ಫುಲ್ ರಿಲಾಕ್ಸಿಂಗ್ ಮೂಡ್​​​​ನಲ್ಲಿ ಹುಲಿರಾಯ! – ಕೊಳದಲ್ಲಿ ಚೆಂಡಾಟವಾಡುತ್ತಾ ಜಾಲಿ ಮೂಡ್‌ನಲ್ಲಿ ಹುಲಿ!

ಫುಲ್ ರಿಲಾಕ್ಸಿಂಗ್ ಮೂಡ್​​​​ನಲ್ಲಿ ಹುಲಿರಾಯ! – ಕೊಳದಲ್ಲಿ ಚೆಂಡಾಟವಾಡುತ್ತಾ ಜಾಲಿ ಮೂಡ್‌ನಲ್ಲಿ ಹುಲಿ!

ಹುಲಿ ಕ್ರೂರ ಪ್ರಾಣಿ. ಇವುಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು. ಕಾಡಿನಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬೇರೆ ಪ್ರಾಣಿಗಳಿಗೆ ಭಯ ಹುಟ್ಟಿಸುತ್ತಿರುತ್ತವೆ. ಯಾವುದಾದ್ರೂ ಪ್ರಾಣಿ ಇವುಗಳ ಕಣ್ಣಿಗೆ ಬಿದ್ರೆ ಸಾಕು. ಅದರ ಕತೆ ಮುಗಿಯಿತು ಅಂತಲೇ ಲೆಕ್ಕ. ಅದನ್ನು ಹೇಗಾದರು ಮಾಡಿ ಬೇಟೆಯಾಡಿ ಕೊಂದು ಬಿಡುತ್ತವೆ. ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ನೀವು ಯಾವತ್ತಾದ್ರೂ ಹುಲಿಗಳು ಶಾಂತ ರೀತಿಯಿಂದ ವರ್ತಿಸುತ್ತಾ, ಪುಟ್ಟ ಮರಿಗಳಂತೆ ಆಟವಾಡುತ್ತಾ, ತುಂಟಾಟವಾಡುತ್ತ ಸಮಯ ಕಳೆಯುವುದನ್ನು ನೋಡಿದ್ದೀರಾ? ಹಾಗಾದ್ರೆ ಇಲ್ಲೊಂದು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ:ಮೂರು ಸಿಂಹ.. ಒಂದು ಮುಂಗುಸಿ ನಡುವೆ ಬಿಗ್‌ ಫೈಟ್! –‌ ದೊಡ್ಡ ಕಾಳಗದಲ್ಲಿ ಗೆದ್ದಿದ್ದು ಯಾರು ಗೊತ್ತಾ?

ಹುಲಿಗಳು ಕಾಡಿನಲ್ಲಿ ಯಾವುದಾದರೂ ಬೇಟೆ ಸಿಗುತ್ತಾ ಅಂತ ಅತ್ತಿಂದ ಇತ್ತ ಕಣ್ಣಾಯಿಸುತ್ತಾ ಗಾಂಭೀರ್ಯದಿಂದ ನಡೆದಾಡುತ್ತಿರುತ್ತವೆ. ಹೀಗೆ ಹುಲಿಗಳ ಶಿಕಾರಿ, ಕಾದಾಟ, ಗಾಂಭೀರ್ಯದ ನಡಿಗೆಯನ್ನು ನೋಡುವುದೇ ಚಂದ. ಇಲ್ಲೊಂದು ಹುಲಿ ಬೇಟೆಗೆ ಕೊಂಚ ಬ್ರೇಕ್ ನೀಡಿ ಕೊಳದ ನೀರಿನಲ್ಲಿ ತನ್ನ ಪಾಡಿಗೆ ಚೆಂಡಾಟವಾಡುತ್ತಾ ವಿಶ್ರಾಂತಿ ಪಡೆದಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಈ ಮುದ್ದಾದ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

kami-katze Cat ART ಎಂಬ ಫೇಸ್ ಬುಕ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಹುಲಿರಾಯ ಫುಲ್ ರಿಲಾಕ್ಸಿಂಗ್ ಮೂಡ್ ಅಲ್ಲಿ ಕೊಳದ ನೀರಿನಲ್ಲಿ ಚೆಂಡಾಟವಾಡುತ್ತ, ವಿಶ್ರಾಂತಿ ಪಡೆಯುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ ಕೊಳದಲ್ಲಿ ಹುಲಿರಾಯ, ಬೇಟೆಯಾಡಿ ಸುಸ್ತಾಗಿದೆ, ಸ್ವಲ್ಪ ವಿಶ್ರಾಂತಿ ಪಡೆದ್ರೆ ಚೆನ್ನಾಗಿರುತ್ತೆ ಅಂತ ಹೇಳಿ, ಕೆಂಪು ಬಣ್ಣದ ಚೆಂಡೊಂದನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾ, ಆ ಚೆಂಡಿನ ಮೇಲೆ ಮುಖವನ್ನಿಟ್ಟು ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.

ಜನವರಿ 11 ರಂದು ಹಂಚಿಕೊಳ್ಳಲಾದ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೋ ಕಂಡು ಹಲವರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಈ ಹುಲಿರಾಯ ನೀರಾಟವಾಡುವ ಮುದ್ದಾದ ದೃಶ್ಯವನ್ನು ಕಾಣಲು ಎರಡು ಕಣ್ಣು ಸಾಲದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಮುದ್ದಾಗಿದೆ, ಹುಲಿ ಚೆಂಡಾಟ ಆಡುವುದನ್ನು ಬಹಳ ಆನಂದಿಸುತ್ತಿದೆʼ ಎಂದು ಹೇಳಿದ್ದಾರೆ. ಇನ್ನು ಹಲವರು ಹುಲಿಯ ನೀರಿನಲ್ಲಿ ಆಟವಾಡುತ್ತ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ತುಂಬಾ ಮುದ್ದಾಗಿದೆ ಎನ್ನುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Shwetha M