ದೆಹಲಿ ಪಾಲಿಕೆ ಹೈಡ್ರಾಮಾ ಅಂತ್ಯ! – ಆಪ್‌ಗೆ ಮೇಯರ್ ಮಟ್ಟ!

ದೆಹಲಿ ಪಾಲಿಕೆ ಹೈಡ್ರಾಮಾ ಅಂತ್ಯ! – ಆಪ್‌ಗೆ ಮೇಯರ್ ಮಟ್ಟ!

ದೆಹಲಿ ಮಹಾನಗರ ಪಾಲಿಕೆಗೆ ಕೊನೆಗೂ ಮೇಯರ್ ಆಯ್ಕೆಯಾಗಿದೆ. ಕಳೆದ ವರ್ಷ ಡಿಸೆಂಬರ್​​ನಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದು, ಆಮ್ ಆದ್ಮಿ ಪಕ್ಷ 134 ಸ್ಥಾನಗಳನ್ನ ಪಡೆದು ಗೆದ್ದು ಬೀಗಿತ್ತು. ಆದ್ರೆ, ಮೇಯರ್ ಆಯ್ಕೆ ವೇಳೆ ಬಿಜೆಪಿ ಮತ್ತು ಆಪ್​ ಮಧ್ಯೆ ಭಾರಿ ಗಲಾಟೆ ನಡೆದಿತ್ತು. ಜನವರಿ 6, ಜನವರಿ 24 ಮತ್ತು ಫೆಬ್ರವರಿ 6ರಂದು ಒಟ್ಟು ಮೂರು ಬಾರಿಯೂ ಗದ್ದಲ, ಗಲಾಟೆಯಾಗಿ ಮೇಯರ್ ಆಯ್ಕೆಯನ್ನ ಮುಂದೂಡಲಾಗಿತ್ತು. ಅಂತಿಮವಾಗಿ ಇಂದು ಮೇಯರ್ ಸ್ಥಾನಕ್ಕೆ ಮತದಾನ ನಡೆದಿದ್ದು, ಆಪ್​ನ ಶೆಲ್ಲಿ ಒಬೆರಾಯ್ 150 ಮತಗಳನ್ನ ಪಡೆದು ಮೇಯರ್​​ ಪಟ್ಟಕ್ಕೇರಿದ್ದಾರೆ. ಇನ್ನು ಬಿಜೆಪಿಯ ರೇಖಾ ಗುಪ್ತಾ ಕೇವಲ 34 ಮತಗಳನ್ನಷ್ಟೇ ಪಡೆದಿದ್ದಾರೆ. ಇನ್ನು ತಮ್ಮ ಪಕ್ಷದ ಅಭ್ಯರ್ಥಿ ಮೇಯರ್ ಆಗುತ್ತಲೇ, ಗೂಂಡಾಗಳು ಸೋತಿದ್ದಾರೆ. ಜನರು ಗೆದ್ದಿದ್ದಾರೆ ಅಂತಾ ಸಿಎಂ ಕೇಜ್ರಿವಾಲ್ ಟ್ವೀಟ್ ಮಾಡಿದ್ರು.

suddiyaana