ಭೂತದ ಜೊತೆಯಲ್ಲೇ ಬೆಳೆದು ದೊಡ್ಡವಳಾದ ಯುವತಿ – ಮನೆಯಲ್ಲಿ ಪಿಶಾಚಿ ಜೊತೆ ಸೇರಿ ಲಕ್ಷ ಲಕ್ಷ ಸಂಪಾದನೆ..!

ಭೂತದ ಜೊತೆಯಲ್ಲೇ ಬೆಳೆದು ದೊಡ್ಡವಳಾದ ಯುವತಿ – ಮನೆಯಲ್ಲಿ ಪಿಶಾಚಿ ಜೊತೆ ಸೇರಿ ಲಕ್ಷ ಲಕ್ಷ ಸಂಪಾದನೆ..!

ಆ ಮನೆಯಲ್ಲಿ ಭೂತವಿದೆ ಎಂಬ ಗಾಳಿ ಸುದ್ದಿ ಹಬ್ಬಿದರೂ ಕೂಡಾ ಜನ ಆ ಕಡೆ ತಲೆ ಹಾಕಿ ಮಲುಗುವುದೇ ಇಲ್ಲ. ಆ ಜಾಗವನ್ನು ವಿಚಿತ್ರವಾಗಿ ನೋಡ್ತಾರೆ. ಅಲ್ಲಿ ಭೂತ ನೋಡಿದ್ದೇನೆ, ನನಗೆ ಭೂತ ಕಾಣುತ್ತೆ, ಭೂತದ ಜೊತೆ ನಾನಿರ್ತೇನೆ ಅಂತಾ ಏನಾದರೂ ಹೇಳಿದ್ರೋ, ಇವರಿಗೆ ಹುಚ್ಚು ಹಿಡಿದಿರಬೇಕು ಅಂತಾರೆ. ಆದರೆ, ಇಲ್ಲೊಬ್ಬ ಯುವತಿಯಿದ್ದಾಳೆ. ಈಕೆ ಭೂತದ ಜೊತೆಯಲ್ಲೇ ವಾಸವಾಗಿದ್ದಾಳೆ. ಭೂತದಿಂದಲೇ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ.

ಇದನ್ನೂ ಓದಿ: ಸಾಯಲು ಎರಡು ದಿನ ಡೆಡ್‌ಲೈನ್ ಕೊಟ್ಟ ದೆವ್ವ – ಭೂತ ಹೇಳಿದ ರೀತಿಯಲ್ಲೇ ಜೀವ ಕಳೆದುಕೊಂಡ ಮಹಿಳೆ..!

