ಗರ್ಲ್ ಫ್ರೆಂಡ್ ಇಲ್ಲ ಅಂತಾ ಬೇಸರ ಯಾಕೆ? – ಬಟ್ಟೆ ಅಂಗಡಿಯ ಗೊಂಬೆಯೇ ಓಕೆ!!

ಈಗಿನ ಕಾಲದ ಯುವಕರಿಗೆ ಮದುವೆಯಾಗಲು ಹುಡುಗಿಯೇ ಸಿಗುತ್ತಿಲ್ಲ. ಹುಡುಗಿಕೊಡಿ ಅಂತಾ ಯುವಕರು ಹೆಣ್ಣು ಹೆತ್ತವರ ಬಳಿ ಮನವಿ ಮಾಡುತ್ತಿದ್ದಾರೆ. ಈ ನಡುವೆ ಅನೇಕ ಜೋಡಿ ಹಕ್ಕಿಗಳು ಮೊನ್ನೆಯಷ್ಟೆ ಪ್ರೇಮಿಗಳ ದಿನವನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡಿದ್ದರು. ಆದ್ರೆ ಕೆಲವೊಂದಷ್ಟು ಸಿಂಗಲ್ ಯುವಕರು ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಲು ನಮಗೆ ಹುಡುಗಿ ಇಲ್ಲ.. ಹುಡುಗಿ ಹುಡುಕಿದ್ರೂ ಸಿಕ್ತಾ ಇಲ್ಲ ಅಂತಾ ಬೇಸರ ಮಾಡಿಕೊಂಡಿದ್ದರು. ಆದ್ರೆ ಇಲ್ಲೊಬ್ಬ ಯುವಕ ತನಗೆ ಹುಡುಗಿ ಸಿಕ್ಕಿಲ್ಲ ಅಂತಾ ಬೇಸತ್ತು ಕೊನೆಗೆ ಬಟ್ಟೆ ಅಂಗಡಿಯಲ್ಲಿರೋ ಗೊಂಬೆಯನ್ನು ಬೈಕ್ ಅಲ್ಲಿ ಕೂರಿಸಿಕೊಂಡು ಜಾರಿ ರೈಡ್ ಹೋಗಿದ್ದಾನೆ.
ಇದನ್ನೂ ಓದಿ: ʼಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸುʼ! – ಶಾಲೆಗಳಲ್ಲೇ ಮತ್ತೊಂದು ವಿವಾದದ ಕಿಡಿ ಹಚ್ಚಿತಾ ರಾಜ್ಯ ಸರ್ಕಾರ?
ಅಚ್ಚರಿಯಾದ್ರೂ ಸತ್ಯ.. ಇಲ್ಲೊಬ್ಬ ಯುವಕ ತನಗೆ ಗರ್ಲ್ ಫ್ರೆಂಡ್ ಸಿಕ್ಕಿಲ್ಲ ಅಂತಾ ಬಟ್ಟೆ ಅಂಗಡಿಯಲ್ಲಿ ನಿಲ್ಲಿಸಿದ್ದ ಗೊಂಬೆಯನ್ನ ತನ್ನ ಬೈಕ್ನಲ್ಲಿ ಕೂರಿಸಿಕೊಂಡು ಊರಿಡಿ ಸವಾರಿ ಮಾಡಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು @indorigram_ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದೆ.
ಅಂದಹಾಗೆ ಈ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಮಧ್ಯಪ್ರದೇಶದ ಇಂದೋರ್ ನಗರದ ಯುವಕ. ವೈರಲ್ ವಿಡಿಯೋದಲ್ಲಿ ಆತ ಬಟ್ಟೆ ಅಂಗಡಿಯಲ್ಲಿರುವ ಗೊಂಬೆಯನ್ನು ಕೂರಿಸಿಕೊಂಡು ನಗರದ ಬೀದಿಗಳಲ್ಲಿ ಬೈಕ್ ಸವಾರಿ ಮಾಡುತ್ತಿದ್ದಾನೆ. ಈತನ ಹುಚ್ಚು ಸಾಹಸವನ್ನು ಕಂಡು ಅಲ್ಲಿ ನೆರೆದಿದ್ದ ಸಾರ್ವಜನಿಕರು ಇದ್ಯಾವುದಪ್ಪಾ ಹೊಸ ಪ್ರತಿಭೆ ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 8 ಸಾವಿಕರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ತರಹೇವಾರಿ ಕಮೆಂಟ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇದು ಸಿಂಗಲ್ ಹುಡುಗರ ಲಾಸ್ಟ್ ಆಪ್ಷನ್ʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವಿಡಿಯೋ ತುಂಬಾ ಮುದ್ದಾಗಿದೆ ಕಣ್ರಿʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ರೀತಿಯ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್ ನಾನು ಈ ಮೊದಲು ಎಂದೂ ನೋಡಿರಲಿಲ್ಲʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ತುಂಬಾ ತಮಾಷೆಯಾಗಿದೆ ಎಂದು ಹೇಳಿದ್ದಾರೆ.