ಶ್ವಾನಗಳಿಗೂ  ಬಂತು ಆಧಾರ್‌ ಕಾರ್ಡ್‌, ಕ್ಯೂ ಆರ್‌ ಕೋಡ್‌ ! – ಸ್ಕ್ಯಾನ್‌ ಮಾಡಿದ್ರೆ ಸಿಗುತ್ತೆ ಕಂಪ್ಲೀಟ್‌ ಮಾಹಿತಿ  

ಶ್ವಾನಗಳಿಗೂ  ಬಂತು ಆಧಾರ್‌ ಕಾರ್ಡ್‌, ಕ್ಯೂ ಆರ್‌ ಕೋಡ್‌ ! – ಸ್ಕ್ಯಾನ್‌ ಮಾಡಿದ್ರೆ ಸಿಗುತ್ತೆ ಕಂಪ್ಲೀಟ್‌ ಮಾಹಿತಿ  

ಕ್ಯೂ ಆರ್‌ ಕೋಡ್‌, ಆಧಾರ್‌ ಕಾರ್ಡ್‌ ಪ್ರತಿಯೊಬ್ಬರ ಬಳಿಯೂ ಇದೆ. ಅದರಿಂದಲೇ ನಾವು ದೇಶದ ಪ್ರಜೆ ಅಂತಾ ಗೊತ್ತಾಗುವುದು. ಆದರೆ ಎಂದಾದರೂ ಪ್ರಾಣಿಗಳಿಗೂ ಕ್ಯೂ ಆರ್‌ ಕೋಡ್‌, ಆಧಾರ್‌ ಕಾರ್ಡ್‌ ಇದೆ ಅಂತಾ ಎಂದಾದರೂ ಕೇಳಿದ್ದೀರಾ? ಇಲ್ಲೊಬ್ಬ ಶ್ವಾನ ಪ್ರಿಯ ನಾಯಿಗಳಿಗೆ ಆಧಾರ್‌ ಕಾರ್ಡ್‌ ಕ್ಯೂ ಆರ್‌ ಕೋಡ್‌ ಕಾಲರ್‌ ತಯಾರಿಸಿದ್ದಾರೆ. ಇದನ್ನು ಸ್ಕ್ಯಾನ್‌ ಮಾಡಿದ್ರೆ ಸಾಕು ನಾಯಿಗಳ ಕಂಪ್ಲೀಟ್‌ ಮಾಹಿತಿ ಬರುತ್ತೆ.

ನಿಷ್ಠಾವಂತ ಪ್ರಾಣಿ ಎಂದರೆ ಅದು ನಾಯಿ. ಅದು ಎಂದಿಗೂ ತನಗೆ ಸಹಾಯ ಮಾಡಿದವರನ್ನು ಮರೆಯುವುದಿಲ್ಲ. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮೊಂದಿಗೆ ಇರುತ್ತದೆ. ಅಂತಹ ಮುಗ್ಧ ಮನಸ್ಸುಗಳ ಸುರಕ್ಷತೆಗಾಗಿ ಮುಂಬೈ ಮೂಲದ ಅಕ್ಷಯ್​​​ ರಿಡ್ಲಾನ್(24) ಎಂಬ ಇಂಜಿನಿಯರ್ ಒಬ್ಬರು ಕ್ಯೂಆರ್ ಕೋಡ್ ಕಾಲರ್ ತಯಾರಿಸಿದ್ದಾರೆ. ಇದು ಶ್ವಾನಗಳಿಗೆ ಆಧಾರ್ ಕಾರ್ಡ್​ನಂತಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಶ್ವಾನದ ಕುರಿತಾ ಎಲ್ಲಾ ಮಾಹಿತಿಗಳು ದೊರೆಯುತ್ತವೆ.

ಇದನ್ನೂ ಓದಿ: ಪ್ರೀತಿಯ ನಾಯಿ ಬರ್ತಡೇಗೆ ಭರ್ಜರಿ ಗಿಫ್ಟ್ – ಬರೋಬ್ಬರಿ ₹16 ಲಕ್ಷದ ಮನೆ ಕಟ್ಟಿದ ಯುವಕ!

