ಮನೆಯೊಂದರ ಆವರಣದಲ್ಲಿ ಮರಿ ಹಾಕಿದ ಕಾಡಾನೆ!

ಮನೆಯೊಂದರ ಆವರಣದಲ್ಲಿ ಮರಿ ಹಾಕಿದ ಕಾಡಾನೆ!

ಮನೆಯೊಂದರ ಆವರಣದಲ್ಲಿ ಕಾಡಾನೆಯೊಂದು ಮರಿ ಹಾಕಿರುವ ಘಟನೆ ವಿರಾಜಪೇಟೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಎಂಬಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ ಆನೆ ಮರಿ ಹಾಕಿದ್ದು, ಮಂಗಳವಾರ ಮುಂಜಾನೆ ಮನೆಯವರ ಗಮನಕ್ಕೆ ಬಂದಿದೆ. ಕಾಡಾನೆ ಮನೆಯ ಆವರಣದಲ್ಲಿ ಮರಿ ಹಾಕಿರುವ ವಿಚಾರ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ಬಂದು ವೀಕ್ಷಿಸಲಾರಂಭಿಸಿದ್ದಾರೆ. ಇದರಿಂದ ವಿಚಲಿತವಾದ ಕಾಡಾನೆಮರಿಯಾನೆಯನ್ನು ಬಿಟ್ಟು ತೆರಳಿದೆ.

ಇದನ್ನೂ ಓದಿ: ನೀರು ಅಂತಾ ಪ್ರವಾಸಿಗರು ತಂದ ಬೀಯರ್‌ ಕುಡಿಯಿತು! – ಎಣ್ಣೆ ಮತ್ತಲ್ಲಿ ಕಾಡು ಹಂದಿ ಮಾಡಿದ್ದೇನು ಗೊತ್ತಾ?

ಇನ್ನು ಆನೆ ಮರಿ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಆನೆ ಜನರನ್ನು ನೋಡಿ ಹೆದರಿ ಅಲ್ಲಿಂದ ಓಡಿಹೋಗಿದೆ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿಯು ಮರಿಯಾನೆಯೊಂದಿಗೆ ಕಾಡಾನೆಯನ್ನು ಹುಡುಕುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಆರ್‌ಎಫ್‌ಒ ದೇವಯ್ಯ, ಹೆಚ್ಚು ಜನ ಸೇರಿದ್ದರಿಂದ ತಾಯಿ ಅನೆ ಸ್ಥಳದಿಂದ ಹೊರಟಿದೆ. ಕಾಫಿತೋಟದಲ್ಲಿ ತೀರಾ ಇಳಿಜಾರು ಇದ್ದು, ಮರಿಯಾನೆಯೊಂದಿಗೆ ತಾಯಿ ಆನೆಯನ್ನು ಹುಡುಕುತ್ತಿದ್ದೇವೆ. ತಾಯಿ ಆನೆ ಜತೆ ಮರಿಯಾನೆಯನ್ನು ಸೇರಿಸಬೇಕಿದೆ ಎಂದು ಹೇಳಿದ್ದಾರೆ.

Shwetha M