ವರ್ಷದ ನಂತರ ಅಮ್ಮನ ನೋಡಿದ ಮಗಳು – ಮುಗ್ಧ ಮನಸಿನ ಕಂದಮ್ಮನ ಖುಷಿ ನೋಡಿದವರೆಲ್ಲರೂ ಭಾವುಕ..!

ವರ್ಷದ ನಂತರ ಅಮ್ಮನ ನೋಡಿದ ಮಗಳು – ಮುಗ್ಧ ಮನಸಿನ ಕಂದಮ್ಮನ ಖುಷಿ ನೋಡಿದವರೆಲ್ಲರೂ ಭಾವುಕ..!

ತಾಯಿ ಮಗುವಿನ ಅನುಬಂಧವೇ ಹಾಗೆ. ತಾಯಿಯ ಒಡಲು ಮಮತೆಯ ಕಡಲು. ಮಗುವಿನ ಮನಸು ಸದಾ ತಾಯಿಗಾಗಿ ಹಂಬಲಿಸುತ್ತದೆ. ಅಮ್ಮನೇ ಮಗುವಿನ ಜಗತ್ತು. ಅಮ್ಮ ಬಳಿಯಿದ್ದರೆ ಮಗುವಿಗೆ ಇನ್ನೇನೂ ಬೇಡ. ಇಲ್ಲೊಬ್ಬಳು ಮುದ್ದಾದ ಮಗಳಿದ್ದಾಳೆ. ಅವಳು ಅಮ್ಮನನ್ನು ನೋಡದೇ ಒಂದು ವರ್ಷವಾಗಿತ್ತು. ಅಮ್ಮನ ನೋಡಲು ಕಾಯುತ್ತಿದ್ದಳು. ಅಂತಾ ಆ ದಿನ ಬಂದೇ ಬಿಟ್ಟಿತು. ಅಮ್ಮನ ನೋಡಿ ಮಗಳು ಖುಷಿ ಪಟ್ಟ ಕ್ಷಣ ನೋಡಿದವರು ಕೂಡಾ ಖುಷಿಯಲ್ಲಿಯೇ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:  ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ – ಪತ್ನಿ ಸ್ಪಂದನಾ ನೆನಪಲ್ಲಿ ಚಿನ್ನಾರಿ ಮುತ್ತ ಭಾವುಕ

ಒಂದು ವರ್ಷದ ಬಳಿಕ ಅಮ್ಮನನ್ನು ಕಂಡಾಗ ಮಗುವಿನ ಮುಖದಲ್ಲಿರುವ ಖುಷಿ ನೆಟ್ಟಿಗರ ಮನಸ್ಸು ಗೆದ್ದಿದೆ. ಸದ್ಯ ಈ ವಿಡಿಯೋ ಮೂರೇ ದಿನದಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಮಗುವಿನ ಮುಗ್ಧ ನಗು, ಖುಷಿ ನೋಡಿದ ವೀಕ್ಷಕರು ಕೂಡಾ ಕಣ್ಣೀರು ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ಇರುತ್ತವೆ. ಆದರೆ, ಈ ಮುದ್ದು ಕಂದಮ್ಮನ ವಿಡಿಯೋ ಮಾತ್ರ ನಿಜಕ್ಕೂ ಅದ್ಭುತ ಅನುಭವ, ತಾಯಿ ಮಗುವಿನ ಮಮತೆಯ ಬಂಧಕ್ಕೆ ಸಾಕ್ಷಿಯಾಗಿದೆ. ಒಂದು ವರ್ಷದ ಬಳಿಕ ಅಮ್ಮನನ್ನು ಕಂಡಾಗ ಮಗುವಿನ ಮುಖದಲ್ಲಿರುವ ಖುಷಿ, ಅಮ್ಮನ ನೋಡಿದ ಮೇಲೆ ಒಂಥರಾ ಅಳು, ದುಪ್ಪಟ್ಟು ನಗು, ಮುಗ್ಧ ಮನಸಿನ ಮಗುವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ವಿಡಿಯೋದಲ್ಲಿ ವಿದೇಶದಲ್ಲಿರುವ ಅಮ್ಮನ ಬರುವಿಕೆಗಾಗಿ ಮಗು ಅಪ್ಪ ಹಾಗೂ ಸಂಬಂಧಿಕರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವುದನ್ನು ಕಾಣಬಹುದು. ದೂರದಲ್ಲಿ ಅಮ್ಮ ಬರುವುದು ಕಾಣುತ್ತಿದ್ದಂತೆ ಮಗುವಿನ ಖುಷಿಗೆ ಪಾರವೇ ಇಲ್ಲ. ಮಗುವಿನ ಮುಗ್ಧ ನಗು, ಖುಷಿ ಕಣ್ಣೀರು ಬರಿಸುತ್ತದೆ. ಕೆಲವರಿಗೆ ಆನಂದದ ಕಣ್ಣೀರು. ಇನ್ನು ಕೆಲವರಿಗೆ ತಮ್ಮ ಬಾಲ್ಯ ನೆನಪಾಗಿ ಕಣ್ಣೀರು. ಇನ್ನು ಕೆಲವರಿಗೆ ಇಂಥಾ ಬಂಧವನ್ನು ಮಿಸ್ ಮಾಡಿಕೊಂಡಿರುವ ಕಣ್ಣೀರು. ನಿಜಕ್ಕೂ ಈ ಒಂದು ವಿಡಿಯೋ ಎಲ್ಲವನ್ನೂ ಹೇಳುತ್ತದೆ. ಈ ವಿಡಿಯೋವನ್ನು ಜೆರಿನ್ ಜೇಮ್ಸ್ ಎಂಬವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಮೂರೇ ದಿನಕ್ಕೆ 334,915 ಲೈಕುಗಳನ್ನು ಪಡೆದುಕೊಂಡಿದೆ. ‘ಈ ವಿಡಿಯೋ ನನ್ನ ಕಣ್ಣಲ್ಲಿ ನೀರು ತರಿಸಿತು’ ಎಂದು ಸಾಕಷ್ಟು ನೆಟ್ಟಿಗರು ಬರೆದುಕೊಂಡಿದ್ದಾರೆ. ಈ ವಿಡಿಯೋ ಎಷ್ಟು ನೋಡಿದರೂ ಸಾಲುವುದಿಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

 

View this post on Instagram

 

A post shared by Jerrin James (@lucifer_lcr)

Sulekha