ ಚೆಂಡನ್ನು ಚೆನ್ನಾಗಿ ಗುರುತಿಸಬಲ್ಲೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ಗೆ ಕಮ್ ಬ್ಯಾಕ್ ಮಾಡ್ತೀನಿ ಅಂದಿದ್ರೂ ಕೂಡ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವುದಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ನಾನು ಮತ್ತೆ ಅಂಗಳಕ್ಕೆ ಇಳಿಯಲು ಇಚ್ಛಿಸಿದರೂ, ಐಪಿಎಲ್ ಅಥವಾ ಸೌತ್ ಆಫ್ರಿಕಾ ಟಿ20 ಲೀಗ್ಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿಲ್ಲ. ಆದರೆ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಅಂದ್ರೆ ಇಲ್ಲಿ ಎಬಿಡಿ ಮೈದಾನಕ್ಕೆ ಇಳಿಯುವುದು ಗ್ಯಾರಂಟಿ. ಮುಂಬರುವ ದಿನಗಳಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಅವರು ಸೌತ್ ಆಫ್ರಿಕಾ ಟಿ20 ಲೀಗ್ ಅಥವಾ ಐಪಿಎಲ್ನಲ್ಲಿ ಕಾಣಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ.
ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಲ್ಲಿ ಕ್ಯಾಪಿಟಲ್ಸ್ನೊಂದಿಗೆ ಆರಂಭಿಸಿದ್ದರು. 2011 ರಲ್ಲಿ RCB ಸೇರಿದ್ದ ಎಬಿಡಿ ಸತತ 11 ಸೀಸನ್ಗಳಲ್ಲಿ ತಂಡದ ಭಾಗವಾಗಿದ್ದರು. ಆದ್ರೆ 2021ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದಲೂ ನಿವೃತ್ತಿಯನ್ನ ಘೋಷಣೆ ಮಾಡಿದ್ದರು. ಇನ್ನು ವಿರಾಟ್ ಕೊಹ್ಲಿ ಹೊರತುಪಡಿಸಿದ್ರೆ ಆರ್ಸಿಬಿ ಬಿಡುಗಡೆ ಮಾಡದೇ ಇರೋ ಮತ್ತೊಬ್ಬ ಆಟಗಾರ ಅಂದ್ರೆ ಅದು ಎಬಿ ಡಿವಿಲಿಯರ್ಸ್. ಡಿವಿಲಿಯರ್ಸ್ 2011ರಲ್ಲಿ RCBಗೆ ಸೇರ್ಪಡೆಗೊಂಡಿದ್ರು. ಅಂದಿನಿಂದ 11 ವರ್ಷಗಳ ನಿರಂತರವಾಗಿ ಬೆಂಗಳೂರು ತಂಡದಲ್ಲೇ ಉಳಿದಿದ್ರು. 2021ರಲ್ಲಿ IPL ನಿಂದ ನಿವೃತ್ತಿಯಾಗುವವರೆಗೂ RCBಗಾಗಿಯೇ ಮ್ಯಾಚ್ಗಳನ್ನ ಆಡಿದ್ರು. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿಯವ್ರನ್ನ RCB ಪ್ರತೀ ಸೀಸನ್ನಲ್ಲೂ ಉಳಿಸಿಕೊಂಡೇ ಬಂದಿತ್ತು. ಐಪಿಎಲ್ನಲ್ಲಿ ನಿವೃತ್ತಿವರೆಗೂ 184 ಪಂದ್ಯಗಳನ್ನ ಆಡಿದ್ದ ಎಬಿಡಿ 3 ಶತಕಗಳು ಸೇರಿದಂತೆ 5,162 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಬೆಂಗಳುರು ತಂಡದ ಪರ ಹೈಯೆಸ್ಟ್ ಸ್ಕೋರ್ ಕಲೆ ಹಾಕಿದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹೀಗೆ ಹೊಡಿಬಡಿ ಆಟವಾಡುವಾಗಲೇ ಎಬಿಡಿ ದಿಢೀರ್ ನಿವೃತ್ತಿ ಘೋಷಿಸಿದ್ದು ಅಭಿಮಾನಿಗಳಿಗೆ ತುಂಬಾ ಬೇಸರ ಮೂಡಿಸಿತ್ತು. ಬಟ್ ಈಗ ಕಮ್ಬ್ಯಾಕ್ ಹಿಂಟ್ ಕೊಟ್ಟಿರೋದು ಖುಷಿ ಕೊಟ್ಟಿದೆ.