RCB ಖರೀದಿಗೆ ಬಂತು ಮತ್ತೊಂದು ಕಂಪನಿ- 18 ಸಾವಿರ ಕೋಟಿಗೆ ಬಿಡ್ ಮಾಡೋಕೆ ರೆಡಿ

19ನೇ ಆವೃತ್ತಿಯ ಐಪಿಎಲ್ ಪ್ರಾರಂಭಕ್ಕೆ ಕೇವಲ ಎರಡು ವಾರಗಳು ಬಾಕಿ ಇರುವಾಗಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮತ್ತೊಬ್ಬ ಖರೀದಿದಾರರನ್ನು ಕಂಡುಕೊಂಡಿದೆ. ಕಳೆದ ವರ್ಷ RCB ಮಾಲೀಕರು ತಮ್ಮ ಫ್ರಾಂಚೈಸಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಗಿ ಘೋಷಣೆ ಮಾಡಿದ್ದರು. ಅಂದಿನಿಂದ ಹಲವಾರು ಉದ್ಯಮಿಗಳು ಮತ್ತು ಕಂಪನಿಗಳು ತಂಡ ಖರೀದಿ ಬಗ್ಗೆ ಆಸಕ್ತಿ ತೋರಿಸುತ್ತಿವೆ. ಇದೀಗ ಸ್ವೀಡಿಷ್ ಕಂಪನಿಯೊಂದು RCB ಖರೀದಿಸುವ ಬಯಕೆ ವ್ಯಕ್ತಪಡಿಸಿದೆ.
ಸ್ವೀಡಿಷ್ ಖಾಸಗಿ ಇಕ್ವಿಟಿ ಸಂಸ್ಥೆ ಇಕ್ಯೂಟಿ ಗ್ರೂಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದು ಬಿಡ್ ಮೊತ್ತವನ್ನು ಬಹಿರಂಗ ಪಡಿಸಿದ್ದಾರೆ. ಆರ್‌ಸಿಬಿ ಖರೀದಿಸಲು ಸುಮಾರು ₹18,000 ಕೋಟಿ ಬಿಡ್ ಮಾಡಬಹುದು ಎಂದು ವರದಿಗಳಾಗಿವೆ.
ಇದನ್ನೂ ಓದಿ: ಕಾಶ್ಮೀರದ ಮಾತಾ ವೈಷ್ಣೋದೇವಿಯ ದರ್ಶನ ಪಡೆದ ಅಭಿಷೇಕ್ ಶರ್ಮಾ
ಒಂದು ವೇಳೆ EQT ಗ್ರೂಪ್ RCB ಯನ್ನು ಸ್ವಾಧೀನಪಡಿಸಿಕೊಂಡರೆ, ಅದರ ಮೌಲ್ಯ ಸುಮಾರು 2 ರಿಂದ $2.1 ಬಿಲಿಯನ್ ಡಾಲರ್ ಆಗಲಿದೆ. ಇದು ವಿಶ್ವದ ಅತ್ಯಂತ ದುಬಾರಿ ಫ್ರಾಂಚೈಸ್ ಕ್ರೀಡಾ ತಂಡಗಳಲ್ಲಿ ಒಂದಾಗಬಹುದು. ಏತನ್ಮಧ್ಯೆ ಮಾರ್ಚ್ 16 ಬಿಡ್ಡಿಂಗ್‌ಗೆ ಕೊನೆಯ ದಿನಾಂಕ ಎಂದು ವರದಿಗಳು ಸೂಚಿಸುತ್ತವೆ. ಆರ್‌ಸಿಬಿಯ ಮಾತೃ ಕಂಪನಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ನವೆಂಬರ್ 2025ರಲ್ಲಿ ಆರ್‌ಸಿಬಿಯನ್ನು ಮಾರಾಟ ಮಾಡುವ ನಿರ್ಧಾರವನ್ನು ಘೋಷಿಸಿದರು. ಇದರಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿವೆ. ಆರ್‌ಸಿಬಿ ಮಾರಾಟ ಪ್ರಕ್ರಿಯೆ ಮಾರ್ಚ್ 31, 2026 ರೊಳಗೆ ಪೂರ್ಣಗೊಳ್ಳಲಿದೆ ಎಂದು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ತಿಳಿಸಿದೆ.
ಪ್ರಸ್ತುತ ಆರ್‌ಸಿಬಿಯನ್ನು ಸ್ವಾಧೀನಪಡಿಸಿಕೊಳ್ಳಲು ಇಕ್ಯೂಟಿ ನೆಚ್ಚಿನದಾಗಿ ಕಂಡುಬಂದರೂ, ಇತರ ಉದ್ಯಮಿಗಳು ಮತ್ತು ಕಂಪನಿಗಳು ಸಹ ಈ ರೇಸ್ನಲ್ಲಿ ಕಾಣಿಸಿಕೊಂಡಿವೆ. ಲ್ಯಾನ್ಸರ್ ಕ್ಯಾಪಿಟಲ್ಸ್‌ನ ಅವ್ರಾಮ್ ಗ್ಲೇಜರ್ ಸುಮಾರು $1.8 ಬಿಲಿಯನ್ ಬಿಡ್ ಮಾಡಿದೆ ಎಂದು ವರದಿಗಳಿವೆ. ಇದಲ್ಲದೆ ಆದರ್ ಪೂನವಾಲ, ರಂಜನ್ ಪೈ ಮತ್ತು ಅದಾನಿ ಗ್ರೂಪ್ ಸಹ ಆರ್‌ಸಿಬಿ ಖರೀದಿಸಲು ಆಸಕ್ತಿ ತೋರಿಸಿವೆ.

ನೋಡಿರಿ

