ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲಿದ್ದಾರಾ ಅಮೀರ್ ಖಾನ್- ಫ್ಯಾನ್ಸ್ ಗೆ ಹೇಳಿದ್ದೇನು?
ನವದೆಹಲಿ: ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ಟಾಲಿವುಡ್ ನಲ್ಲಿ ಇನ್ನು ಮುಂದೆ ಹೊಸ ರೂಲ್ಸ್- ಹಬ್ಬದ ದಿನಗಳಲ್ಲಿ ತೆಲುಗು ಸಿನಿಮಾ ಮಾತ್ರ ಬಿಡುಗಡೆ!
35 ವರ್ಷಕ್ಕೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗ ಒಂದು ವರ್ಷ ಬಿಡುವು ಪಡೆದುಕೊಳ್ಳಲು ನಿರ್ಧರಿಸಿದ್ದೇನೆ. ಕುಟುಂಬದ ಜತೆ ಇರಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ ನ ಹಿಂದಿ ರಿಮೇಕ್ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಬಾಲಿವುಡ್ ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತಲ್ಲದೇ, ಬಾಕ್ಸ್ ಆಫೀಸ್ ನಲ್ಲಿಯೂ ಕಳಪೆ ಸಾಧನೆ ಮಾಡಿತ್ತು.
ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಳಿಕ ಚಾಂಪಿಯನ್ಸ್ ಚಿತ್ರದ ಕೆಲಸ ಆರಂಭಿಸುವುದಾಗಿ ಸಿನಿಪ್ರೇಮಿಗಳಿಗೆ ತಿಳಿಸಿದ್ದರು.
ಸಿನಿಮಾದಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಿದ್ದರಿಂದ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿಲ್ಲ. ಜೀವನದಲ್ಲಿ ಮತ್ತೇನು ನಡೆಯುತ್ತಿಲ್ಲ ಎಂದು ಅನ್ನಿಸಿತು. ಹಾಗಾಗಿ ಚಿತ್ರರಂಗದಿಂದ ಕೊಂಚ ಕಾಲ ದೂರ ಉಳಿದು ತಾಯಿ, ಮಕ್ಕಳ ಜೊತೆ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.