ಅಮೆರಿಕದ ವಾಷಿಂಗ್ಟನ್ ನ ನಿವಾಸಿ ಅಮಂಡಾ ಪೌಲ್ಸನ್ ಭೂತಗಳಿರುವ ಮನೆಯಲ್ಲಿ ವಾಸವಾಗಿದ್ದಾಳೆ. ಅಮಂಡಾ ವೃತ್ತಿಯಲ್ಲಿ ಸಂಶೋಧಕಿ ಮತ್ತು ತನಿಖಾಧಿಕಾರಿ. ಅವಳು ಅತೀಂದ್ರಿಯ ಶಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಮಾಡ್ತಾಳೆ. ಅಮಂಡಾಗೆ ಏಳು ವರ್ಷವಿದ್ದಾಗ ಮೊದಲ ಬಾರಿ ಭೂತದ ಬಗ್ಗೆ ಅನುಭವವಾಗಿದೆ. ಆಕೆ ಆಗ ಮೊಂಟಾನಾದಲ್ಲಿ ದೆವ್ವದ ಮನೆಯಲ್ಲಿ ವಾಸವಾಗಿದ್ದಳು. ಆಕೆಯ ಪ್ರಕಾರ ಗೊಂಬೆ, ರಾತ್ರಿ ಸಮಯದಲ್ಲಿ ತಾನಾಗಿಯೇ ಅಲುಗಾಡ್ತಿತ್ತಂತೆ. ಮನೆಯ ಭಯಾನಕ ನೆಲಮಾಳಿಗೆಯ ಬಗ್ಗೆ ದುಃಸ್ವಪ್ನಗಳು ಬೀಳ್ತಿದ್ದವಂತೆ. ಆ ಸಮಯದಲ್ಲಿ ನಾನು ಈ ಬಗ್ಗೆ ತುಂಬಾ ಹೆದರುತ್ತಿದ್ದೆ ಎನ್ನುವ ಅಮಂಡಾ, ೧೮ನೇ ವರ್ಷವಾಗ್ತಿರುವ ವೇಳೆ ಇದನ್ನು ಎಂಜಾಯ್ ಮಾಡಲು ಶುರು ಮಾಡಿದ್ದಳಂತೆ. ಭೂತಗಳನ್ನು ಹುಡುಕುವ ಕೆಲಸ ಮಾಡ್ತೇನೆ ಎಂದು ನಿರ್ಧರಿಸಿಕೊಂಡ ಅಮಂಡಾ, ಭೂತಗಳ ಬಗ್ಗೆ ಹೆಚ್ಚೆಚ್ಚು ಜ್ಞಾನ ಪಡೆಯುವ ಪ್ರಯತ್ನಕ್ಕೆ ಮುಂದಾದಳಂತೆ. ಭೂತಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದ ಅಮಂಡಾ ಸಿನಿಮಾಗಳನ್ನು ಕೂಡ ವೀಕ್ಷಣೆ ಮಾಡಲು ಶುರು ಮಾಡಿದ್ದಳು. ಅಮಂಡಾ ಮೊದಲ ಬಾರಿ ಹೈಸ್ಕೂಲಿನಲ್ಲಿರುವಾಗ ಓಯಿಜಾ ಬೋರ್ಡ್ ಬಳಸಲು ಶುರು ಮಾಡಿದ್ದಳಂತೆ. ಕೈನಲ್ಲಿ ಮೊಬೈಲ್ ಇರಲಿಲ್ಲ. ಕರೆಂಟ್ ಇರಲಿಲ್ಲ. ಸ್ನೇಹಿತರ ಜೊತೆ ಇದನ್ನು ಬಳಕೆ ಮಾಡಿದ್ದಳಂತೆ. ಆ ವೇಳೆ ಬರೀ ಮೇಣದಬತ್ತಿ ಮಾತ್ರ ಉರಿತಾ ಇತ್ತು. ಆರಂಭ ಮಾಡ್ತಿದ್ದ ಹಾಗೆ ಇವರಿಗೆ ಉತ್ತರ ಸಿಕ್ಕಿತ್ತಂತೆ. ೧೮೦೦ ದಶಕದ ವ್ಯಕ್ತಿಯೊಬ್ಬರ ಆತ್ಮ ಬಂದಿತ್ತಂತೆ. ಅನೇಕರು ಇದನ್ನು ನಂಬುವುದಿಲ್ಲ ಎನ್ನುವ ಅಮಂಡಾ, ಆಸಕ್ತಿಯನ್ನೇ ಕೆಲಸ ಮಾಡಿಕೊಂಡಿದ್ದಾಳೆ. ಆದರೆ, ಅನೇಕರು ಅಮಂಡಾ ಕೆಲಸವನ್ನು ಟ್ರೋಲ್ ಮಾಡ್ತಾರೆ. ಆದ್ರೆ ನಾನು ಇದ್ಯಾವುದಕ್ಕೂ ನಿಲ್ಲೋದಿಲ್ಲ. ನನಗೆ ಭೂತಗಳನ್ನು ಹುಡುಕುವುದ್ರಲ್ಲಿ ಆಸಕ್ತಿ ಇದೆ. ನನಗೆ ಈ ಕೆಲಸ ಮಾಡಿದಾಗ ಖುಷಿ ಸಿಗುತ್ತದೆ. ಹಾಗಾಗಿಯೇ ನಾನು ಈ ಕೆಲಸ ಮಾಡ್ತಾನೆ. ಜನರಿಗೆ ಇದ್ರ ಮೇಲೆ ವಿಶ್ವಾಸ ಮೂಡಿದ್ರೆ ಅವರು ಕೂಡ ಸಂತುಷ್ಟಿಗೊಳ್ತಾರೆ. ಅವರಿಗೂ ಇಂಥ ಕೆಲಸ ಮಾಡೋದ್ರಿಂದ ಖುಷಿ ಸಿಗುತ್ತದೆ ಎನ್ನುತ್ತಾಳೆ ಅಮಂಡಾ.

Sulekha