ವೇದಿಕೆಯಲ್ಲಿ ನಿಕ್ ಜೋನಸ್ ಹಾಡುತ್ತಿದ್ದಾಗ ಒಳ ಉಡುಪು ಎಸೆದ ಮಹಿಳೆ..! – ‘ಬ್ರಾ’ ತನ್ನ ಹತ್ತಿರ ಬಂದು ಬಿದ್ದರೂ ವಿಚಲಿತರಾಗದ ಸ್ಟಾರ್ ಸಿಂಗರ್

ವೇದಿಕೆಯಲ್ಲಿ ನಿಕ್ ಜೋನಸ್ ಹಾಡುತ್ತಿದ್ದಾಗ ಒಳ ಉಡುಪು ಎಸೆದ ಮಹಿಳೆ..! – ‘ಬ್ರಾ’ ತನ್ನ ಹತ್ತಿರ ಬಂದು ಬಿದ್ದರೂ ವಿಚಲಿತರಾಗದ ಸ್ಟಾರ್ ಸಿಂಗರ್

ಹಾಲಿವುಡ್ ಗಾಯಕ ನಿಕ್ ಜೋನಸ್ ಹಾಗೂ ಅವರ ಸಹೋದರರ ಸಂಗೀತ ಕಾರ್ಯಕ್ರಮ ನ್ಯೂಯಾರ್ಕ್‌ನಲ್ಲಿ ಪ್ರಸಿದ್ಧಿ ಪಡೆದಿದೆ. ಜೋನಸ್ ಸಹೋದರರು ವೇದಿಕೆಯಲ್ಲಿ ಹಾಡುತ್ತಾರೆ ಎಂದರೆ ಅಭಿಮಾನಿಗಳು ಖುಷಿಯಲ್ಲಿಯೇ ಪಾಲ್ಗೊಳ್ಳುತ್ತಾರೆ. ಆದರೆ, ಈ ಬಾರಿ ನಿಕ್ ಜೋನಸ್‌ಗೆ ವೇದಿಕೆಯಲ್ಲಿ ಅಭಿಮಾನಿಯೊಬ್ಬರ ವಿಕೃತ ವರ್ತನೆ ಸ್ವಲ್ಪ ಮಟ್ಟಿಗೆ ಮುಜುಗರ ತಂದಿದೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗಂಡ ನಿಕ್ ಜೋನಸ್ ನ್ಯೂಯಾರ್ಕ್‌ನ ಸಾರ್ವಜನಿಕ ವೇದಿಕೆ ಮೇಲೆ ಹಾಡುತ್ತಿರುವಾಗ ಮಹಿಳೆಯೊಬ್ಬರ ಒಳ ಉಡುಪನ್ನು ಎಸೆಯಲಾಗಿದೆ.

ಇದನ್ನೂ ಓದಿ:ಸಿನಿಮಾ ಕೆಲಸಗಳಿಂದ ಪ್ರಭಾಸ್ ಲಾಂಗ್ ಬ್ರೇಕ್ – ಸರ್ಜರಿಗೆ ಒಳಗಾಗಲಿದ್ದಾರಂತೆ ಬಾಹುಬಲಿ ಹೀರೋ

ನ್ಯೂಯಾರ್ಕ್‌ನಲ್ಲಿ ಸಾರ್ವಜನಿಕ ವೇದಿಕೆ ಮೇಲೆ ನಿಕ್ ಜೋನಸ್ ಹಾಡುತ್ತಿದ್ದರು. ಪ್ರೇಕ್ಷಕರು ಕೂಡಾ ಖುಷಿಯಲ್ಲಿ ಹಾಡನ್ನು ಎಂಜಾಯ್ ಮಾಡುತ್ತಿದ್ದರು. ಇದೇ ವೇಳೆ ಮಹಿಳಾ ಅಭಿಮಾನಿಯೊಬ್ಬರು ತಮ್ಮ ಒಳ ಉಡುಪನ್ನು ಕಿತ್ತು ವೇದಿಕೆಯತ್ತ ಎಸೆದಿದ್ದಾರೆ. ಈ ವೇಳೆ ನಿಕ್ ಜೋನಸ್ ನೀಡಿದ ಪ್ರತಿಕ್ರಿಯೆ ಅನೇಕರಿಗೆ ಅಚ್ಚರಿ ಮೂಡಿಸಿದೆ. ತನ್ನತ್ತ ಬ್ರಾ ತೂರಿಬಂದರೂ ನಿಕ್ ವಿಚಲಿತರಾಗದೇ ಸಂಗೀತ ಮುಂದುವರೆಸಿದ್ದರು.

ಈ ಸಂಗೀತ ಕಾರ್ಯಕ್ರಮದಲ್ಲಿ ನಿಕ್ ಹಾಗೂ ಅವರ ಸಹೋದರರಾದ ಕೆವಿನ್ ಜೋನಸ್ ಹಾಗೂ ಜೋ ಜೋನಸ್ ಕೂಡಾ ಇದ್ದರು. ಜೊತೆಗೆ ನಿಕ್ ಪತ್ನಿ ಪ್ರಿಯಾಂಕ ಚೋಪ್ರಾ ಕೂಡಾ ಸಂಗೀತ ಕಾರ್ಯಕ್ರಮದ ವೇಳೆ ಹಾಜರಿದ್ದರು.  ನಿಕ್ ಜೋನಸ್ ಹಾಡುತ್ತಾ ಇರುವಾಗಲೇ ಮಹಿಳೆಯೊಬ್ಬರು ತನ್ನ ಬ್ರಾ ತೆಗೆದು ವೇದಿಕೆಗೆ ಎಸೆದಿದ್ದಾರೆ. ಇದನ್ನು ನೋಡಿ ಅವರಿಗೆ ಒಮ್ಮೆ ಅಚ್ಚರಿ ಆಗಿದೆ. ಅವರು ವಿಚಲಿತಗೊಳ್ಳದೆ ಹಾಡನ್ನು ಮುಂದುವರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋನ ಅಭಿಮಾನಿಗಳು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಬಗೆಬಗೆಯ ಕಮೆಂಟ್‌ಗಳು ಬರುತ್ತಿವೆ. ಅನೇಕರು ನಿಕ್ ಜೋನಸ್ ಅವರು ಈ ಘಟನೆಯಿಂದ ವಿಚಲಿತರಾಗದೇ ಇರುವುದನ್ನು ಮೆಚ್ಚಿಕೊಂಡಿದ್ದಾರೆ.

suddiyaana