ಸಿಂಹವನ್ನು ಮಗುವಿನಂತೆ ಎತ್ತಿಕೊಂಡ ಮಹಿಳೆ! – ಮುಂದೆ ಸಿಂಹ ಮಾಡಿದ್ದೇನು?

ಸಿಂಹವನ್ನು ಮಗುವಿನಂತೆ ಎತ್ತಿಕೊಂಡ ಮಹಿಳೆ! – ಮುಂದೆ ಸಿಂಹ ಮಾಡಿದ್ದೇನು?

ಸಾಮಾನ್ಯವಾಗಿ ನಾವು ಸಾಕು ಪ್ರಾಣಿಗಳನ್ನು ಎತ್ತಿ ಮುದ್ದಾಡುತ್ತೇವೆ. ಇದರೊಂದಿಗೆ ನಾವು ಕಾಲ ಕಳೆಯುತ್ತೇವೆ. ಸಾಕು ಪ್ರಾಣಿಗಳನ್ನು ಎತ್ತಿ ಮುದ್ದಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತವೆ. ವೈರಲ್ ಆದ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬಳು ನಾಯಿ ಅಥವಾ ಬೆಕ್ಕನ್ನು ಹೊತ್ತುಕೊಂಡಿಲ್ಲ. ಬದಲಿಗೆ ಆಕೆ ಕ್ರೂರ ಸಿಂಹವನ್ನು ಹೊತ್ತುಕೊಂಡಿದ್ದಾಳೆ.

ವೈರಲ್ ಆದ 10 ಸೆಕೆಂಡ್‌ನ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸಿಂಹವನ್ನು ಎತ್ತಿಕೊಂಡು ರಸ್ತೆಯಲ್ಲಿ ಸಾಗಿದ್ದಾಳೆ. ಈ ವೇಳೆ ಸಿಂಹ ಸಣ್ಣ ಮಕ್ಕಳು ಹಠ ಮಾಡಿ ಬಿಡಿಸಿಕೊಳ್ಳುವಂತೆ, ಅದೂ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಉಲ್ಟಾ ನಿಂತು ಕಾಲ್ಬೆರಳಿನಲ್ಲಿ ಬಿಲ್ಲು ಗುರಿಯಿಟ್ಟ ತರುಣಿ –  ಎಂಥಾ ಗುರಿ…

ಈ ವಿಡಿಯೋ ಭಾರಿ ವೈರ್ ಆಗುತ್ತಿದ್ದು, ಆಕೆಯನ್ನು ವಂಡರ್ ವುಮನ್ ಎಂದು ಕರೆದಿದ್ದಾರೆ. ಘೋರ ಸಿಂಹವನ್ನು ಮಹಿಳೆ ಸರಾಗವಾಗಿ ಎತ್ತುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಸಿಂಹವು ಮಹಿಳೆಯ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನೂ ಸಹ ಕಾಣಬಹುದು. ಮಹಿಳೆ ಸಿಂಹವನ್ನು ಎಲ್ಲೋ ಕರೆದುಕೊಂಡು ಹೋಗುತ್ತಿರುವಂತೆ ತೋರುತ್ತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋ ಕುವೈತ್‌ ನದ್ದು ಎಂದು ಹೇಳಲಾಗುತ್ತಿದ್ದು, ನಿಖರ ಮಾಹಿತಿ ತಿಳಿದುಬಂದಿಲ್ಲ.

 

View this post on Instagram

 

A post shared by Animal Power (@animals_powers)

suddiyaana