18 ತಿಂಗಳ ಮಗುವಿನ ಕೈಯಲ್ಲಿ 43 ಬಗೆಯ ಕಲಾಕೃತಿ – ಅತ್ಯಂತ ಕಿರಿಯ ಕಲಾವಿದ ಬಿರುದು

18 ತಿಂಗಳ ಮಗುವಿನ ಕೈಯಲ್ಲಿ 43 ಬಗೆಯ ಕಲಾಕೃತಿ – ಅತ್ಯಂತ ಕಿರಿಯ ಕಲಾವಿದ ಬಿರುದು

ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋದಾಗ ಓದಲು ಬರೆಯಲು ಪ್ರಾರಂಭಿಸುತ್ತಾರೆ. ಇನ್ನೂ ಕೆಲ ಮಕ್ಕಳು ಮನೆಯಲ್ಲೇ ಕೆಲವೊಂದು ಪದಗಳನ್ನು ಕಲಿಯುತ್ತಾರೆ. ಹಾಗೇ ಕೆಲವೊಂದು ಚಿತ್ರಗಳನ್ನು ಬಿಡಿಸಲು ಆರಂಭಿಸುತ್ತಾರೆ. ಆದರೆ ಈಗ ಹೆತ್ತವರು ವಿದ್ಯಾವಂತರಾಗಿರುವುದರಿಂದ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಪ್ರತಿಭಾವಂತರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ 18 ತಿಂಗಳ ಮಗುವೊಂದು ತನ್ನ ಟ್ಯಾಲೆಂಟ್ ನಿಂದಲೇ ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​ ಮಾಡಿದೆ.

ಸಾಮಾನ್ಯವಾಗಿ ಒಂದೂವರೆ ವರ್ಷದ ನಂತರ ಮಕ್ಕಳು ಮಾತು ಕಲಿಯಲು ಆರಂಭಿಸುತ್ತಾರೆ. ಈ ವೇಳೆ ಅಪ್ಪ, ಅಮ್ಮ ಅಂತಾ ಒಂದೊಂದೇ ಪದಗಳನ್ನು ತೊದಲುತ್ತಾರೆ. ಹಾಗೇ ಆಟಿಕೆಗಳೊಂದಿಗೆ ಸಮಯ ಕಳೆಯುತ್ತಾರೆ. ಆದರೆ ಇಲ್ಲೊಬ್ಬ ಪುಟಾಣಿ 18 ತಿಂಗಳಿಗೆ ಅದ್ಭುತ ಕಲಾಕೃತಿಯನ್ನು ಮಾಡುವ ಮೂಲಕ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಜೊತೆಗೆ ವರ್ಲ್ಡ್​ ಬುಕ್​ಆಫ್​ ರೆಕಾರ್ಡ್​​ಗೂ ಆಯ್ಕೆಯಾಗಿದ್ದಾನೆ.

ಇದನ್ನೂ ಓದಿ: ಒಂದೇ ಬಾರಿಗೆ ಬರೋಬ್ಬರಿ 37 ಇಟ್ಟಿಗೆಗಳು ಪೀಸ್ ಪೀಸ್!

ಈ ಬಾಲಕನ ಹೆಸರು ಅರ್ಹಾನ್​ ಸಾಯಿ ಗೌರಿಶೆಟ್ಟಿ. ಈತನಿಗೆ ಈಗ ಕೇವಲ ಒಂದೂವರೆ ವರ್ಷ ಆದರೂ ಕೂಡ ಅದ್ಭುತ ರೀತಿಯಲ್ಲಿ ಕಲಾಕೃತಿಯನ್ನು ರಚಿಸುವ ಮೂಲಕ ಜಗತ್ತಿನಾದ್ಯಂತ ಭಾರೀ ಮನ್ನಣೆಯನ್ನು ಗಳಿಸಿದ್ದಾನೆ. ಸುಮಾರು 43 ವಿಶಿಷ್ಟ ರೀತಿಯ ಕಲಾತಂತ್ರಗಳನ್ನು ಬಳಸಿ  50 ಕಲಾಕೃತಿಗಳನ್ನು ರಚಿಸಿದ್ದಾನೆ. ಈ ಮೂಲಕ ಅತ್ಯಂತ ಕಿರಿಯ ಕಲಾವಿದ ಎಂಬ ಬಿರುದಿಗೂ ಪಾತ್ರವಾಗಿದ್ದಾನೆ. ಈ ಟ್ಯಾಲೆಂಟ್​​ ಅನ್ನು ಕಂಡು ಲಂಡನ್​​ನ ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​ನಿಂದ ‘ಚೈಲ್ಡ್​ ಪ್ರಾಡಿಜಿ’ ಎಂಬ ಪ್ರಶಸ್ತಿಯನ್ನು ಪಡೆದಿದ್ದಾನೆ.

