ಬಿಟ್ಟೆನೆಂದರೂ ಬಿಡದೀ ಕಾಗೆ! – ಯುವಕನ ಪಾಡು ಕೇಳೋರು ಯಾರು?

ಬಿಟ್ಟೆನೆಂದರೂ ಬಿಡದೀ ಕಾಗೆ! – ಯುವಕನ ಪಾಡು ಕೇಳೋರು ಯಾರು?

ಕೆಲವೊಂದು ಪ್ರಾಣಿಗಳು ಆಗಾಗ ಸುಮ್ಮನೆ ಕೋಪಗೊಳ್ಳುತ್ತವೆ. ಕೋಪಗೊಂಡಾಗ ತಮ್ಮ ಕಣ್ಣೆದುರಿಗೆ ಸಿಕ್ಕವರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಕೂಡ ಕೆಲವರನ್ನು ಕಂಡ ಕೂಡಲೇ ಅಟ್ಟಿಸಿಕೊಂಡು ಹೋಗುತ್ತವೆ. ಅಲ್ಲದೇ ರಸ್ತೆಗಳಲ್ಲಿ ಬರುವ ವಾಹನಗಳನ್ನು ಅಟ್ಟಿಸಿಕೊಂಡು ಹೋಗುವದನ್ನು ನೋಡಿದ್ದೇವೆ. ಕೆಲ ತಿಂಗಳುಗಳ ಹಿಂದೆ ಕೇರಳದ ಅಡೂರಿನಲ್ಲಿ ಹದ್ದುಗಳು ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಇಲ್ಲೊಂದು ಯುವಕನ ಮೇಲೆ ಕಾಗೆಯೊಂದು ದಾಳಿ ಮಾಡಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ಬಾಲಕಿಯೊಂದಿಗೆ ಮೈನಾಹಕ್ಕಿ ಸ್ನೇಹ – ಶಾಲೆಗೂ ಹೋಗುತ್ತೆ.. ಪಾಠನೂ ಕೇಳುತ್ತೆ!

ವೈರಲ್ ಆದ ವಿಡಿಯೋದಲ್ಲಿ ಕಾಗೆ ನಡೆಸುತ್ತಿರುವ ದಾಳಿಗೆ  ಯುವಕನೊಬ್ಬ ಭಾರಿ ತೊಂದರೆಗೊಳಗಾಗಿದ್ದಾನೆ. ಕಾಗೆ ಆತನಿಗೆ ಎಷ್ಟೊಂದು ತೊಂದರೆ ನೀಡುತ್ತಿದೆ ಎಂದರೆ ಯುವಕ ಕಾಗೆ ದಾಳಿಯಿಂದ ಬಚಾವ್ ಆಗಲು ಅತ್ತಿಂದಿತ್ತಓಡುತ್ತಿದ್ದಾನೆ. ಆದರೆ ಕಾಗೆ ಯುವಕನ ತಲೆಯ ಮೇಲೆ ನಿರಂತರವಾಗಿ ಕುಕ್ಕುತ್ತಿದೆ. ಆತ ರಸ್ತೆಗೆ ಓಡಿದರೆ ಅಲ್ಲಿಗೂ ತೆರಳಿ ಆತನ ತಲೆ ಮೇಲೆ ಕುಕ್ಕುತ್ತಿದೆ.  ಆತ ಮಾಲ್ ಒಳಗೆ ಹೋದರೂ ಕಾಗೆ ಬಿಡುತ್ತಿಲ್ಲ. ಬಳಿಕ ಆ ಯುವಕ ಒಳಗೆ ಹೋಗಿ ಕಂಬದ ಹಿಂದೆ ಅಡಗಿಕೊಳ್ಳುತ್ತಾನೆ. ಆದರೂ ಕೂಡ ಆತನನ್ನು ಕಾಗೆ ಬಿಡುವಂತೆ ಕಾಣುತ್ತಿಲ್ಲ. ಆತ ನಿಧಾನಕ್ಕೆ ಕಂಬವನ್ನು ಸುತ್ತುತ್ತಿದ್ದ ಹಾಗೆ ಕಾಗೆಯೂ ಕೂಡ ಸುತ್ತಲು ಪ್ರಾರಂಭಿಸುತ್ತದೆ. ಬಳಿಕ ಅಲ್ಲಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಅಂತಾ ಪ್ರಯತ್ನಿಸುತ್ತಿರುತ್ತಾನೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.

suddiyaana