ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಯುವಕ ಸಾವು – ಅದೇ ಮನೆಗೆ ಬಂದು ತಾಯಿಯನ್ನು ಸಂತೈಸಿದ ಶ್ವಾನ

ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಯುವಕ ಸಾವು – ಅದೇ ಮನೆಗೆ ಬಂದು ತಾಯಿಯನ್ನು ಸಂತೈಸಿದ ಶ್ವಾನ

ಕೆಲವೊಮ್ಮೆ ನಮ್ಮ ಕಣ್ಣ ಮುಂದೆ ನಡೆಯುವ ಕೆಲ ಘಟನೆಗಳು ಅಚ್ಚರಿ ಉಂಟು ಮಾಡುವುದರ ಜೊತೆಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಇದೀಗ ಇಂಥಾದ್ದೇ ಒಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ತಾಯಿಗೆ ಶ್ವಾನವೊಂದು ಸಂತೈಸಿದೆ.

ಪುತ್ರ ಶೋಕಂ ನಿರಂತರಂ ಎನ್ನುವಂತೆ ತಾಯಿಯೊಬ್ಬರು ಮಗನ ಸಾವಿನ ನೋವಿನಲ್ಲಿದ್ದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದ ತಿಪ್ಪೇಶ್ (21) ಅಪಘಾತದಲ್ಲಿ ಮೃತಪಟ್ಟಿದ್ದರು. ಬೈಕ್ ಓಡಿಸುವಾಗ  ನಾಯಿ ಅಡ್ಡ ಬಂದಿದ್ದು ಪರಿಣಾಮ ಅಪಘಾತ (Bike Accident) ಸಂಭವಿಸಿತ್ತು. ಬೈಕ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತಿಪ್ಪೇಶ್ ಸಾವನ್ನಪ್ಪಿದ್ದರು. ತಿಪ್ಪೇಶ್ ನಿಧನದ ಮೂರು ದಿನಗಳ ಬಳಿಕ ಅವರ ಮನೆಗೆ ಬಂದಿರುವ ನಾಯಿಯೇ ಈ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮನೆಗೆ ಬಂದ ನಾಯಿ ತಿಪ್ಪೇಶ್ ಕೊಠಡಿ ಮತ್ತು ಮನೆಯಲ್ಲೆಲ್ಲಾ ಸುತ್ತಾಡಿದೆ. ನಂತರ ತಿಪ್ಪೇಶ್ ತಾಯಿ ಬಳಿ ಬಂದ ನಾಯಿ (Dog) ಅಳದಂತೆ ಸಂತೈಸಿದೆ.

ಇದನ್ನೂ ಓದಿ : ಕಳ್ಳತನಕ್ಕೆಂದು ಮನೆಗೆ ನುಗ್ಗಿದ – ಗೊರಕೆ ಸೌಂಡ್‌ಗೆ ಖತರ್ನಾಗ್‌ ಕಳ್ಳ ಸಿಕ್ಕಾಕ್ಕೊಂಡ!

ಕಳೆದ ಗುರುವಾರ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ತಿಪ್ಪೇಶ್ ಹೋಗಿದ್ದರು. ಹಿಂದಿರುಗಿ ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್ ಗೆ ನಾಯಿ ಅಡ್ಡ ಬಂದಿತ್ತು. ನಾಯಿಗೆ ಡಿಕ್ಕಿ ತಪ್ಪಿಸಲು ಹೋದಾಗ ಅಪಘಾತ ನಡೆದಿತ್ತು. ಪರಿಣಾಮ ತಿಪ್ಪೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದೀಗ ಅದೇ ನಾಯಿ ತಿಪ್ಪೇಶ್ ಮನೆಗೆ ಬಂದಿರೋದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಸದ್ಯ ತಿಪ್ಪೇಶ್ ತಾಯಿಯನ್ನು ಅಳದಂತೆ ಸಮಾಧಾನ ಮಾಡಿದ ನಾಯಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Shantha Kumari