ರೀಲ್ಸ್ ಮಾಡಿದ ಸುಂದರಿಗೆ ಶಾಕ್ – ₹17 ಸಾವಿರ ದಂಡ ಹಾಕಿದ್ದೇಕೆ ಪೊಲೀಸರು..?

ರೀಲ್ಸ್ ಮಾಡಿದ ಸುಂದರಿಗೆ ಶಾಕ್ – ₹17 ಸಾವಿರ ದಂಡ ಹಾಕಿದ್ದೇಕೆ ಪೊಲೀಸರು..?

ಇವಾಗಂತೂ ಸೋಶಿಯಲ್ ಮೀಡಿಯಾ ಜಮಾನ. ಅದ್ರಲ್ಲೂ ರೀಲ್ಸ್ ಮಾಡೋರಿಗಂತೂ ಲೆಕ್ಕವೇ ಇಲ್ಲ ಬಿಡಿ. ಕುಂತಲ್ಲಿ, ನಿಂತಲ್ಲಿ, ಊಟ ಮಾಡುವಾಗ, ನಿದ್ದೆ ಮಾಡುವಾಗ ಅಷ್ಟೇ ಯಾಕೆ ಶವದ ಮುಂದೆಯೂ ರೀಲ್ಸ್ ಮಾಡಿ ತಮ್ಮ ಹುಚ್ಚಾಟ ತೋರುತ್ತಾರೆ. ಹೀಗೆ ಯುವತಿಯೊಬ್ಬಳು ರಸ್ತೆಯಲ್ಲಿ ವೈಯ್ಯಾರ ತೋರಿಸೋಕೆ ಹೋಗಿ ಪೊಲೀಸರಿಗೆ 17 ಸಾವಿರ ರೂಪಾಯಿ ದಂಡ ಕಟ್ಟಿದ್ದಾರೆ.

ಇದನ್ನೂ ಓದಿ : ಫಾರ್ಮ್ ಹೌಸ್​ನಲ್ಲಿ ವಿದೇಶಿ ಹಕ್ಕಿಗಳು – ನಟ ದರ್ಶನ್ ವಿರುದ್ಧ ಕೇಸ್ ದಾಖಲು..!

ರೀಲ್ಸ್ ಮಾಡೋಕೆ ಜನ ಮಾಡೋ ಕಸರತ್ತು ಒಂದೆರಡಲ್ಲ. ಕಂಟೆಂಟ್​ ಹುಡುಕಾಟದ ಜೊತೆಗೆ ಅದಕ್ಕೆ ಪೂರಕವಾದ ಜಾಗಗಳ ಹುಡುಕಾಟದಲ್ಲಿಯೂ ಬ್ಯುಸಿ ಆಗಿರುತ್ತಾರೆ. ಇಂಥ ಹುಡುಕಾಟದ ಮಧ್ಯೆಯೇ ಏನಾದರೂ ಒಂದು ಎಡವಟ್ಟು ಆಗುವುದು ಸಾಮಾನ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ಕೂಡ ಇದಕ್ಕೆ ಸಾಕ್ಷಿಯಾಗಿದೆ.  ವೈಶಾಲಿ ಚೌಧರಿ ಎಂಬ ಯುವತಿ ತನ್ನ ಕಾರನ್ನು ಹೆದ್ದಾರಿಯ ಮಧ್ಯದಲ್ಲಿ ನಿಲ್ಲಿಸಿ ವಿಡಿಯೋ ಚಿತ್ರೀಕರಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.  ಪರಿಣಾಮವಾಗಿ 17,000 ರೂಪಾಯಿ ದಂಡವನ್ನೂ ತೆತ್ತಿದ್ದಾಳೆ.

ಲಕ್ಷಾಂತರ ಜನ ಇಂದು ರೀಲ್ಸ್​ಗಳ ಲೋಕದಲ್ಲಿ ಮುಳುಗಿ ಹೋಗುತ್ತಿದ್ದಾರೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಬರೀ ಲೈಕ್ಸ್​, ಶೇರ್​ಗಳಷ್ಟೇ ಸಿಗದೆ ನಿಯಮ ಮೀರಿದಲ್ಲಿ ಕೆಲವೊಮ್ಮೆ ದಂಡವೂ ಸಿಗುತ್ತದೆ ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಗಾಝಿಯಾಬಾದ್​ನ ಇನ್​ಸ್ಟಾಗ್ರಾಂ ಬಳಕೆದಾರರಾದ ವೈಶಾಲಿ ಚೌಧರಿ ರೀಲ್ಸ್ ಮಾಡಿ ದಂಡ ತೆತ್ತಿದ್ದಾಳೆ.  ರಸ್ತೆ ಸುರಕ್ಷತೆ ನಿಯಮಗಳ ಉಲ್ಲಂಘನೆಗಾಗಿ ಈಕೆಗೆ ಗಾಝಿಯಾಬಾದ್​ ಪೊಲೀಸರು ದಂಡ ವಿಧಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ 6.5 ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿರುವ ವೈಶಾಲಿ ಚೌಧರಿ ಹೆದ್ದಾರಿಯ ಮಧ್ಯೆ ಕಾರು ನಿಲ್ಲಿಸಿಕೊಂಡು ವಿವಿಧ ಸ್ಟೈಲ್​ಗಳಲ್ಲಿ ವಿಡಿಯೋ ಶೂಟ್ ಮಾಡಿ ಅದನ್ನ ಇನ್​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ಧಾರೆ. ಈ ಘಟನೆ ಸಾಹಿಬಾಬಾದ್​ನಲ್ಲಿ ನಡೆದಿದೆ. ಏನೇ ಹೇಳಿ ರೀಲ್ಸ್​ಗಾಗಿ ಜನ ರೂಲ್ಸ್ ಮರೀತಿದ್ದು, ತಮ್ಮ ಪ್ರಾಣಕ್ಕೂ ಸಂಚಕಾರ ತಂದುಕೊಳ್ತಿದ್ದಾರೆ. ಹೀಗಾಗಿ ನೀವು ಇಂಥಾ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಿ.

suddiyaana