ದೇಹ ಸದೃಢವಾಗುತ್ತದೆ ಎಂದು 39 ನಾಣ್ಯಗಳು, 37 ಅಯಸ್ಕಾಂತಗಳನ್ನು ನುಂಗಿದ ಯುವಕ

ದೇಹ ಸದೃಢವಾಗುತ್ತದೆ ಎಂದು 39 ನಾಣ್ಯಗಳು, 37 ಅಯಸ್ಕಾಂತಗಳನ್ನು ನುಂಗಿದ ಯುವಕ

ಈಗೀಗ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ. ದೇಹವನ್ನು ಸದೃಢವಾಗಿಸಲು ಏನೇನೋ ಕಸರತ್ತುಗಳನ್ನು ಮಾಡುತ್ತಾರೆ. ಇದೀಗ ಇಲ್ಲೊಬ್ಬ ಮಹಾನುಭಾವ ಸತು ದೇಹವನ್ನು ಸದೃಢವಗಿಸುತ್ತೆ ಅಂತಾ ನಾಣ್ಯಗಳು ಹಾಗೂ ಅಯಸ್ಕಾಂತಗಳನ್ನು ನುಂಗಿ ಅಪಾಯಕ್ಕೆ ಸಿಲುಕಿದ್ದಾನೆ.

ಇದನ್ನೂ ಓದಿ: ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲು –  ಕೇಸ್‌ ಏನು?

ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 26 ವರ್ಷದ ಯುವಕನೊಬ್ಬ ಸುಮಾರು 20 ದಿನಗಳಿಂದ ವಾಂತಿ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ರೋಗಿ ಏನನ್ನು ತಿನ್ನದೇ ಇದ್ದಾಗ ವೈದ್ಯರು ಅನುಮಾನಗೊಂಡಿದ್ದಾರೆ. ಈ ವೇಳೆ ಎಕ್ಸ್ ರೇ ಮಾಡಿದ್ದಾರೆ. ಎಕ್ಸ್‌ರೇ ರಿಪೋರ್ಟ್‌ ನೋಡಿದ ವೈದ್ಯರಿಗೆ ಶಾಕ್‌ ಆಗಿದೆ. ರೋಗಿಯ ಕರುಳಿನಲ್ಲಿ ನಾಣ್ಯಗಳು ಹಾಗೂ ಅಯಸ್ಕಾಂತಗಳು ಇರುವುದು ಬೆಳಕಿಗೆ ಬಂದಿದೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಿಂದ ಸುಮಾರು 39 ನಾಣ್ಯಗಳು ಮತ್ತು 37 ಅಯಸ್ಕಾಂತಗಳನ್ನು ವೈದ್ಯರು ಹೊರತೆಗೆದಿದ್ದಾರೆ.

ವ್ಯಕ್ತಿಯ ಹೊಟ್ಟೆಯಿಂದ 1, 2, 5 ರೂ.ಗಳ ನಾಣ್ಯಗಳು ಮತ್ತು ಹೃದಯ, ಗೋಳ, ನಕ್ಷತ್ರ, ಬುಲೆಟ್ ಮತ್ತು ತ್ರಿಕೋನ ಆಕಾರದ ಅಯಸ್ಕಾಂತಗಳನ್ನು ಹೊರತೆಗೆಯಲಾಗಿದೆ. ಈ ಹಿಂದೆಯೂ ರೋಗಿಗಳು ಅಯಸ್ಕಾಂತ ಹಾಗೂ ನಾಣ್ಯಗಳನ್ನು ಸೇವಿಸಿದ ಸಾಕಷ್ಟು ಉದಾಹರಣೆಗಳಿವೆ ಎಂದು ಚಿಕಿತ್ಸೆ ನೀಡಿದ ವೈದ್ಯರಾದ ಡಾ.ತರುಣ್ ಮಿತ್ತಲ್ ಹೇಳಿದ್ದಾರೆ.

ನಾಣ್ಯವನ್ನು ನುಂಗಿದ ವ್ಯಕ್ತಿಯು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ದೇಹ ಗಟ್ಟಿಯಾಗುತ್ತದೆ ಎಂದು ನಾಣ್ಯಗಳು ಮತ್ತು ಅಯಸ್ಕಾಂತಗಳನ್ನು ನುಂಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Shwetha M