ಗಿಫ್ಟ್ ಸಿಕ್ಕ ಬೈಕ್‌ಗೆ ನಡುರಸ್ತೆಯಲ್ಲೇ ಬೆಂಕಿ ಇಟ್ಟ ಯುವಕ! – ಅರೆಸ್ಟ್ ಆಗ್ತಿದ್ದಂತೆ ಬಯಲಾಯ್ತು ಶಾಕಿಂಗ್ ವಿಚಾರ!

ಈಗಿನ ಕಾಲದಲ್ಲಿ ದುಡ್ಡೇ ದೊಡ್ಡಪ್ಪ. ದುಡ್ಡಿಲ್ಲ ಅಂದ್ರೆ ಬದುಕೋದು ಕಷ್ಟ. ಇನ್ನು ಮಧ್ಯಮ ವರ್ಗದ ಜನರಿಗೆ ಒಂದಿನ ದುಡಿಲಿಲ್ಲ ಅಂದ್ರೂ ಜೀವನ ಮುಂದಕ್ಕೆ ಹೋಗಲ್ಲ. ಇದೀಗ ತಂದೆ-ತಾಯಿಗೆ ಹುಷಾರಿಲ್ಲದೇ ಹಣಕ್ಕಾಗಿ ಪರದಾಡಿದ್ದ ಯುವಕನೊಬ್ಬ ಸಿಟ್ಟಿಗೆದ್ದು, ಗಿಫ್ಟ್ ಆಗಿ ಬಂದಿದ್ದ ಬೈಕ್‌ಗೆ ನಡುರಸ್ತೆಯಲ್ಲೇ ಬೆಂಕಿಯಿಟ್ಟು ಸುಟ್ಟು ಹಾಕಿದ್ದಾನೆ. ಆದ್ರೀಗ ಆತನ ಎಡವಟ್ಟಿನಿಂದ ಜೈಲು ಪಾಲಾಗುವಂತೆ ಮಾಡಿದೆ.
ಇದನ್ನೂ ಓದಿ: ಚಂದ್ರಪ್ರಭಗೆ ಸಿಕ್ತಾ ಹೊಸ ಆಫರ್? – ಬಿಗ್‌ಬಾಸ್ QUIT ಮಾಡಿದ್ದು ಗಿಮಿಕ್?
ಏನಿದು ಘಟನೆ?
ಬೆಂಗಳೂರಿನ ಬಸವೇಶ್ವರನಗರ ಠಾಣಾ ವ್ಯಾಪ್ತಿಯ ಹಾವನೂರು ಸರ್ಕಲ್ ಬಳಿ ರಾತ್ರಿ ಈ ಘಟನೆ ನಡೆದಿದೆ. ಯಶವಂತ್ ಎಂಬ ಯುವಕ ತನ್ನ ಪಲ್ಸರ್ ಬೈಕ್‌ಗೆ ಬೆಂಕಿಯಿಟ್ಟು ಸುಟ್ಟುಹಾಕಿದ್ದಾನೆ. ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೆ ಯುವಕನನ್ನು ಬಂಧಿಸಲಾಗಿದೆ.
ಯುವಕನ ತಂದೆ, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲು ಹಣ ಹೊಂದಿಸಲು ಮುಂದಾಗಿದ್ದಾನೆ. ತನಗೆ ಗಿಫ್ಟ್ ಕೊಟ್ಟಿದ್ದ ಬೈಕ್ ಅನ್ನ ಅಡವಿಡಲು ಹೋಗಿದ್ದಾನೆ. ಗಿಫ್ಟ್ ಕೊಟ್ಟಿದ್ದ ಬೈಕ್, ಗಿಫ್ಟ್ ಕೊಟ್ಟವರ ಹೆಸರಲ್ಲಿತ್ತು. ಹೀಗಾಗಿ ಸಾಲ ಕೂಡ ಸಿಗಲಿಲ್ಲ. ಇದ್ರಿಂದಾಗಿ ಮನನೊಂದ ಯುವಕ KA 02 LD 3269 ಎಂಬ ತನ್ನ ಬೈಕ್‌ಗೆ ನಡುರಸ್ತೆಯಲ್ಲೇ ಬೆಂಕಿಯಿಟ್ಟು ಸ್ಥಳದಿಂದ ಪರಾರಿಯಾಗಿದ್ದ. ಇದೀಗ ಆತನನ್ನ ಪೊಲೀಸರು ಬಂಧಿಸಿದ್ದಾರೆ.

ನೋಡಿರಿ