ವಿಶೇಷವೇನೆಂದರೆ ಈ ಪುಟಾಣಿ ಕಲೆಗೆ ಸಂಬಂಧಪಟ್ಟಂತಹ ಯಾವುದೇ ತರಬೇತಿಯನ್ನು ಪಡೆದಿಲ್ಲ. ಆದರೂ ಕೂಡ ವೃತ್ತಿಪರರಂತೆ ಚಿತ್ರಕಲೆಯನ್ನು ಮಾಡುತ್ತಿರುವುದು ವಿಶೇಷವಾಗಿದೆ. ಇನ್ನು ಅರ್ಹಾನ್ ತನ್ನ ಕಲೆಯಲ್ಲಿ ಕಲಾಕೃತಿಯ ಅಂದಕ್ಕಾಗಿ ಆಟಿಕೆ ಕಾರೊಂದನ್ನು ಬಳಸುತ್ತಾನೆ. ​ ತನ್ನ ಕಲಾಕೃತಿಗಳಲ್ಲಿ, ಸ್ಲಿನ್ ಆರ್ಟ್​, ರಿಪಲ್ ಪೇಂಟಿಂಗ್​ ಇಂತಹ ಹಲವಾರು ಕಲಾತಂತ್ರಗಳನ್ನು ಬಳಸುತ್ತಾನೆ. ಇನ್ನು ಅದ್ಭುತ ಎಂದರೆ ಈ ತಂತ್ರಗಳ ಯಾವುದೇ ಹೆಸರುಗಳು ಆ ಮಗುವಿಗೆ ತಿಳಿದಿಲ್ಲ. ಆದರೂ ಕೆಲವೊಂದು ತಂತ್ರಗಳನ್ನು ಬಳಸಿಕೊಂಡು ಆತನೇ ಕಲಾಕೃತಿಗಳನ್ನು ರಚಿಸುತ್ತಾನೆ.

ಅರ್ಹಾನ್ ಸಹೋದರ ಅದಿತ್​​ ಗೌರಿಶೆಟ್ಟಿ ಸಹ ಕೇವಲ 21 ತಿಂಗಳ ಮಗುವಾಗಿದ್ದಾಗ, ಆತ ಯಾರೂ ಹೊಂದಿರದ ಜ್ಞಾಪನಾ ಶಕ್ತಿಯ ಪ್ರದರ್ಶನದಿಂದಾಗಿ ಹಲವಾರು ಪ್ರಶಸ್ತಿಗಳನ್ಜು ಪಡೆದಿದ್ದಾನೆ. ಇದಕ್ಕೂ ಮೊದಲು 3 ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​ ಅನ್ನು ಬಾಚಿಕೊಂಡಿದ್ದಾನೆ.

ಈ ಬಗ್ಗೆ ಮಾತನಾಡಿದ ಅರ್ಹಾನ್ ತಾಯಿ, ನನ್ನ ಹಿರಿಯ ಮಗ ಜ್ಞಾಪಕ ಶಕ್ತಿಯ ಕೌಶಲ್ಯದಿಂದ ಈ ಹಿಂದೆ ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​ಗೆ ಆಯ್ಕೆಯಾಗಿದ್ದ. ಇದೀಗ ಅರ್ಹಾನ್​ ಸಹ ವರ್ಲ್​​ ಬುಕ್​ ಆಫ್ ರೆಕಾರ್ಡ್​ ಪಡೆದುಕೊಂಡಿರುವುದು ಸಂತೋಷದ ವಿಷಯವಾಗಿದೆ. ಈ ಸಂದರ್ಭದಲ್ಲಿ ಇದುವರೆಗೆ ಅರ್ಹಾನ್ ಸೇರಿ ಒಟ್ಟು 4 ವರ್ಲ್ಡ್​ಬುಕ್​ ಆಫ್​ ರೆಕಾರ್ಡ್​ ನಮ್ಮ ಕುಟುಂಬದಲ್ಲೇ ಪಡೆದಿದ್ದಾರೆ ಎಂದು ಹೇಳಿದ್ದಾರೆ.

suddiyaana