ಮೊಬೈಲ್‌ ಬಿತ್ತೆಂದು ಮೆಟ್ರೋ ಟ್ರ್ಯಾಕ್‌ಗೆ ಹಾರಿದ ಮಹಿಳೆ!

ಮೊಬೈಲ್‌ ಬಿತ್ತೆಂದು ಮೆಟ್ರೋ ಟ್ರ್ಯಾಕ್‌ಗೆ ಹಾರಿದ ಮಹಿಳೆ!

ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮೆಟ್ರೋ ಟ್ರ್ಯಾಕ್‌ಗೆ ಮಹಿಳೆಯೊಬ್ಬರು ಹಾರಿದ ಆತಂಕಾರಿ ಘಟನೆ ನಡೆದಿದೆ. ಬೆಂಗಳೂರಿನ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಜಪಾನ್‌ನಲ್ಲಿ ಭೀಕರ ಭೂಕಂಪ, ಒಂದೇ ದಿನ 155 ಬಾರಿ ಕಂಪಿಸಿದ ಭೂಮಿ – 13 ಮಂದಿ ಸಾವು  

ಸೋಮವಾರ ಸಂಜೆ ಇಂದಿರಾನಗರ ಮೆಟ್ರೋ ಸ್ಟೇಷನ್‌ನಲ್ಲಿ ಮಹಿಳೆ ಮೆಟ್ರೋಗಾಗಿ ಕಾದು ನಿಂತಿದ್ದರು. ಈ ವೇಳೆ ಅವರ ಕೈಯಿಂದ ಮೊಬೈಲ್‌ ಮೆಟ್ರೋ ಟ್ರ್ಯಾಕ್‌ ಕೆಳಗೆ ಬಿದ್ದಿದೆ. ಅದನ್ನು ಎತ್ತಿಕೊಳ್ಳಲು ಮಹಿಳೆ ಟ್ರ್ಯಾಕ್‌ಗೆ ಜಿಗಿದಿದ್ದಾರೆ. ತಕ್ಷಣ ಎಚ್ಚೆತ್ತ ಮೆಟ್ರೋ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ಮಹಿಳೆಯ ಬೇಜವಾಬ್ದಾರಿತನದ ವರ್ತನೆಯಿಂದಾಗಿ 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು.

BMRCL ಸಿಬ್ಬಂದಿಯ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದೆ. ನೇರಳೆ ಮಾರ್ಗದ ಲೈನ್‌ನಲ್ಲಿ ಜಸ್ಟ್‌ ಮಿಸ್‌ ಆಗಿ ಮಹಿಳೆ ಬಚಾವ್‌ ಆಗಿದ್ದಾಳೆ. ವಿದ್ಯುತ್ ತೆಗೆದ ನಂತರ ಎಲ್ಲವನ್ನೂ ರೀಸೆಟ್ ಮಾಡಲು 15 ನಿಮಿಷ ಬೇಕಾಯಿತು. ಸೋಮವಾರ ಹೊಸ ವರ್ಷದಂದು ಪೀಕ್‌ಹವರ್‌ನಲ್ಲೇ ಈ ರೀತಿ ಸಮಸ್ಯೆ ಆಗಿದೆ. ಇದಕ್ಕೆ ವಿಷಾದಿಸುತ್ತೇವೆ ಎಂದು ಮೆಟ್ರೋ ಸ್ಪಷ್ಟನೆ ನೀಡಿದೆ.

Shwetha M