ಅಯ್ಯೋ.. ತಿನ್ನೋ ಆಹಾರವೇ ವಿಷವಾಯ್ತು – ಚಿಕನ್‌ ಶವರ್ಮಾ ಸೇವಿಸಿ ಯುವಕ ಸಾವು!

ಅಯ್ಯೋ..  ತಿನ್ನೋ ಆಹಾರವೇ ವಿಷವಾಯ್ತು – ಚಿಕನ್‌ ಶವರ್ಮಾ ಸೇವಿಸಿ ಯುವಕ ಸಾವು!

ಈಗೀಗ ಹೊರಗೆ ಆಹಾರ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಮೂರು ಹೊತ್ತು ಕೂಟ ಹೋಟೆಲ್‌ನಲ್ಲೇ ತಿನ್ನುತ್ತಾರೆ. ಇದೀಗ ಇಲ್ಲೊಬ್ಬನಿಗೆ ಹೋಟೆಲ್‌ ಊಟವೇ ಪ್ರಾಣಕ್ಕೆ ಸಂಚಕಾರ ತಂದಿದೆ. ಚಿಕನ್‌ ಶವರ್ಮಾ ತಿಂದು ಯುವಕನ್ನೊಬ್ಬ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಹೆಚ್ ಡಿ ರೇವಣ್ಣ ಅಮಾನತಿಗೆ ಪಕ್ಷದಲ್ಲಿ ಹೆಚ್ಚಾಯ್ತು ಒತ್ತಡ –  ಗುರುವಾರ ನಿರ್ಧಾರವಾಗಲಿದೆ ರೇವಣ್ಣ ಭವಿಷ್ಯ!

ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 19 ವರ್ಷದ ಯುವಕ ಪ್ರಾರ್ಥಮೇಶ್ ಎಂಬಾತ ಚಿಕನ್ ಶವರ್ಮಾ ಸೇವಿಸಿದ್ದಾನೆ. ಚಿಕನ್​​ ಶವರ್ಮಾ ಸೇವಿಸಿದ ಮರುದಿನ ಯುವಕನಿಗೆ ತೀವ್ರ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಇದಲ್ಲದೇ ಆತನೊಂದಿಗೆ ಶವರ್ಮಾ ತಿಂದಿದ್ದ ಐವರು ಸಹ ತೀವ್ರ ಅಸ್ವಸ್ಥರಾಗಿದ್ದಾರೆ.

ಹಾಳಾದ ಕೋಳಿಯನ್ನು ಶವರ್ಮಾದಲ್ಲಿ ಬಳಸಿದಕ್ಕಾಗಿ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧ ಮಹಾರಾಷ್ಟ್ರ ಪೊಲೀಸರು ಶವರ್ಮಾ ಅಂಗಡಿ ನಡೆಸುತ್ತಿದ್ದ ಇಬ್ಬರ ವಿರುದ್ಧ ಕೇಸ್​​ ದಾಖಲಿಸಿದ್ದಾರೆ. ಇಬ್ಬರ ಬಂಧನ ಕೂಡ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Shwetha M