ಚಿನ್ನದ ಬೆಲೆಯಿದ್ದರೂ 1 ಕೆಜಿ ಟೊಮ್ಯಾಟೊಗೆ ಬರೀ 20 ರೂಪಾಯಿ – ವ್ಯಾಪಾರಿಯಿಂದ ಬಂಪರ್ ಆಫರ್

ಚಿನ್ನದ ಬೆಲೆಯಿದ್ದರೂ 1 ಕೆಜಿ ಟೊಮ್ಯಾಟೊಗೆ ಬರೀ 20 ರೂಪಾಯಿ – ವ್ಯಾಪಾರಿಯಿಂದ ಬಂಪರ್ ಆಫರ್

ಒಂದು ಕೆಜಿ ಟೊಮ್ಯಾಟೊ ಬೆಲೆ ಒಂದು ಕೆಜಿ ಚಿಕನ್ ದರವನ್ನೂ ಮೀರಿಸಿದೆ. ಒಂದು ಟೊಮ್ಯಾಟೊ ರೇಟ್ ಒಂದು ಮೊಟ್ಟೆ ದರಕ್ಕಿಂತಲೂ ಹೆಚ್ಚಿದೆ. ಹೀಗಾಗಿ ಅಡುಗೆ ಮನೆಯ ಕೆಂಪು ರಾಜಕುಮಾರನನ್ನ ಕೊಳ್ಳಲು ಗ್ರಾಹಕರು ಹಿಂದೆ ಮುಂದೆ ನೋಡುತ್ತಿದ್ದಾರೆ. ಸೆಂಚುರಿ, ಡಬಲ್ ಸೆಂಚುರಿ ಹೊಡೆದು ಮುನ್ನುಗ್ಗುತ್ತಿರುವ ಟೊಮ್ಯಾಟೊ ರೈತರೇ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.

ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಟೊಮ್ಯಾಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸರಬರಾಜು ಕೊರತೆ, ಹವಾಮಾನ ವೈಪರೀತ್ಯದಿಂದಾಗಿ ಟೊಮ್ಯಾಟೊ ಲಭ್ಯತೆ ಕಡಿಮೆಯಾಗಿದ್ದೇ ಇದಕ್ಕೆಲ್ಲಾ ಕಾರಣವಾಗಿದೆ. ಇತಿಹಾಸದಲ್ಲಿಯೇ ಇಷ್ಟೊಂದು ಬೆಲೆ ಟೊಮ್ಯಾಟೊಗೆ ಬಂದಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಅನ್ನದಾತರಿಗೆ ಚಿನ್ನದ ಬೆಲೆ. ಒಂದೆಡೆ ಬೆಳೆಗಾರರು ಲಾಭದಲ್ಲಿದ್ರೆ (Profit), ಕೊಳ್ಳುವವರು ಜೇಬಿಗೆ ಮಾತ್ರ ಬರೆ ಬೀಳುತ್ತಿದೆ. ಇನ್ನು ಸದ್ಯ ಮಾರುಕಟ್ಟೆಯಲ್ಲಿ ಪ್ರತಿ 10 ಕಿಲೋ ಟೊಮ್ಯಾಟೊಗೆ ಒಂದು ಸಾವಿರದಿಂದ ಸಾವಿರದ ಐನೂರು ದರ ಬಂದಿದೆ. ಇಂತಹ ದುಬಾರಿ ಬೆಲೆ ನಡುವೆ ತಮಿಳುನಾಡಿನ ಕಡಲೂರಿನಲ್ಲಿ ವ್ಯಾಪಾರಿಯೊಬ್ಬರು ತರಕಾರಿಗಳನ್ನ ಕೇವಲ 20 ರೂಪಾಯಿ ಕೆಜಿಗೆ ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: ಇನ್ನುಮುಂದೆ ಪಿಯುಸಿ ವಿದ್ಯಾರ್ಥಿಗಳಿಗೆ 80 ಅಂಕಗಳಿಗೆ ಎಕ್ಸಾಂ – ಪಾಸ್‌ ಮಾರ್ಕ್ಸ್ ಗೆ ಷರತ್ತು ಅನ್ವಯ!

