ಆಮ್ ಆದ್ಮಿ ಪಕ್ಷ ಬಿಟ್ಟು ಬಿಜೆಪಿ ಸೇರಿದ ರಾಘವ್ ಚಡ್ಡಾ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯಸಭಾ ಸದಸ್ಯ, ಎಎಪಿ ಉಚ್ಚಾಟಿತ ಸದಸ್ಯ ರಾಘವ್ ಚಡ್ಡಾ ಬಿಜೆಪಿ ಸೇರಿದ್ದಾರೆ. ಚಡ್ಡಾ ಜೊತೆಗೆ ಆಮ್ ಆದ್ಮಿ ಪ್ರಮುಖ ನಾಯಕರಾದ ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಕೂಡ ಬಿಜೆಪಿಗೆ ಸೇರಿದ್ದಾರೆ.
ರಾಘವ್ ಚಡ್ಡಾ ಶುಕ್ರವಾರ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದ್ದಾರೆ. ಹಿರಿಯ ಸಂಸದರಾದ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, “ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3 ನೇ ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: ಗೇಮ್ ಆಡುತ್ತಿದ್ದಾಗ ತಾಯಿ ಮೊಬೈಲ್ ಕಿತ್ತು ಕೊಂಡಿದ್ದಕ್ಕೆ ಮಗ ಸೂಸೈಡ್ – ಪೋಷಕರೇ ಇರಲಿ ನಿಮ್ಮ ಮಕ್ಕಳ ಮೇಲೆ ಎಚ್ಚರ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಡ್ಡಾ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಭರವಸೆ ನೀಡಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಪಕ್ಷವು ಪ್ರಾಮಾಣಿಕ ರಾಜಕೀಯದಿಂದ ದೂರ ಸರಿಯುತ್ತಿದೆ ಎಂದು ಆಮ್ ಆದ್ಮಿ ವಿರುದ್ಧ ಆರೋಪಿಸಿದರು. ಮೇಲ್ಮನೆಯಲ್ಲಿರುವ ಆಮ್ ಆದ್ಮಿ ಪಕ್ಷದ 10 ಸಂಸದರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ ಅವರು ಎಂದು ಹೇಳಿದ್ದಾರೆ. ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ಸಂಸದರದಲ್ಲಿ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜಿಂದರ್ ಗುಪ್ತಾ, ವಿಕ್ರಮ್ ಸಹ್ನಿ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಸೇರಿದ್ದಾರೆ ಎಂದು ಹೇಳಲಾಗಿದೆ.
ರಾಘವ್ ಚಡ್ಡಾ ಆಮ್ ಆದ್ಮಿ ಪರ ಮಾತನಾಡುವುದಿಲ್ಲ ಎಂದು ಆಪ್ ನಾಯಕರು ಆರೋಪ ಮಾಡಿದ್ದರು. ಅರವಿಂದ್ ಕೇಜ್ರಿವಾಲ್ ಜೈಲು ವಾಸ, ಮನೀಶ್ ಸಿಸೋಡಿಯಾ ಜೈಲು ವಾಸ, ಜಾಮೀನಿನ ಮೇಲೆ ಬಿಡುಗಡೆ ಸಂದರ್ಭಗಳಲ್ಲಿ ಆಪ್ ನಾಯಕರ ಪರ ರಾಘವ್ ಚಡ್ಡಾ ಬಹಿರಂಗವಾಗಿ ಎಲ್ಲೂ ಹೇಳಿಕೆ ನೀಡಿಲ್ಲ ಎನ್ನುವ ಅಸಮಾಧಾನವಿತ್ತು. ಇದಾದ ಬಳಿಕ ಇತ್ತೀಗೆಷ್ಟೆ ರಾಜ್ಯಸಭಾ ಡೆಪ್ಯೂಟಿ ಸ್ಥಾನದಿಂದ ವಜಾ ಮಾಡಿತ್ತು.

ನೋಡಿರಿ

