ಮೇಲ್ಸೇತುವೆಯಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿಗರ ಬಸ್‌ – 21 ಮಂದಿ ಸಾವು

ಮೇಲ್ಸೇತುವೆಯಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿಗರ ಬಸ್‌ – 21 ಮಂದಿ ಸಾವು

ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಮೇಲ್ಸೇತುವೆಯಿಂದ ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಪರಿಣಾಮ ಬಸ್‌ಗೆ ಬೆಂಕಿ ಹೊತ್ತುಕೊಂಡಿದ್ದು, ಇಬ್ಬರು ಮಕ್ಕಳು ಸೇರಿ ಸುಮಾರು 21 ಜನರು ಸಾವನ್ನಪ್ಪಿದ ಘಟನೆ ಇಟಾಲಿಯನ್ ನಗರದಲ್ಲಿ ನಡೆದಿದೆ.

ಕ್ಯಾಂಪ್‌ ಗ್ರೌಂಡ್‌ಗೆ ಪ್ರವಾಸಿಗರನ್ನು ಬಸ್‌ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸೇತುವೆಯ ಮೂಲಕ ವೆನಿಸ್‌ಗೆ ಸಂಪರ್ಕ ಕಲ್ಪಿಸುವ ಮೆಸ್ಟ್ರೆ ಜಿಲ್ಲೆಯ ರೈಲ್ವೆ ಹಳಿಗಳ ಬಳಿ ತಡೆಗೋಡೆ ಮುರಿದು ಬಸ್ ಪಲ್ಟಿಯಾಗಿದೆ. ದುರಂತದಲ್ಲಿ ಮೃತಪಟ್ಟವರ ಪೈಕಿ ಐವರು ಉಕ್ರೇನಿಯನ್ನರು, ಒಬ್ಬ ಜರ್ಮನ್ ಮತ್ತು ಇಟಾಲಿಯನ್ ಚಾಲಕ ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜೋಕಾಲಿಯಲ್ಲಿ ಮಕ್ಕಳನ್ನು ಆಟವಾಡಲು ಬಿಡುವ ಮುನ್ನ ಎಚ್ಚರ! – ಹಗ್ಗ ಕೊರಳಿಗೆ ಸುತ್ತಿಕೊಂಡು ಬಾಲಕ ಸಾವು

ಬಸ್ ಮಿಥೇನ್ ಅನಿಲದಿಂದ ಚಾಲಿತವಾಗಿದೆ. ಮೇಲ್ಸೇತುವೆಯಿಂದ ವಿದ್ಯುತ್ ತಂತಿಗಳ ಮೇಲೆ ಬಸ್‌ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕನಿಷ್ಠ 18 ಜನರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M