ಮದುವೆ ದಿನ ಕೇಕ್ ಟೇಸ್ಟ್ ನೋಡಿದ ವರ! – ಅಯ್ಯಯ್ಯೋ.. ವಿವಾಹವನ್ನೇ ಕ್ಯಾನ್ಸಲ್ ಮಾಡಿದ್ಲು ವಧು!

ಮದುವೆ ಮನೆಯಲ್ಲಿ ಸಣ್ಣ ಪುಟ್ಟ ಮನಸ್ತಾಪ ಇರೋದು ಕಾಮನ್.. ಜಗಳ ಆದ್ರೂ ಕೆಲ ಹೊತ್ತಲ್ಲೇ ಪರಿಸ್ಥಿತಿ ತಿಳಿಯಾಗುತ್ತೆ. ಆದ್ರೀಗ ಇಲ್ಲೊಂದು ಕಡೆ ಕೇಕ್ ವಿಚಾರಕ್ಕೆ ಮದುವೆ ನಿಂತು ಹೋಗಿದೆ. ಮದುಮಗ ಕೇಕ್ ಟೇಸ್ಟ್ ಮಾಡಿದ ಎಂದು ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.
ಇದನ್ನೂ ಓದಿ: ಲಕ್ಕುಂಡಿ ನಿಧಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! – ಚಿನ್ನ ಕೊಡಿ.. ಅಪಶಕುನದ ಜಾಗ ಬೇಡ ಎಂದ ಕುಟುಂಬ!
ಇದು ಡೆಸ್ಟಿನೇಷನ್ ವೆಡ್ಡಿಂಗ್ ಕಾಲ. ಎಲ್ಲವೂ ಅಂದುಕೊಂಡಂತೆ ನಡೆಯಬೇಕು. ಅದಕ್ಕಾಗಿ ದುಂದು ವೆಚ್ಚ ಮಾಡುತ್ತಾರೆ. ಕಾರ್ಯಕ್ರಮದಲ್ಲಿ ಸ್ಪಲ್ಪ ಆಚೆ ಈಚೆ ಆದ್ರೂ ಮದುವೆ ಮನೆ ರಣರಂಗವಾಗಿ ಬಿಡುತ್ತೆ. ಸಣ್ಣ ಪುಟ್ಟ ಕಾರಣಗಳಿಗೆ ಜಗಳ ಉಂಟಾಗಿ ಮದುವೆ ಕ್ಯಾನ್ಸಲ್ ಆದ ಘಟನೆಗಳು ಸಾಕಷ್ಟು ನಡೆದಿವೆ. ಇದೀಗ ಇಲ್ಲೊಂದು ಕಡೆ ಹೀಗೆ ಆಗಿದೆ. ವಧು, ವರನ ಮಧ್ಯೆ ಕೇಕ್ ವಿಚಾರಕ್ಕೆ ಜಗಳ ನಡೆದು ಮದುವೆಯೇ ಅರ್ಧಕ್ಕೆ ನಿಲ್ಲುವಂತ ಘಟನೆ ನಡೆದಿದೆ.. ಇದ್ರ ವಿಡಿಯೋ ಭಾರಿ ವೈರಲ್ ಆಗಿದೆ.
ಅಷ್ಟಕ್ಕೂ ಆಗಿದ್ದೇನು?
ಮದುವೆ ದಿನ ಕೇಕ್ ಕಟ್ ಮಾಡಲು ನಿರ್ಧರಿಸಿದ್ದಾರೆ. ಮದುವೆ ದಿನ ಕೇಕ್ ಕತ್ತರಿಸುವ ಮೊದಲು ಮದುಮಗ ತನ್ನ ಬೆರಳಿನಿಂದ ಸ್ವಲ್ಪ ಕೇಕ್ ತೆಗೆದು ರುಚಿ ನೋಡುತ್ತಾನೆ. ಇದನ್ನು ಕಂಡು ಕೋಪಗೊಂಡ ಮದುಮಗಳು, ಎಲ್ಲರ ಮುಂದೆ ಆತನನ್ನು ಯಾಕೆ ತಿಂದೆ ಎಂದು ಪ್ರಶ್ನೆ ಮಾಡುತ್ತಾಳೆ. ನಂತರ ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಈ ಘಟನೆ ಟರ್ಕಿಯಲ್ಲಿ ನಡೆದಿದ್ದು ಕೆಲವೇ ಸೆಕೆಂಡಿನಲ್ಲಿ ಮದುವೆ ಕ್ಯಾನ್ಸಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ವಧು-ವರರು ಕೇಕ್ ಪಕ್ಕದಲ್ಲಿ ನಿಂತಿರುವುದನ್ನು ತೋರಿಸುತ್ತದೆ. ಅತಿಥಿಗಳು ಅವರ ಸುತ್ತಲೂ ಒಟ್ಟುಗೂಡಿ, ಕೇಕ್ ಕತ್ತರಿಸುವಿಕೆಗಾಗಿ ಕಾಯುತ್ತಿದ್ದಾರೆ. ಆ ಕ್ಷಣವನ್ನು ಸೆರೆಹಿಡಿಯಲು ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್ಗಳು ಸಹ ಅಲ್ಲಿದ್ದಾರೆ. ಆದರೆ ಕೇಕ್ ಕತ್ತರಿಸುವ ಮೊದಲು ಮದುಮಗ ತನ್ನ ಬೆರಳಿನಿಂದ ಸ್ವಲ್ಪ ಕೇಕ್ ತೆಗೆದು ರುಚಿ ನೋಡುತ್ತಾನೆ.ಇದನ್ನು ಕಂಡು ವಧು ಅಲ್ಲಿಯೇ ಕೋಪಗೊಳ್ಳುತ್ತಾಳೆ.ಕೆಲವೇ ಸೆಕೆಂಡುಗ ಳಲ್ಲಿ, ವರನು ಅಸಮಾಧಾನಗೊಳ್ಳುತ್ತಾನೆ. ಇಡೀ ಕೇಕ್ ಅನ್ನು ತೆಗೆದು ಎತ್ತಿ ನೆಲಕ್ಕೆ ಅಪ್ಪಳಿಸುತ್ತಾನೆ. ಮದುಮಗನ ಈ ವರ್ತನೆಯಿಂದ ಮದುಮಗಳು ತೀವ್ರ ಆಘಾತಕ್ಕೊಳಗಾಗುತ್ತಾಳೆ. ಬೇಸರರಿಂದ ಕಣ್ಣೀರು ಹಾಕುತ್ತಾ ಅವಳು ಮದುವೆ ಮಂಟಪದಿಂದಲೇ ಹೊರ ನಡೆದಿದ್ದಾಳೆ.

ನೋಡಿರಿ

