ಮನೆಯಲ್ಲಿ ಸೊಳ್ಳೆ ನಿವಾರಕ ರಿಫಿಲ್‌ ಬಳಸುತ್ತಿದ್ದೀರಾ..? – ಸೊಳ್ಳೆ ನಿವಾರಕ ಲಿಕ್ವಿಡ್‌ ನಿಂದ ಬಾಲಕಿಯ ಪ್ರಾಣವೇ ಹೊಯ್ತು!

ಮನೆಯಲ್ಲಿ ಸೊಳ್ಳೆ ನಿವಾರಕ ರಿಫಿಲ್‌ ಬಳಸುತ್ತಿದ್ದೀರಾ..? – ಸೊಳ್ಳೆ ನಿವಾರಕ ಲಿಕ್ವಿಡ್‌ ನಿಂದ ಬಾಲಕಿಯ ಪ್ರಾಣವೇ ಹೊಯ್ತು!

ಮನೆಯಲ್ಲಿ ಮಕ್ಕಳು ಇದ್ದರೆ ಮೈ ಎಲ್ಲಾ ಕಣ್ಣಾಗಿರಬೇಕು.. ಯಾಕೆಂದರೆ ಮಕ್ಕಳಿಗೆ ಏನೂ ಅರಿವಿರುವುದಿಲ್ಲ. ಹೀಗಾಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುತ್ತಾರೆ. ಹಾಗೂ ಕೈಗೆ ಸಿಕ್ಕ ವಸ್ತುಗಳನ್ನ ಹಿಡಿದು ಆಟವಾಡುತ್ತಾರೆ. ಒಂಚೂರು ಯಾಮಾರಿದರೂ ನಡೆಯಬಾರದ ದುರಂತ ನಡೆದು ಹೋಗುತ್ತದೆ. ಚೆನ್ನೈನಲ್ಲಿ ಇಂತಹದ್ದೇ ದುರಂತ ನಡೆದಿದೆ. ಪೋಷಕರ ಅಜಾಗರೂಕತೆಯಿಂದಾಗಿ ಎರಡು ವರ್ಷದ ಬಾಲಕಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸಣ್ಣ ಮಕ್ಕಳಿರುವ ಪೋಷಕರು ಸಿಕ್ಕ ಸಿಕ್ಕ ವಸ್ತುಗಳನ್ನು ಅಲ್ಲಲ್ಲಿ ಎಸೆದುಹೋಗುವ ಮುನ್ನ ಎಚ್ಚರ. ನಿಮ್ಮ ನಿರ್ಲಕ್ಷ್ಯವೇ ನಿಮ್ಮ ಮಕ್ಕಳ ಪ್ರಾಣಕ್ಕೆ ಕುತ್ತು ತರುವಂತೆ ಮಾಡಬಹುದು. ಚೆನ್ನೈನ ಮಾಧವರಂ ಮಿಲ್ಕ್ ಕಾಲೋನಿಯಲ್ಲಿ ಮಗು ಆಟವಾಡುತ್ತಾ ಸೊಳ್ಳೆ ನಿವಾರಕ ಲಿಕ್ವಿಡ್‌ ಸೇವಿಸಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ಬಸ್‌ನಿಂದ ಜಾರಿ ಬಿದ್ದ ಕಂಡಕ್ಟರ್ ದಾರುಣ ಅಂತ್ಯ – ದುಡಿಮೆ ಕೊಟ್ಟ ಬಸ್‌ನಿಂದಲೇ ಹಾರಿಹೋಯ್ತು ಪ್ರಾಣ..!

ಮೃತಪಟ್ಟ ಬಾಲಕಿಯನ್ನು ಲಕ್ಷ್ಮೀ ಎಂದು ಗುರುತಿಸಲಾಗಿದೆ. ಬಾಲಕಿಯ ತಂದೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ನಂದಿನಿ ಸ್ನಾನ ಮಾಡಲು ತೆರಳಿದ್ದರು. ಆಗ ಮನೆಯಲ್ಲಿ ಲಕ್ಷ್ಮಿ ಮತ್ತು ಆಕೆಯ ಅಕ್ಕ ಶಕ್ತಿ ಆಟವಾಡುತ್ತಿದ್ದರು. ನಂದಿನಿ ಸ್ನಾನದಿಂದ ಹೊರಬಂದು ನೋಡಿದಾಗ ಲಕ್ಷ್ಮಿ ಬಾಯಲ್ಲಿ ಸೊಳ್ಳೆ ನಿವಾರಕ ಲಿಕ್ವಿಡ್ ತುಂಬಿದ್ದ ಡಬ್ಬಿ ಇತ್ತು. ಕೂಡಲೇ ಬಾಯಿಯಿಂದ ನೊರೆ ಬರುತ್ತಿದ್ದ ಲಕ್ಷ್ಮಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಮಾಧವರಂ ಮಿಲ್ಕ್ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

suddiyaana