IPL ಹರಾಜಿನಲ್ಲಿ ಸೆಹ್ವಾಗ್ ಪುತ್ರ – ದ್ರಾವಿಡ್ ಮಗ ರೇಸ್ ನಿಂದ ಔಟ್
ಭಾರತದಲ್ಲಿ ಆಡಲು ವಿದೇಶಿಗರ ದಂಡು

2027ರ ಐಪಿಎಲ್ಗಾಗಿ ಸ್ಟ್ರಾಂಗ್ ಟೀಂ ಸೆಟ್ ಮಾಡಲು ಫ್ರಾಂಚೈಸಿಗಳೆಲ್ಲಾ ರೆಡಿಯಾಗ್ತಿದ್ದು ಇದೀಗ ಹರಾಜಿನಲ್ಲಿ ರಿಜಿಸ್ಟ್ರರ್ ಆಗಿರೋ ಆಟಗಾರರ ಲಿಸ್ಟ್ ಔಟ್ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ 1220 ಆಟಗಾರರು ಆಕ್ಷನ್ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದಾರೆ. ವಿದೇಶಿ ಪ್ಲೇಯರ್ಸ್ ದಂಡು ಒಂದ್ಕಡೆ ದೇಶೀ ಆಟಗಾರರ ಗುಂಪು ಇನ್ನೊಂದ್ಕಡೆ. ಇದ್ರ ನಡುವೆ ದಿಗ್ಗಜ ಆಟಗಾರರ ಮಕ್ಕಳೂ ಅದೃಷ್ಟಪರೀಕ್ಷೆಗೆ ಇಳೀತಿದ್ದಾರೆ.
ಇದನ್ನೂ ಓದಿ : ಹರ್ಷಿತ್ ರಾಣಾ ವಿರುದ್ಧ PAK ದೂರು – IND Vs SL ಸೆಮೀಸ್ ಫೈಟ್
ಐಪಿಎಲ್ ಅಂದ್ರೆ ಜಸ್ಟ್ ಕ್ರಿಕೆಟ್ ಆಗಿ ಉಳಿದಿಲ್ಲ. ಭವಿಷ್ಯವನ್ನೇ ಬದಲಿಸೋ ವೇದಿಕೆ. 2027ರ ಆವೃತ್ತಿಗೆ ಒಟ್ಟು 1,220 ಆಟಗಾರರು ತಮ್ಮ ಹೆಸರನ್ನ ರಿಜಿಸ್ಟ್ರರ್ ಮಾಡಿಕೊಂಡಿದ್ದಾರೆ. ಈ ಪೈಕಿ 939 ಭಾರತೀಯ ಆಟಗಾರರಿದ್ರೆ 281 ವಿದೇಶಿ ಪ್ಲೇಯರ್ಸ್ ಇದ್ದಾರೆ. ಒಟ್ಟು 17 ದೇಶಗಳ ಆಟಗಾರರು ಹರಾಜಿನ ರೇಸ್‌ನಲ್ಲಿದ್ದಾರೆ. ಈ ಪೈಕಿ ವಿದೇಶಿ ಆಟಗಾರರ ನೋಂದಣಿಯಲ್ಲಿ ಆಸ್ಟ್ರೇಲಿಯಾ ಫಸ್ಟ್ ಪ್ಲೇಸಲ್ಲಿದೆ. ಆಸೀಸ್ನಿಂದ ಬರೋಬ್ಬರಿ 53 ಆಟಗಾರರು ಅಖಾಡಕ್ಕೆ ಇಳೀತಾ ಇದ್ರೆ ದಕ್ಷಿಣ ಆಫ್ರಿಕಾದಿಂದ 40 ಆಟಗಾರರು, ವೆಸ್ಟ್ ಇಂಡೀಸ್‌ನಿಂದ 36, ನ್ಯೂಜಿಲೆಂಡ್‌ನಿಂದ 25, ಅಫ್ಘಾನಿಸ್ತಾನದಿಂದ 23, ಶ್ರೀಲಂಕಾದಿಂದ 21, ಇಂಗ್ಲೆಂಡ್‌ನಿಂದ 16 ಹಾಗೂ ಬಾಂಗ್ಲಾದೇಶದಿಂದ 12 ಆಟಗಾರರು ಹರಾಜಿನ ಪಟ್ಟಿಯಲ್ಲಿದ್ದಾರೆ. ಇನ್ನು ಐರ್ಲೆಂಡ್‌ನಿಂದ 7, ಜಿಂಬಾಬ್ವೆಯಿಂದ 6 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹರಾಜಿನಲ್ಲಿ ಖಾಲಿ ಇರೋದೇ ಗರಿಷ್ಠ 66 ಸ್ಥಾನಗಳು. ಈ ಪೈಕಿ 25 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ. ಸೋ ಯಾರೆಲ್ಲಾ ಈ ಆಕ್ಷನ್ ಟೆಸ್ಟ್ ಪಾಸ್ ಆಗ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ. ಇದ್ರ ಮಾಜಿ ವೀರೇಂದ್ರ ಸೆಹ್ವಾಗ್ ಪುತ್ರ ಕೂಡ ಅದೃಷ್ಟಪರೀಕ್ಷೆಗೆ ಇಳೀತಿದ್ದಾರೆ. ಆದ್ರೆ ರಾಹುಲ್ ದ್ರಾವಿಡ್ ಪುತ್ರ ದೂರವೇ ಇದ್ದಾರೆ.