ಅಕ್ಷಯ್‌ ತಯಾರಿಸಿದ ಶ್ವಾನಗಳ ಆಧಾರ್‌ ಕಾರ್ಡ್‌ ಹಾಗೂ ಕ್ಯೂ ಆರ್‌ ಕೋಡ್‌ ಕಾಲರ್‌ ಗಳನ್ನು ಮಾರಾಟ ಮಾಡುತ್ತಾರೆ. ಈ ಆಧಾರ್‌ ಕಾರ್ಡ್‌ ಹಾಗೂ ಕ್ಯೂ ಆರ್‌ ಕೋಡ್‌ ಬೇಕಾದರೆ ತಮ್ಮ ಮುದ್ದಿನ ಶ್ವಾನಗಳ ವಿವರಗಳನ್ನು ನೀಡಿದರೆ ಇದನ್ನು ತಯಾರಿಸಿ ಕೊಡುತ್ತಾರೆ. ಅಕ್ಷಯ್‌ ಅವರು ಆಧಾರ್‌ ಕಾರ್ಡ್‌ ಹಾಗೂ ಕ್ಯೂ ಆರ್‌ ಕೋಡ್‌ ಕಾಲರ್‌ ಗೆ ಬೆಲೆ ನಿಗದಿ ಪಡಿಸಿದ್ದಾರೆ. ಇದರ ಬೆಲೆ ಕೇವಲ 100 ರೂಪಾಯಿ.

ಅಕ್ಷಯ್‌ ಶ್ವಾನಗಳಿಗೆ ಕ್ಯೂಆರ್ ಕೋಡ್ ಮಾಡಿಸುವ ಉಪಾಯ ಹೊಳೆಯಲು ಕಾರಣವೇನು ಎಂಬುವುದನ್ನು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಕಾಣೆಯಾಗಿದ್ದ ತನ್ನ ಪ್ರೀತಿಯ ಕಾಳು ಎಂಬ ಹೆಸರಿನ ಶ್ವಾನ ಇದಕ್ಕೆ ಮೂಲ ಸ್ಪೂರ್ತಿ ಎಂದು ಹೇಳಿದ್ದಾರೆ.

ಮನೆಯ ಮದುವೆ ಸಮಾರಂಭದ ಸಮಯದಲ್ಲಿ ಪಟಾಕಿಯ ಸದ್ದಿಗೆ ಓಡಿ ಹೋಗಿದ್ದ ಕಾಳು ಮತ್ತೆ ಸಿಗಲೇ ಇಲ್ಲ. ನಾನು ಅವನನ್ನು ಹುಡುಕಲು ಪ್ರಯತ್ನಿಸಿದೆ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಸಮುದಾಯಗಳನ್ನು ತಲುಪಿದೆ ಆದರೆ ಎಲ್ಲವೂ ವ್ಯರ್ಥವಾಯಿತು. ಕಾಳು ಮತ್ತೆ ಸಿಗಲಿಲ್ಲ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ನಾಯಿಗಳಿಗೆ ಆಧಾರ್ ಕಾರ್ಡ್ ರಚಿಸುವ ಪ್ರಯತ್ನ ಇದಾಗಿದೆ. ಈ QR ಕೋಡ್ ಶ್ವಾನದ ಹೆಸರು, ವೈದ್ಯಕೀಯ ದಾಖಲೆ ಮತ್ತು ಇತಿಹಾಸ ಸೇರಿದಂತೆ ಮಾಹಿತಿಯನ್ನು ಒಳಗೊಂಡಿರುತ್ತದೆ ಮತ್ತು ಪ್ರಾಣಿಗಳ ಪಾಲಕರ ಸಂಪರ್ಕ ವಿವರಗಳನ್ನು ಸಹ ಒದಗಿಸುತ್ತದೆ ಎಂದು ಅಕ್ಷಯ್‌ ಹೇಳಿದ್ದಾರೆ.

suddiyaana