38 ವರ್ಷದ ಡಿ ರಾಜೇಶ್, ಡಿ ಆರ್ ವೆಜಿಟೇಬಲ್ಸ್ ಮತ್ತು ಸೆಲ್ಲಾಕುಪಮ್‌ನ ಈರುಳ್ಳಿ ಅಂಗಡಿಯ ಮಾಲೀಕ, ಅವರು ಕರ್ನಾಟಕದ ಬೆಂಗಳೂರಿನಿಂದ ಸಾರಿಗೆ ಶುಲ್ಕ ಸೇರಿದಂತೆ ಪ್ರತಿ ಕಿಲೋಗೆ ₹ 60 ರಂತೆ 550 ಕೆಜಿ ಟೊಮ್ಯಾಟೊ ಖರೀದಿಸಿ ಬಡವರಿಗೆ ಸಹಾಯ ಮಾಡಲು ಪ್ರತಿ ಕಿಲೋಗೆ 20 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ಒಬ್ಬರಿಗೆ ತಲಾ ಒಂದು ಕಿಲೋ ಖರೀದಿಸಲು ಮಾತ್ರ ಸೀಮಿತಗೊಳಿಸಿದ್ದರು. ಈ ಆಫರ್ ಕೊಟ್ಟ ಕೆಲವೇ ನಿಮಿಷಗಳಲ್ಲಿ ಅಷ್ಟೂ ಟೊಮ್ಯಾಟೊ ಮಾರಾಟವಾಗಿದೆ.

ರಾಜೇಶ್ ಅವರು ತಮ್ಮ ಅಂಗಡಿಯ ವಾರ್ಷಿಕೋತ್ಸವದ ಸಲುವಾಗಿ ಇಂಥಾದ್ದೊಂದು ಆಫರ್ ಕೊಟ್ಟಿದ್ದರು.     ಹಾಗೇ ಈರುಳ್ಳಿ ಬೆಲೆ ಗಗನಕ್ಕೇರಿರುವಾಗ ₹10ಕ್ಕೆ ಹೇಗೆ ಮಾರಾಟ ಮಾಡಿದೆ ಎಂದು ವಿವರಿಸಿದ ಅವರು, ತಮ್ಮ ಅಂಗಡಿಯ ವಾರ್ಷಿಕೋತ್ಸವವನ್ನು ನೆನಪಿಟ್ಟುಕೊಳ್ಳಲು ಪ್ರತಿ ವರ್ಷ ರಿಯಾಯಿತಿ ನೀಡುವುದಾಗಿ ಹೇಳಿದರು. ‘ನಾನು ಅಂಗಡಿಯನ್ನು ಸ್ಥಾಪಿಸಿದಾಗ, 2019 ರಲ್ಲಿ, ಈರುಳ್ಳಿ ಬೆಲೆ ಕೆಜಿಗೆ 100 ಕ್ಕಿಂತ ಹೆಚ್ಚಿತ್ತು. ಆದರೆ ನಾನು ಅದನ್ನು ಆರಂಭಿಕ ಕೊಡುಗೆಯಾಗಿ ಕೆಜಿಗೆ 10 ಕ್ಕೆ ಮಾರಾಟ ಮಾಡಿದೆ’ ಎಂದು ಅವರು ಹೇಳಿದರು. ಚೆನ್ನೈನಲ್ಲಿ ಸದ್ಯ ಟೊಮ್ಯಾಟೊ ಕೆಜಿಗೆ ₹100-130ಕ್ಕೆ ಮಾರಾಟವಾಗುತ್ತಿದೆ. ಕಳೆದ ತಿಂಗಳು, ರಾಜ್ಯ ಸರ್ಕಾರವು ಪ್ರತಿ ಕೆಜಿಗೆ ₹ 68 ರ ಸಬ್ಸಿಡಿ ದರದಲ್ಲಿ ಪಡಿತರ ಅಂಗಡಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ, ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಸ್ವಲ್ಪ ವಿಶ್ರಾಂತಿ ನೀಡುವ ಪ್ರಯತ್ನದಲ್ಲಿದೆ ಎಂದು ಹಲವು ವರದಿಗಳು ಉಲ್ಲೇಖಿಸಿವೆ.

suddiyaana