ಮಿನಿ ಆಕ್ಷನ್ ಗೆ ಸೆಹ್ವಾಗ್ ಪುತ್ರ ಎಂಟ್ರಿ.. ದ್ರಾವಿಡ್ ಮಗ ಔಟ್!
ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅಪ್ಪನಂತೆ ಬಲಗೈ ಆರಂಭಿಕ ಬ್ಯಾಟರ್ ಆಗಿದ್ದು ಐಪಿಎಲ್ ಮಿನಿ ಆಕ್ಷನ್ಗೆ ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ. ಅಂಡರ್-19 ಏಷ್ಯಾಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಐದು ಪಂದ್ಯಗಳಿಂದ 361 ರನ್ ಗಳಿಸಿದ್ದಾರೆ. 90.25ರ ಸರಾಸರಿ, 95.50ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನೂ ಪಡೆದಿದ್ರು. ಯುಎಇ ವಿರುದ್ಧ 160 ರನ್ ಸಿಡಿಸಿದ್ದ ಆರ್ಯವೀರ್, ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲೂ 58 ರನ್ ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ಇದೀಗ IPL 2027 ಹರಾಜಿಗೆ 30 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆದ್ರೆ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಮಾತ್ರ ಹೆಸರು ನೋಂದಣಿ ಮಾಡಿಕೊಂಡಿಲ್ಲ. ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡದ ಪರ ಆಡಿದ್ದ ಅನ್ವಯ್ ಮೂರು ಇನ್ನಿಂಗ್ಸ್‌ಗಳಿಂದ 41 ರನ್ ಗಳಿಸಿದ್ದರು. ಹಾಗೇ ಭಾರತ ಅಂಡರ್-19 ತಂಡದ ನಾಯಕ ಲಕ್ಷ್ಯ ರೈಚಂದಾನಿ ಮತ್ತು ಮನಾಲ್ ಚೌಹಾಣ್ ಕೂಡ ಹರಾಜಿನಿಂದ ಹೊರಗುಳಿದಿದ್ದಾರೆ. ಇನ್ನು ಪಾಕಿಸ್ತಾನ ವಿರುದ್ಧದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಕೊನೆಯ ಹಂತದಲ್ಲಿ ಅಜೇಯ 49 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಮೋಹಿತ್ ಉಲ್ವಾ ಕೂಡ IPL ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇವರ ಮೂಲ ಬೆಲೆಯೂ 30 ಲಕ್ಷ ರೂಪಾಯಿ. ಹೀಗೆ ಅಂಡರ್-19 ಏಷ್ಯಾಕಪ್‌ನಲ್ಲಿ ಮಿಂಚಿದ ಯುವ ಆಟಗಾರರು ಐಪಿಎಲ್ ಅಖಾಡದಲ್ಲಿ ಸದ್ದು ಮಾಡೋಕೆ ರೆಡಿಯಾಗ್ತಿದ್ದಾರೆ. ಆದ್ರೆ ಮಿನಿ ಆಕ್ಷನ್ನಲ್ಲಿ ಫ್ರಾಂಚೈಸಿಗಳು ಇವ್ರನ್ನ ಪಿಕ್ ಮಾಡ್ತಾರಾ ಅನ್ನೋದೇ ಇಲ್ಲಿರೋ ಪ್ರಶ್ನೆ.

ನೋಡಿರಿ

