ಗೌರಿ ಜೊತೆ ಆಮೀರ್ ಖಾನ್ ಮೂರನೇ ಮದುವೆ – ಮಾಜಿ ಪತ್ನಿಯರ ಮುಂದೆ ಬಾಲಿವುಡ್ ನಟನ ವಿವಾಹ

ಗೌರಿ ಜೊತೆ ಆಮೀರ್ ಖಾನ್ ಮೂರನೇ ಮದುವೆ – ಮಾಜಿ ಪತ್ನಿಯರ ಮುಂದೆ ಬಾಲಿವುಡ್ ನಟನ ವಿವಾಹ

ಬಾಲಿವುಡ್ ನಟ ಆಮಿರ್ ಖಾನ್ ಮೂರನೇ ಮದುವೆಯಾಗಿದ್ದಾರೆ.  ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲೇ ಸರಳವಾಗಿ ವಿವಾಹ ಸಮಾರಂಭ ನಡೆದಿದೆ. ಇದೇ ಸ್ಥಳದಲ್ಲಿ ವಿವಾಹ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ಇದನ್ನೂ ಓದಿ:ಜುಲೈ 5ಕ್ಕೆ ಬೆಂಗಳೂರಿನ ಗೌರಿ ಜೊತೆ ಆಮಿರ್‌ ಖಾನ್ 3ನೇ ಮದುವೆ

ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಮಾರಂಭದಲ್ಲಿ ಆಮೀರ್ ಖಾನ್ ಮಾಜಿ ಪತ್ನಿಯರು ಸಾಕ್ಷಿಯಾಗಿದ್ದರು. ಆಮಿರ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲಿ ವಿವಾಹ ಸಮಾರಂಭ ನಡೆಯಿತು. ಸುಮಾರು 150 ಮಂದಿ ಅತಿಥಿಗಳ ಸಮ್ಮುಖದಲ್ಲಿ ಈ ಸರಳ ವಿವಾಹ ನಡೆದಿದೆ. ಕುಟುಂಬದ ಆಪ್ತರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಿದರು.

ಆಮಿರ್ ಖಾನ್ ತಮ್ಮ ಮಾಜಿ ಪತ್ನಿಯರ ಹಾಗೂ ಮೂವರು ಮಕ್ಕಳು  ಸಮಾರಂಭದಲ್ಲಿ ಭಾಗವಹಿಸಿದ್ದರು. ಕುಟುಂಬದ ಎಲ್ಲ ಸದಸ್ಯರ ಸಮ್ಮುಖದಲ್ಲಿ ಹೊಸ ಜೀವನ ಆರಂಭಿಸಲು ದಂಪತಿ ನಿರ್ಧರಿಸಿರುವುದು ವಿಶೇಷವಾಗಿದೆ. ಆಮಿರ್ ಖಾನ್ ಅವರಿಗೆ ಇದು ಮೂರನೇ ವಿವಾಹವಾಗಿದ್ದು, ಗೌರಿ ಸ್ಪ್ರಾಟ್ ಅವರಿಗೆ ಎರಡನೇ ವಿವಾಹವಾಗಿದೆ. ಇಬ್ಬರೂ ಹಲವು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದು, ಬಳಿಕ ಅವರ ಸ್ನೇಹ ಪ್ರೀತಿಯಾಗಿ ಬೆಳೆದಿದೆ ಎನ್ನಲಾಗಿದೆ. ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರು. ತಮ್ಮ ಬಾಲ್ಯ ಮತ್ತು ಶಿಕ್ಷಣದ ಬಹುಭಾಗವನ್ನು ಬೆಂಗಳೂರಿನಲ್ಲೇ ಪೂರ್ಣಗೊಳಿಸಿದ್ದಾರೆ. ಇವರ ತಾಯಿ ರೀಟಾ ಸ್ಪ್ರಾಟ್ ಬೆಂಗಳೂರಿನಲ್ಲಿ ಹೆಸರಾಂತ ಸಲೂನ್ ನಡೆಸುತ್ತಿದ್ದರು.ಗೌರಿ ಅವರು ಬೆಂಗಳೂರಿನ ಬ್ಲೂ ಮೌಂಟೇನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಬಳಿಕ 2004ರಲ್ಲಿ ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ನಲ್ಲಿ ಎಫ್‌ಡಿಎ ಸ್ಟೈಲಿಂಗ್ ಮತ್ತು ಫೋಟೋಗ್ರಫಿ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಆಮಿರ್ ಖಾನ್ 1986ರಲ್ಲಿ ತಮ್ಮ ಬಾಲ್ಯದ ಗೆಳತಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಜುನೈದ್ ಈಗಾಗಲೇ ಬಾಲಿವುಡ್‌ನಲ್ಲಿ ನಟನಾಗಿ ಗುರುತಿಸಿಕೊಂಡಿದ್ದು, ಇರಾ ಖಾನ್ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 16 ವರ್ಷಗಳ ದಾಂಪತ್ಯ ಜೀವನದ ಬಳಿಕ ಆಮಿರ್ ಮತ್ತು ರೀನಾ ದತ್ತಾ 2002ರಲ್ಲಿ ವಿಚ್ಛೇದನ ಪಡೆದರು. ನಂತರ ಆಮಿರ್ ನಿರ್ದೇಶಕಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಆಜಾದ್ ಎಂಬ ಮಗನಿದ್ದು, ನಂತರ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಟ್ಟರೂ ಉತ್ತಮ ಸ್ನೇಹ ಸಂಬಂಧವನ್ನು ಮುಂದುವರಿಸಿಕೊಂಡಿದ್ದಾರೆ.

Sulekha

Leave a Reply

Your email address will not be published. Required fields are marked *