ಸ್ನೇಹಿತನಿಗೆ ಉರಿಸಿ ಉರಿಸಿ ಸೇಬು ತಿಂದ ಮಂಗಣ್ಣ! – ಕಪಿ ಚೇಷ್ಠೆಗೆ ಜನ ಬೆರಗು

ಸ್ನೇಹಿತನಿಗೆ ಉರಿಸಿ ಉರಿಸಿ ಸೇಬು ತಿಂದ ಮಂಗಣ್ಣ! – ಕಪಿ ಚೇಷ್ಠೆಗೆ ಜನ ಬೆರಗು

ಕೋತಿಗಳು ಕುಂತಲ್ಲಿ ಕೂರಲ್ಲ. ನಿಂತಲ್ಲಿ ನಿಲ್ಲಲ್ಲ ಏನಾದರೊಂದು ಚೇಷ್ಠೆ ಮಾಡುತ್ತಿರುತ್ತವೆ. ಯಾರಿಗಾದರೂ ಏನಾದರೊಂದು ಕಿರಿಕ್ ಮಾಡುತ್ತಲ್ಲೇ ಇರುತ್ತದೆ. ಕೈಗೆ ಸಿಕ್ಕ ವಸ್ತುಗಳನ್ನು ಚೆಲ್ಲಾ ಪಿಲ್ಲಿ ಮಾಡೋದು, ಪ್ರವಾಸಿಗರ ಬ್ಯಾಗ್ ಕಿತ್ತುಕೊಳ್ಳೋದು ಮಂಗಗಳ ಹುಟ್ಟುಗುಣ ಅಂತಾನೇ ಹೇಳಬಹುದು. ಇದೀಗ ಕೋತಿಯೊಂದು ತನ್ನ ಸಹಚರನಿಗೆ ತಾಳ್ಮೆ ಪರೀಕ್ಷಿಸಿದೆ. ಈ ದೃಶ್ಯ ಮನುಷ್ಯನನ್ನೇ ಮೀರಿಸುವಂತಿದೆ.

ಇದನ್ನೂ ಓದಿ: ದಾರಿಗೆ ಅಡ್ಡಬಂದ ಗೇಟ್ – ಭಯಾನಕ ಮೊಸಳೆಗೆ ಇದ್ಯಾವ ಲೆಕ್ಕ ಬಿಡಿ..!

ಸಾಮಾಜಿಕ ಜಾಲತಾಣದಲ್ಲೊಂದು ಕೋತಿಗಳ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ, ಕೋತಿಯೊಂದು ಕೈಯಲ್ಲಿ ಸೇಬು ಹಣ್ಣನ್ನು ಹಿಡಿದುಕೊಂಡಿದೆ. ಅದರ ಪಕ್ಕದಲ್ಲಿ ಇನ್ನೊಂದು ಕೋತಿ ಕುಳಿತುಕೊಂಡಿದೆ. ಸೇಬು ತಿನ್ನುತ್ತಿದ್ದ ಕೋತಿಯು ಮತ್ತೊಂದು ಕೋತಿಯನ್ನು ಚುಡಾಯಿಸುತ್ತದೆ. ನಂತರ ಅದನ್ನು ತಿನ್ನಲು ಪ್ರಾರಂಭಿಸುತ್ತದೆ. ಇನ್ನೊಂದು ಕೋತಿ ಸೇಬನ್ನು ನೋಡುತ್ತಲೇ ಇರುತ್ತದೆ. ಆದರೆ ಮೊದಲ ಕೋತಿ ಅದಕ್ಕೆ ಸೇಬನ್ನು ಕೊಡುವುದಿಲ್ಲ. ಬದಲಾಗಿ ಪದೇ ಪದೇ ತೋರಿಸಿ ತಿನ್ನುತ್ತಿದೆ. ಎರಡನೇ ಕೋತಿಯು ಈ ಮಂಗಣ್ಣನ ಸಹವಾಸವೇ ಬೇಡ ಅಂತಾ ತನ್ನ ನೋಟವು ಸೇಬಿನಿಂದ ದೂರ ಸರಿಸಿದೆ. ಈ ವೇಳೆ ಸೇಬು ತಿನ್ನುತ್ತಿದ್ದ ಕೋತಿ ಅದರ ಮುಖವನ್ನು ಮತ್ತೆ ತನ್ನತ್ತ ತಿರುಗಿಸಿ ಸೇಬು ಹಣ್ಣನ್ನು ತಿನ್ನುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಂಗನಿಂದ ಮಾನವ ಅಂತಾ ಇದಕ್ಕೆ ಹೇಳೋದು. ನೋಡಿ ಈ ಕಪಿಗಳು ಮಾನವರಂತೆ ವರ್ತಿಸಿವೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಈ ವಿಡಿಯೋ ನೋಡಲು ಮುದ್ದಾಗಿದೆ ಅಂತಾ ಪ್ರತಿಕ್ರಿಯಿಸಿದ್ದಾರೆ.

 

View this post on Instagram

 

A post shared by Suddi Yaana (@suddiyaana)

suddiyaana