ಬಿರುಕು ಬಿಟ್ಟ ಚರ್ಮ.. ದೇಹ ಪೂರ್ತಿ ಬಿಳಿ ಬಣ್ಣ.. ವಿಚಿತ್ರ ಮಗುವಿಗೆ ಜನ್ಮ ನೀಡಿದ ಮಹಿಳೆ!

ಬಿರುಕು ಬಿಟ್ಟ ಚರ್ಮ.. ದೇಹ ಪೂರ್ತಿ ಬಿಳಿ ಬಣ್ಣ.. ವಿಚಿತ್ರ ಮಗುವಿಗೆ ಜನ್ಮ ನೀಡಿದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಬಹೇದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಚಿತ್ರವಾಗಿ ಕಾಣುವ ಗಂಡು ಮಗುವೊಂದು ಜನಿಸಿದೆ. ಈ ನವಜಾತ ಶಿಶು ಅಪರೂಪದ ಕಾಯಿಲೆ ಜೆನೆಟಿಕ್ ಡಿಸಾರ್ಡರ್ (ಹಾರ್ಲೆಕ್ವಿನ್ ಇಚ್ಥಿಯೋಸಿಸ್) ನಿಂದ ಬಳಲುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಕೇವಲ 6 ಸಾವಿರ ರೂ.ಗೆ ಹೆತ್ತ ಮಗುವನ್ನೇ ಮಾರಾಟ ಮಾಡಲು ಮುಂದಾದ ತಾಯಿ! – ಅಸಲಿ ಕಥೆ ಬಿಚ್ಚಿಟ್ಟ ಮಹಿಳೆ!  

ಬಹೇದಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಕೆಯ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬುಧವಾರ ತಡರಾತ್ರಿ ಮಹಿಳೆ ಸಾಮಾನ್ಯ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ದೇಹ ಸಂಪೂರ್ಣವಾಗಿ ಬಿಳಿಯಾಗಿದ್ದು, ಚರ್ಮವು ಬಿರುಕು ಬಿಟ್ಟಿದೆ. ಹುಟ್ಟಿದಾಗಿನಿಂದ ಮಗು ವಿಚಿತ್ರ ಶಬ್ದಗಳನ್ನು ಮಾಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಚಿತ್ರವಾಗಿ ಕಾಣುವ ಈ ಮಗುವನ್ನು ಕಂಡು ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಕೊನೆಗೆ ವೈದ್ಯರು ಮಗುವಿನಲ್ಲಿ ಕಾಣಿಸಿಕೊಂಡ ಅಪರೂಪದ ಕಾಯಿಲೆಯ ಬಗ್ಗೆ ವಿವರಿಸಿದ್ದಾರೆ. ಮಗುವಿನ ದೇಹದಲ್ಲಿ ಎಣ್ಣೆ ಉತ್ಪಾದಿಸುವ ಗ್ರಂಥಿಗಳ ಕೊರತೆಯಿಂದಾಗಿ ಚರ್ಮವು ಬಿರುಕು ಬಿಟ್ಟು ಈ ಕಾಯಿಲೆ ಬರುತ್ತದೆ. ಅಲ್ಲದೇ, ಇಂತಹ ಜನನ ಶಿಶುಗಳನ್ನು ಹಾರ್ಲೆಕ್ವಿನ್ ಇಚ್ಥಿಯೋಸಿಸ್ ಬೇಬೀಸ್ ಎಂದು ಕರೆಯಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾಮಾನ್ಯ ಹೆರಿಗೆಯಿಂದ ಜನಿಸಿರುವ ಈ ಮಗು ಐದು ದಿನಗಳ ನಂತರವೂ ಜೀವಂತವಾಗಿದ್ದು, ರೋಗದ ಕಾರಣವನ್ನು ಕಂಡುಹಿಡಿಯಲು ವೈದ್ಯರು ಚರ್ಮದ ಬಯಾಪ್ಸಿ ಮತ್ತು ಕರಿಯಾ ಟಿಮಿನ್ ಪರೀಕ್ಷೆಗಾಗಿ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ಇದುವರೆಗೆ ಇಡೀ ವಿಶ್ವದಲ್ಲಿ ಇಂತಹ ಸುಮಾರು 250 ಪ್ರಕರಣಗಳು ಕಂಡು ಬಂದಿದ್ದು ಮಗು ಜನನದ ಸಮಯದಲ್ಲಿಯೇ ಅಥವಾ ಕೆಲವು ಗಂಟೆಗಳ ನಂತರ ಸಾಯುತ್ತದೆ. ಆದರೆ ಈ ಮಗು 5 ದಿನಗಳ ಬಳಿಕವೂ ಇದು ಜೀವಂತವಾಗಿದೆ ಎಂದು ಹೇಳಲಾಗಿದೆ.

suddiyaana