ಗಂಡ ಅತಿಯಾಗಿ ಪ್ರೀತಿಸುವುದೇ ಹಿಂಸೆಯಂತೆ! – ಸಿಲ್ಲಿ ಕಾರಣ ಕೊಟ್ಟು ವಿಚ್ಛೇದನಕ್ಕೆ ಮಂದಾದ ಯುವತಿ

ಗಂಡ ಅತಿಯಾಗಿ ಪ್ರೀತಿಸುವುದೇ ಹಿಂಸೆಯಂತೆ! – ಸಿಲ್ಲಿ ಕಾರಣ ಕೊಟ್ಟು ವಿಚ್ಛೇದನಕ್ಕೆ ಮಂದಾದ ಯುವತಿ

ಗಂಡ – ಹೆಂಡತಿ ಮಧ್ಯೆ ಯಾವ ಕಾರಣಕ್ಕೆ ಜಗಳ ಪ್ರಾರಂಭವಾಗುತ್ತೆ ಅಂತಾ ಹೇಳಲು ಸಾಧ್ಯವಿಲ್ಲ. ಈಗ ಖುಷಿ ಖುಷಿಯಾಗಿ ಜೋಡಿ ಕೆಲವೇ ಹೊತ್ತಲ್ಲಿ ದೊಡ್ಡ ರಾದ್ಧಾಂತ ಮಾಡಿಬಿಡುತ್ತಾರೆ. ಈ ಸಣ್ಣ ಪುಟ್ಟ ಜಗಳ ಕೆಲವೊಂದು ಬಾರಿ ಕೋರ್ಟ್‌ ಮೆಟ್ಟಿಲೇರುವುದು ಇದೆ. ಗಂಡ ನನ್ನ ಪ್ರೀತಿಸಲ್ಲ, ಹೊಡಿತಾನೆ ಬಡಿತಾನೆ, ಬೇರೆ ಹೆಣ್ಮಕ್ಕಳನ್ನ ಪ್ರೀತಿ ಮಾಡ್ತಾನೆ, ನನ್ನ ಗೌರವಿಸಲ್ಲ ಅಂತಾ ಕಾರಣ ನೀಡಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರೆ. ಆದರೆ ಇಲ್ಲೊಬ್ಬಳು ತನ್ನ ಗಂಡ ನನ್ನನ್ನು ಅತಿಯಾಗಿ ಪ್ರೀತಿಸುತ್ತಾನೆ, ಜಗಳ ಮಾಡಲ್ಲ ಅಂತಾ ಡಿವೋರ್ಸ್‌ ನೀಡಲು ಮುಂದಾಗಿರುವ ವಿಚಿತ್ರ ಘಟನೆ ನಡೆದಿದೆ.

ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳು ತನ್ನ ಗಂಡ ತನ್ನನ್ನು ತುಂಬಾ ಪ್ರೀತಿಸಬೇಕು. ಹೆಚ್ಚು ಮುದ್ದು ಮಾಡಬೇಕು ಅಂತಾ ಬಯಸುತ್ತಾರೆ. ಬೇರೆ ಯುವತಿಯರೊಂದಿಗೆ ಸ್ವಲ್ಪ ಜಾಸ್ತಿ ಮಾತಾಡಿದ್ರು ಮುಖ ಊದಿಸಿಕೊಳ್ಳುತ್ತಾರೆ. ಆತನೊಂದಿಗೆ ಜಗಳ ಮಾಡುತ್ತಾರೆ. ಆದ್ರೆ ಇಲ್ಲೊಬ್ಬಳಿಗೆ ಗಂಡ ಹೆಚ್ಚು ಪ್ರೀತಿಸುತ್ತಿರುವುದು ಹಿಂಸೆ ಅನ್ನಿಸುತ್ತಿದೆಯಂತೆ. ತನ್ನ ಗಂಡ ತುಂಬಾ ಪ್ರೀತಿ ಮಾಡ್ತಾನೆ, ಜಗಳ ಮಾಡಲ್ಲ ಎಂಬ ಕಾರಣಕ್ಕೆ ಗಂಡನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ ಎಂದು ಮುಂಬೈ ಮೂಲದ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬದುಕಿನ ಪಯಣ ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ – ‘ಎಂದೆಂದಿಗೂ ಮೇಲಕ್ಕೆ ಹಾರು ನನ್ನ ಪುಟ್ಟ ತಂಗಿ’ ಎಂದು ಸಹೋದರನ ಕಂಬನಿ

ಈ ವಿಚಿತ್ರ ಕೇಸ್‌ ಬಗ್ಗೆ ಆ ವಕೀಲೆ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಹೆಂಡತಿಯೋರ್ವಳು, ಗಂಡ ನನ್ನನ್ನು ತುಂಬಾ ಪ್ರೀತಿ ಮಾಡುತ್ತಾನೆ. ನಾನು ಏನು ಮಾಡಿದರು ಜಗಳ ಮಾಡುವುದಿಲ್ಲ, ಆತನ ಪ್ರೀತಿ ನನ್ನ ಉಸಿರುಗಟ್ಟಿಸಿದೆ ಎಂದು ಮಹಿಳೆಯೊಬ್ಬಳು ಆರೋಪಿಸಿದ್ದಾಳೆ. ಉತ್ತರ ಪ್ರದೇಶದ ಜೋಡಿಯ ವಿಚ್ಚೇದನ ಪ್ರಕರಣ ಇದಾಗಿದ್ದು,  ಇಲ್ಲಿ ಮಹಿಳೆ ಗಂಡ ನನ್ನನ್ನು ತುಂಬಾ ಪ್ರೀತಿಸುತ್ತಾನೆ ಜಗಳವೇ ಆಡುತ್ತಿಲ್ಲ ಎಂದು ಹೇಳಿ ಮದುವೆಯಾದ 18ನೇ ತಿಂಗಳಿಗೆ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ ಅಂತಾ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ಪ್ರಕರಣ ಎಲ್ಲಿವರೆಗೆ ಬಂತು ಅವರಿಬ್ಬರು ಜೊತೆಯಾಗಿಯೇ ಇದ್ದಾರಾ? ಅಥವಾ ವಿಚ್ಛೇದನ ನೀಡಲಾಗಿದೆಯೇ ಅಂತಾ ಮಾಹಿತಿ ಬಿಟ್ಟುಕೊಟ್ಟಿಲ್ಲ.

Shwetha M