ಇಸ್ರೇಲ್ ದೇಶ ರಚನೆಯಾಗಿದ್ದರ ಹಿಂದಿದೆ ಅಚ್ಚರಿಯ ಕಥೆ – ಪ್ಯಾಲೆಸ್ತೀನ್ ಪರ ಭಾರತದ ನಿಲುವು ಬದಲಾಗಿದ್ದೂ ವಿಶೇಷ
ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧ ತಾರಕಕ್ಕೇರಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪರ ಬೆಂಬಲ ಸೂಚಿಸಿದ್ದಾರೆ. ಅಸಲಿಗೆ ಇಸ್ರೇಲ್ ದೇಶ ರಚನೆಯಾದ ಆರಂಭದ ವರ್ಷಗಳಲ್ಲಿ ಭಾರತವು ಪ್ಯಾಲೆಸ್ತೇನ್ ಪರ ಒಲವು ಹೊಂದಿತ್ತು. ದಶಕಗಳ ಈ ಒಡನಾಟದಲ್ಲಿ ಎರಡು ದೇಶಗಳ ನಡುವಿನ ನಿಲುವು ಬದಲಾಗಿದ್ದೇ ರೋಚಕವಾಗಿದೆ.
ಇದನ್ನೂ ಓದಿ : ಇಸ್ರೇಲ್ ಪರ ಬಿಜೆಪಿ.. ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತ ಕಾಂಗ್ರೆಸ್ – ಚರ್ಚೆಗೆ ಗ್ರಾಸವಾಯ್ತು ಪಕ್ಷಗಳ ಭಿನ್ನ ನಿಲುವು
ವಿಶ್ವಯುದ್ಧದ ವೇಳೆ ಪ್ಯಾಲೆಸ್ತೀನ್ ನಲ್ಲಿ ಮುಸ್ಲಿಮರು, ಕ್ರೈಸ್ತರು ಹಾಗೂ ಯಹೂದಿಗಳು ವಾಸ ಮಾಡುತ್ತಿದ್ದರು. ಧಾರ್ಮಿಕ ಮಹತ್ವ ಹೊಂದಿರುವ ಜೆರುಸಲೆಮ್ ನಗರ ಪ್ಯಾಲೆಸ್ತೀನ್ ದೇಶದ ರಾಜಧಾನಿಯಾಗಿತ್ತು, ಜೆರುಸಲೆಮ್ ನಗರ ಯಹೂದಿಗಳು, ಕ್ರೈಸ್ತರು ಹಾಗೂ ಮುಸ್ಲಿಮರಿಗೆ ಪವಿತ್ರ ತಾಣವಾಗಿತ್ತು. ಮೊದಲ ವಿಶ್ವ ಯುದ್ಧದ ವೇಳೆ ಪ್ಯಾಲೆಸ್ತೀನ್ ದೇಶ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ವಿಶ್ವದೆಲ್ಲೆಡೆಯಿಂದ ಯಹೂದಿಗಳು ಹಂತ ಹಂತವಾಗಿ ಪ್ಯಾಲೆಸ್ತೀನ್‌ಗೆ ಲಗ್ಗೆ ಇಟ್ಟರು. ಪ್ಯಾಲೆಸ್ತೀನ್‌ನಲ್ಲಿ ಮುಸ್ಲಿಮರ ಜೊತೆ ಸಹ ಜೀವನ ನಡೆಸಲು ಆರಂಭಿಸಿದರು. ನಂತರದ ದಿನಗಳಲ್ಲಿ ಯಹೂದಿಗಳು ಹಾಗೂ ಮುಸ್ಲಿಮರ ನಡುವೆ ಅಂತರ್ಯುದ್ದ ಶುರುವಾಗಿ ಧಾರ್ಮಿಕ ಅಲ್ಪಸಂಖ್ಯಾತರಾದ ಯಹೂದಿಗಳಿಗೆ ತಮ್ಮದೇ ಆದ ಒಂದು ದೇಶ ಇರಲಿಲ್ಲ. ಬಳಿಕ ಯಹೂದಿಗಳು ತಮ್ಮದೇ ಒಂದು ದೇಶ ಇರಬೇಕೆಂದು ಇಸ್ರೇಲ್ ದೇಶ ಘೋಷಣೆ ಮಾಡಿಕೊಂಡರು. ಯಹೂದಿಗಳಿಗೆ ದೇಶವೇ ಇಲ್ಲ ಎಂಬ ವಾದಕ್ಕೆ ಬ್ರಿಟಿಷರು ಹಾಗೂ ವಿಶ್ವಸಂಸ್ಥೆಯಿಂದ ಮನ್ನಣೆ ಕೂಡ ಸಿಕ್ಕಿತು. ವಿಶ್ವದ ಮೊದಲ ಯಹೂದಿ ದೇಶವಾಗಿ 1948, ಮೇ 18ರಂದು ಇಸ್ರೇಲ್ ಅಸ್ತಿತ್ವಕ್ಕೆ ಬಂತು. ಜೆರುಸಲೆಮ್ ಸೇರಿದಂತೆ ಹಲವು ಪ್ರದೇಶಗಳು ನನ್ನದು ಎಂದು ಹೇಳಿಕೊಂಡಿತು ಇಸ್ರೇಲ್. ಇಸ್ರೇಲ್ ದೇಶವಾಗಿದ್ದನ್ನು ಪ್ಯಾಲೆಸ್ತೇನ್ ಸೇರಿದಂತೆ ಅರಬ್ ರಾಷ್ಟ್ರಗಳಿಂದ ವಿರೋಧಿಸಿದವು. ಪ್ಯಾಲೆಸ್ತೀನ್ ವೆಸ್ಟ್ ಬ್ಯಾಂಕ್ ಮತ್ತು ಗಾಜಾಪಟ್ಟಿ ಎಂದು ಎರಡು ಭಾಗಗಳಾಗಿ ವಿಭಜನೆ ಮಾಡಲಾಯ್ತು. ವೆಸ್ಟ್ ಬ್ಯಾಂಕ್ ನಲ್ಲಿ ಪ್ಯಾಲೆಸ್ತೀನ್ ರಾಷ್ಟ್ರೀಯ ಪ್ರಾಧಿಕಾರದ ಪ್ರಜಾಪ್ರಭುತ್ವವಾದಿ ಸರ್ಕಾರ ಇದ್ರೆ ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರದ್ದೇ ದರ್ಬಾರ್ ಶುರುವಾಯಿತು.
ಆದರೆ ಜನಾಂಗದ ಮೇಲೆ ಇಸ್ರೇಲ್ ದೇಶ ಘೋಷಣೆಯನ್ನ ಒಪ್ಪದ ಅಂದಿನ ಭಾರತದ ಪ್ರಧಾನಿ ಜವಹರಲಾಲ್ ನೆಹರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಸೆ. 17, 1950 ರಂದು ಇಸ್ರೇಲ್ ದೇಶವನ್ನ ಅಂಗೀಕರಿಸಿ ಮುಂಬೈನಲ್ಲಿ ವಲಸೆ ಕಚೇರಿ ಸ್ಥಾಪನೆ ಮಾಡಲಾಯಿತು. ಹೀಗೆ ಶುರುವಾದ ರಾಜತಾಂತ್ರಿಕ ಸಂಬಂಧ ಹಂತಹಂತವಾಗಿ ಗಟ್ಟಿಯಾಗುತ್ತಾ ಹೋಗಿತ್ತು.. ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು 2017ರ ಜುಲೈ ಮೊದಲ ವಾರದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದರು.. ಇಸ್ರೇಲ್ ದೇಶ ರಚನೆ ಬಳಿಕ ಅಲ್ಲಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ರು. ಭೇಟಿಯ ಸಮಯದಲ್ಲಿ, ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಸುಧಾರಣೆಯಾಗಿತ್ತು. ಆಗಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು 2018ರ ಜನವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.