ವಿಮಾನದಲ್ಲೇ ಸ್ಕೂಲ್, ಆಫೀಸ್ ಗಳಿಗೆ ಸಂಚಾರ – ಈ ಊರಿನ ಪ್ರತೀ ಮನೆಯಲ್ಲೂ ಇವೆ ಫ್ಲೈಟ್!

ವಿಮಾನದಲ್ಲೇ ಸ್ಕೂಲ್, ಆಫೀಸ್ ಗಳಿಗೆ ಸಂಚಾರ – ಈ ಊರಿನ ಪ್ರತೀ ಮನೆಯಲ್ಲೂ ಇವೆ ಫ್ಲೈಟ್!

ನಮ್ಮ ದೇಶದಲ್ಲಿ  ಸ್ಕೂಲ್, ಕಾಲೇಜು, ಆಫೀಸಿಗೆ ಆಟೋ, ಬಸ್ಸು, ಕಾರು, ಬೈಕ್ ಗಳಲ್ಲಿ ತೆರಳುತ್ತಾರೆ. ಮನೆ ಸಮೀಪವೇ ಇದ್ರೆ ನಡೆದುಕೊಂಡು ಹೋಗೋದು ಸಾಮಾನ್ಯ. ದೂರದ ಊರುಗಳಿಗೆ ಜನ ರೈಲು, ವಿಮಾನದಲ್ಲಿ ಹೋಗುತ್ತಾರೆ.  ಆದರೆ ಈ ದೇಶದ ಒಂದು ಊರಲ್ಲಿ ಮಾತ್ರ ಜನರು ಕಚೇರಿಗೆ, ಸ್ಕೂಲ್, ಕಾಲೇಜಿಗೆ ಹೋಗಲು ವಿಮಾನವನ್ನೇ ಬಳಸುತ್ತಾರಂತೆ!

ಹೌದು, ಅಮೆರಿಕದ ಕ್ಯಾಮರೂನ್ ಪಾರ್ಕ್ ನಲ್ಲಿರುವ ನಿವಾಸಿಗಳು ಸ್ವಂತ ವಿಮಾನಗಳನ್ನು ಹೊಂದಿದ್ದಾರೆ. ಎಲ್ಲೆಡೆ ಜನರು ತಮ್ಮ ಮನೆಗಳಲ್ಲಿ ಕಾರು, ಬೈಕ್ಗಳನ್ನು ನಿಲ್ಲಿಸುವಂತೆ ವಿಮಾನಗಳನ್ನು ನಿಲ್ಲಿಸುತ್ತಾರೆ.

ಇದನ್ನೂ ಓದಿ ‘ಕೇಕ್ ಗೌನ್’ ತೊಟ್ಟು ಹೆಜ್ಜೆ ಹಾಕಿದ ಸುಂದರಿ – ಹೇಗಿತ್ತು ಗಿನ್ನೆಸ್ ದಾಖಲೆ ಬರೆದ ಕ್ಷಣ..!?

ಈ ಹಳ್ಳಿಯ ಪ್ರತಿ ಬೀದಿ, ಮನೆ ಮುಂದೆ ಜಾಗ ವಿಶಾಲವಾಗಿದೆಯಂತೆ. ಹಾಗಾಗಿ ಎಲ್ಲ ಮನೆಗಳಲ್ಲೂ ಕಾರು, ಬೈಕ್ ಗಳಂತೆ ವಿಮಾನಗಳನ್ನು ಇಟ್ಟುಕೊಳ್ಳಲಾಗಿದೆ. ಹೀಗಾಗಿ ಯಾವುದೇ ಭಯವಿಲ್ಲದೆ ವಿಮಾನ ಮತ್ತು ಕಾರು ಪರಸ್ಪರ ಸುಲಭವಾಗಿ ಮತ್ತು ಸುರಕ್ಷಿತವಾಗಿ ಹಾದುಹೋಗಬಹುದು. ಇದರ ಜೊತೆಗೆ, ಈ ವಿಮಾನಗಳನ್ನು ಲ್ಯಾಂಡಿಂಗ್ ಮಾಡಲು ಒಂದೊಂದು ಕಂಪನಿಯ ವಿಮಾನಗಳಿಗೆ ಒಂದೊಂದು ಹೆಸರನ್ನು ಸೂಚಿಸಲಾಗಿದೆಯಂತೆ. ನಾವು ಕಾರು, ಬೈಕ್ ನಮಗೆ ಇಷ್ಟ ಬಂದ ಜಾಗದಲ್ಲಿ ಪಾರ್ಕ್ ಮಾಡುವಂತೆ ವಿಮಾನ ಪಾರ್ಕ್ ಮಾಡಬಾರದಂತೆ. ಸೂಚಿಸಿರುವ ಜಾಗದಲ್ಲೇ ಲ್ಯಾಂಡಿಂಗ್ ಮಾಡಬೇಕಂತೆ.

2ನೇ ವಿಶ್ವ ಯುದ್ದದ ನಂತರ ಅನೇಕ ವಿಮಾನ ನಿಲ್ದಾಣಗಳು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಉಳಿದುಕೊಂಡಿವೆ ಮತ್ತು ಪೈಲಟ್‌ಗಳ ಸಂಖ್ಯೆಯು 1939 ರಲ್ಲಿ 34,000 ರಿಂದ 1946 ರ ವೇಳೆಗೆ 400,000 ಕ್ಕೆ ಏರಿತು. ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶಾದ್ಯಂತ ವಸತಿ ವಾಯುನೆಲೆಗಳನ್ನು ನಿರ್ಮಿಸಲು ಪ್ರಸ್ತಾಪಿಸಿತು. ಬಳಿಕ ಈ ಊರಿನಲ್ಲಿ ಏರ್ ಪಾರ್ಕ್ ಅನ್ನು ಮಾಡಲಾಯಿತಂತೆ.

suddiyaana