ಮಚ್ಚು, ಲಾಂಗ್, ಚಾಕು ಖರೀದಿಗೆ ಆಧಾರ್ ಕಡ್ಡಾಯ – ಪೊಲೀಸರು ಹೊಸ ರೂಲ್ಸ್ ಮಾಡಿದ್ದೇಕೆ..?

ಮಚ್ಚು, ಲಾಂಗ್, ಚಾಕು ಖರೀದಿಗೆ ಆಧಾರ್ ಕಡ್ಡಾಯ – ಪೊಲೀಸರು ಹೊಸ ರೂಲ್ಸ್ ಮಾಡಿದ್ದೇಕೆ..?

purchase-of-any-weapons-Aadhaar-card-is-mandatory. ಕಾನೂನಿಗೂ ಹೆದರಲ್ಲ.. ಪೊಲೀಸ್ರಿಗೂ ಕ್ಯಾರೇ ಅನ್ನಲ್ಲ.. ಜೈಲಿಗೆ ಹಾಕಿದ್ರೂ ಕೇರ್ ಮಾಡ್ತಿಲ್ಲ. ಮಚ್ಚು, ಲಾಂಗ್, ತಲ್ವಾರ್ ಹಿಡಿದು ನಡುರೋಡಲ್ಲೇ ಅಟ್ಟಹಾಸ ಮೆರೀತಿದ್ದಾರೆ. ಇತ್ತೀಚೆಗಂತೂ ಅಪರಾಧ ಕೃತ್ಯಗಳು ಕಂಟ್ರೋಲ್​ಗೇ ಸಿಗದಂತಾಗಿದೆ. ಹೀಗಾಗಿ ಕ್ರೈಂ ರೇಟ್ ಕಡಿಮೆ ಮಾಡಲು ಹೊಸ ರೂಲ್ಸ್​ನೇ ಜಾರಿ ಮಾಡಿದ್ದಾರೆ.

ಇದನ್ನೂ ಓದಿ : ಟೀ ಎಸ್ಟೇಟ್​ ನಲ್ಲಿ ಹುಲಿರಾಯನ ರೌಂಡ್ಸ್ – ಜೀಪ್​ ನಲ್ಲಿ ಹೋದವರಿಗೆ ಆಗಿದ್ದೇನು..?

ಹೌದು. ಇನ್ಮುಂದೆ ಮಚ್ಚು, ಕತ್ತಿ, ತಲವಾರು, ಕುಡುಗೋಲು ಸೇರಿದಂತೆ ಯಾವುದೇ ಆಯುಧಗಳ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ್ದಾರೆ. ಹಾಗೇನಾದ್ರೂ ಆಧಾರ್ ಕಾರ್ಡ್ ಪ್ರತಿ ನೀಡದೇ ಇದ್ದಲ್ಲಿ ಅಂಥವ್ರಿಗೆ ಯಾವುದೇ ಆಯುಧಗಳನ್ನು ನೀಡಬಾರದು ಎಂದು ಪುಣೆ ಪೊಲೀಸರು ಅಂಗಡಿ ಮಾಲೀಕರು ಮತ್ತು ಗ್ರಾಹಕರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಮಚ್ಚು, ತಲವಾರುಗಳನ್ನು ಹಿಡಿದುಕೊಂಡು ಪುಣೆಯಲ್ಲಿ ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚು ತಿರುಗಾಡುತ್ತಿದ್ದು, ಜನರು ಭಯದಿಂದ ಓಡಾಡುವಂತಾಗಿದೆ. ಹೀಗಾಗಿ ಇಂಥ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.

ಕೃಷಿ ಉಪಕರಣ, ದೊಡ್ಡ ಚಾಕು, ತೆಂಗಿನ ಕಾಯಿ ಒಡೆಯಲು ಬಳಸುವಂತಹ ಉಪಕರಣಗಳು ಸೇರಿದಂತೆ ಯಾವುದೇ ರೀತಿಯ ಬಳಕೆಗೆ ಆಯುಧಗಳನ್ನು ಪಡೆದುಕೊಂಡರೂ ಆಧಾರ್ ಕಾರ್ಡ್ ವಿವರಗಳನ್ನು ಕಡ್ಡಾಯವಾಗಿ ಪಡೆಯಬೇಕೆಂದು(purchase-of-any-weapons-Aadhaar-card-is-mandatory.) ಪೊಲೀಸರು ಮಾರಾಟಗಾರರಿಗೆ ಸೂಚಿಸಿದ್ದಾರೆ. ಪುಣೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನಕಾಯಿ ಸುಲಿಯುವ ಮಚ್ಚು, ಚಾಕು ಸೇರಿದಂತೆ ವಿವಿಧ ಆಯುಧಗಳಿಂದ ದಾಳಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಇನ್ಮುಂದೆ ಯಾರಾದರೂ ಯಾವುದೇ ಮಾರಕಾಸ್ತ್ರಗಳನ್ನು ಖರೀದಿಸಿದರೆ ಅದರ ವಿವರ ಮತ್ತು ಅವರ ಆಧಾರ್ ಕಾರ್ಡ್‌ನ್ನು ನೋಂದಣಿ ಮಾಡಬೇಕು. ಆ ಮೂಲಕ ದುಷ್ಕೃತ್ಯಗಳಲ್ಲಿ ತೊಡಗುವ ಅಪರಾಧಿಗಳನ್ನು ಮಟ್ಟ ಹಾಕಲು ಹೊಸ ಹೆಜ್ಜೆ ಇಟ್ಟಿದ್ದಾರೆ.

ಪುಣೆ ಪೊಲೀಸ್ ಕಮಿಷನರ್ ರಿತೇಶ್ ಕುಮಾರ್  ಮಾರಕಾಸ್ತ್ರ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರಿಂದ ಸುಮಾರು 100ಕ್ಕೂ ಹೆಚ್ಚು ಮಚ್ಚುಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೇ ಇಂತಹ ಆಯುಧಗಳನ್ನು ಉಪಯೋಗಿಸಿ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಕಣ್ಣಿಡುವ ಸಲುವಾಗಿ ಸುಮಾರು 450 ಪೊಲೀಸರನ್ನು ವಿವಿಧ ಭಾಗಗಳಲ್ಲಿ ನಿಯೋಜಿಸಿದ್ದಾರೆ. ಆಯುಧಗಳನ್ನು ಮಾರಾಟ ಮಾಡುವ ಅಂಗಡಿಗಳ ವಿವರಗಳನ್ನೂ ದಾಖಲಿಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.

suddiyaana