ಜಿಂಕೆ ಮರಿ ಹಿಂದೆ ಹೋದವನ ಮೇಲೆ ಹುಲಿ ಡೆಡ್ಲಿ ಅಟ್ಯಾಕ್! - ಆಮೇಲೆ ಏನಾಯ್ತು?

ಆಹಾರ ಅರಸುತ್ತಾ ಕಾಡು ಪ್ರಾಣಿಗಳು ನಾಡಿಗೆ ಬರ್ತಿವೆ. ಕೆಲವೊಮ್ಮೆ ಕಾಡು ಪ್ರಾಣಿಗಳು ರಸ್ತೆ ಮಧ್ಯೆ ಪ್ರತ್ಯಕ್ಷವಾಗುತ್ತವೆ. ಇದೀಗ ಇಲ್ಲೊಂದು ಕಡೆ ರಸ್ತೆ ಪಕ್ಕ ಜಿಂಕೆ ಮರಿಯೊಂದು ಪ್ರತ್ಯಕ್ಷವಾಗಿದೆ. ಅದನ್ನ ಮುದ್ದಾಡಲು ಹೋದವನ ಮೇಲೆ ಹುಲಿ ಅಟ್ಯಾಕ್ ಮಾಡಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಗಿಲ್ಲಿ ಮೇಲೆ ಕೈ ಮಾಡಿದ ರಿಷಾ ಎಲಿಮಿನೇಷನ್ ಫಿಕ್ಸ್! – ಅಧಿಕೃತ ಸಂದೇಶ ಕೊಟ್ಟ ಬಿಗ್‌ಬಾಸ್!
ಹಸಿದ ಹುಲಿಗಳು ಯಾರೇ ಸಿಕ್ಕರೂ ಬಿಡುವುದೇ ಇಲ್ಲ. ಹೀಗಾಗಿ ಕಾಡು ಪ್ರದೇಶದ ರಸ್ತೆಗಳಲ್ಲಿ ಓಡಾಡುವಾಗ ಎಚ್ಚರದಿಂದ ಇರಬೇಕು. ಇದೀಗ ಇಲ್ಲೊಂದು ಕಡೆ ಸಫಾರಿ ವೇಳೆ ಹುಲಿಯೊಂದು ಪ್ರವಾಸಿಗನ ಮೇಲೆ ದಾಳಿ ಮಾಡಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಭಯಾನಕ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Srikanta Chinnu ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸಫಾರಿ ವೇಳೆ ಪ್ರವಾಸಿಗನೊಬ್ಬ ಜಿಂಕೆ ಕಂಡೊಡನೆ ಮುದ್ದಿಸಲು ಹೋಗಿದ್ದಾನೆ. ನೋಡ ನೋಡುತ್ತಿದ್ದಂತೆ ಹುಲಿಯೂ ಈ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು ಕೂದಲೆಳೆ ಅಂತರದಲ್ಲಿ ಹುಲಿಗೆ ಆಹಾರವಾಗುವುದರಿಂದ ತಪ್ಪಿಸಿಕೊಂಡಿದ್ದಾನೆ. ಈ ದೃಶ್ಯವನ್ನು ಅಲ್ಲೇ ಇದ್ದ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಹುಲಿಯನ್ನು ಕಂಡೊಡನೆ ತಮ್ಮ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದಾರೆ. ಸದ್ಯ ಇದ್ರ ವಿಡಿಯೋ ವೈರಲ್ ಆಗಿದ್ದು, ಕಾಡು ಪ್ರಾಣಿಗಳನ್ನ ಮುದ್ದಾಡಲು ಹೋಗುವವರಿಗೆ ಈ ವಿಡಿಯೋ ಎಚ್ಚರಿಕೆ ನೀಡಿದಂತಿದೆ.

ನೋಡಿರಿ

