‘ಉರಿಗೌಡ, ನಂಜೇ ಗೌಡ’ ಹೆಸರಿನಲ್ಲಿ ಆಧಾರ್ ಕಾರ್ಡ್ – ತಂದೆ ಸಿಟಿ ರವಿ, ತಾಯಿ ಅಶ್ವತ್ಥ ನಾರಾಯಣ!

‘ಉರಿಗೌಡ, ನಂಜೇ ಗೌಡ’ ಹೆಸರಿನಲ್ಲಿ ಆಧಾರ್ ಕಾರ್ಡ್ – ತಂದೆ ಸಿಟಿ ರವಿ, ತಾಯಿ ಅಶ್ವತ್ಥ ನಾರಾಯಣ!

ಬೆಂಗಳೂರು: ವಿಧಾನಸಭಾ ಚುನಾವಣಾ ಹೊತ್ತಲ್ಲೇ ರಾಜ್ಯ ರಾಜಕೀಯದಲ್ಲಿ ಈಗ ‘ಉರಿಗೌಡ, ನಂಜೇ ಗೌಡ’ ವಿಚಾರ ಸಂಚಲನ ಸೃಷ್ಟಿಸಿದೆ. ಟಿಪ್ಪು ಸುಲ್ತಾನನನ್ನ ಈ ಇಬ್ಬರೇ ಕೊಂದಿದ್ದಾರೆ ಎಂದು ಬಿಜೆಪಿ ಹೇಳುತ್ತಿದ್ದಾರೆ. ಇದೀಗ ಈ ಹೆಸರು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದು, ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸಾಧ್ಯವಾದಷ್ಟು ವಾಗ್ದಾಳಿ ನಡೆಸುತ್ತಿದೆ.

ಇದನ್ನೂ ಓದಿ: ಉರಿಗೌಡ, ನಂಜೇಗೌಡರೇ ಟಿಪ್ಪುವನ್ನ ಕೊಂದರಾ – ಮಂಡ್ಯ ಪುಸ್ತಕದಲ್ಲಿ ಸಿಕ್ಕಿತಾ ಸಾಕ್ಷಿ..?

ಈ ವಿಚಾರವಾಗಿ ಸಿದ್ದರಾಮಯ್ಯ ಬೆಂಬಲಿಗರು ಉರಿಗೌಡ, ನಂಜೇಗೌಡ ಹೆಸರಿನ ಆಧಾರ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಈ ಆಧಾರ್ ಕಾರ್ಡ್ ನಲ್ಲಿ ಇವರಿಬ್ಬರ ತಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ  ಮತ್ತು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಾಯಿ ಎಂದು ನಮೂದಿಸಿ  ವ್ಯಂಗ್ಯ ಮಾಡಲಾಗಿದೆ.

ಕೋಲಾರ ನಮ್ಮೂರು ಸಿದ್ದರಾಮಯ್ಯ ನಮ್ಮೋರು ತಂಡ ಫೇಸ್  ಬುಕ್ ಖಾತೆಯಲ್ಲಿ ಉರಿಗೌಡ ನಂಜೇಗೌಡ ಹೆಸರಿನ ಆಧಾರ್ ಕಾರ್ಡ್ ಬಿಡುಗಡೆ ಮಾಡಿದೆ. ‘ಅನೇಕ ಸಂಶೋಧನೆ ಬಳಿಕ ಉರಿಗೌಡ, ನಂಜೇಗೌಡರ ಆಧಾರ್ ಕಾರ್ಡ್ ಸಿಕ್ಕಿದೆ’ ಎಂದು ಈ ಪೋಸ್ಟ್ ಗೆ ಟೈಟಲ್ ನೀಡಿದ್ದಾರೆ.

ಆಧಾರ್ ಕಾರ್ಡ್ ನಲ್ಲಿ ಏನೇನಿದೆ?

ನಂಜೇಗೌಡ, ನಂಜೇ ಗೌಡ ಆಧಾರ್ ಕಾರ್ಡ್​ನಲ್ಲಿ ಸಿಟಿ ರವಿ, ಅಶ್ವತ್ಥ ನಾರಾಯಣ ಅವರನ್ನೇ ತಂದೆ-ತಾಯಿ ಎಂದು ಉಲ್ಲೇಖಿಸಲಾಗಿದ್ದು, ಇಬ್ಬರ ಹೆಸರಿನ ಆಧಾರ್ ಕಾರ್ಡ್ ನಂಬರ್ ಒಂದೇ ಆಗಿದೆ.

ತಾಯಿ: ಅಶ್ವತ್ಥ ನಾರಾಯಣ

ತಂದೆ: ಸಿಟಿ ರವಿ

ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ

ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರ

ಆಧಾರ್ ಸಂಖ್ಯೆ: 420 420 420 420

suddiyaana