ರಾಜ್ಯದಲ್ಲಿ ರಣಬಿಸಿಲು – ಹೊಸ ತೊಡಕು ಹಬ್ಬಕ್ಕೂ ಮುನ್ನವೇ ಮಾಂಸ ಬೆಲೆಯಲ್ಲಿ ದಿಢೀರ್‌ ಏರಿಕೆ!

ರಾಜ್ಯದಲ್ಲಿ ರಣಬಿಸಿಲು – ಹೊಸ ತೊಡಕು ಹಬ್ಬಕ್ಕೂ ಮುನ್ನವೇ ಮಾಂಸ ಬೆಲೆಯಲ್ಲಿ ದಿಢೀರ್‌ ಏರಿಕೆ!

ಮಾಂಸಹಾರ ಪ್ರಿಯರಿಗೆ ಶಾಕಿಂಗ್‌ ಸುದ್ದಿಯಿದೆ. ಯುಗಾದಿ ಹಬ್ಬ ಹೊಸ ತೊಡಕು ಹಬ್ಬಕ್ಕೆ ಕೆಲವೇ ದಿನ ಬಾಕಿ ಉಳಿದಿರುವಾಗಲೇ ಕೋಳಿ, ಮೀನು ಸೇರಿ ಇತರ ಮಾಂಸಗಳ ಬೆಲೆ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ತಾಪದಿಂದಾಗಿ ಪ್ರಾಣಿ ಪಕ್ಷಿಗಳು ಸಾಯುತ್ತಿವೆ. ಕೋಳಿಗಳನ್ನು ಸಾಕುವುದು ಕಷ್ಟಕರವಾಗಿದೆ. ಇನ್ನು ತಾಪಮಾನ ಏರಿಕೆಯಿಂದಾಗಿ ಸಮುದ್ರದಲ್ಲಿ ಮೀನಿನ ಕ್ಷಾಮ ಹೆಚ್ಚಾಗಿದೆ. ಮಾಂಸ ಪೂರೈಕೆಯ ಕುಸಿತ ಮತ್ತು ಇನ್ನಿತರ ಕಾರಣಗಳಿಂದ  ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಇದನ್ನೂ ಓದಿ: ಬಿಸಿಲಿನ ಝಳಕ್ಕೆ ರಾಜ್ಯದ ಜನ ತತ್ತರ! – ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು!

ಮಾರುಕಟ್ಟೆಯಲ್ಲಿ  ಸ್ಕಿನ್‌ ಔಟ್ ಬಾಯ್ಲರ್‌ ಕೋಳಿ ಕೆಜಿಗೆ 230-240 ರೂಪಾಯಿ ತಲುಪಿದೆ. ಟೈಸನ್‌ 270 ರೂಪಾಯಿ, ಸಜೀವ ಬಾಯ್ಲರ್‌ ಕೋಳಿ ಕೆಜಿಗೆ 160-170 ರೂಪಾಯಿ ತನಕ ಬೆಲೆ ಏರಿಕೆಯಾಗಿದೆ. ಟೈಸನ್‌ ಜೀವಂತ ಕೋಳಿಗೆ ಕೆಜಿಗೆ 185 ರಿಂದ 190 ರೂಪಾಯಿ ತಲುಪಿದೆ. ಹೀಗಾಗಿ ಪ್ರತಿ ವಾರ 5-6 ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಮಾಂಸಹಾರಿಗಳ ಜೀಬಿಕೆ ಕತ್ತರಿ ಬೀಳಲಿದೆ.

ಮೀನು, ಕೋಳಿ, ಆಡು, ಕುರಿ ಮಾತ್ರವಲ್ಲ ಹಂದಿ ಮಾಂಸಕ್ಕೂ ಊಹಿಸದಷ್ಟು ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 300ರ ಆಸುಪಾಸಿನಲ್ಲಿದ್ದ ಹಂದಿ ಮಾಂಸದ ಬೆಲೆ 450 – 500ರ ಗಡಿ ದಾಟಿದೆ. ಬೆಂಗಳೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಂದಿ ಮಾಂಸದ ಬಳಕೆ ಹೆಚ್ಚು. ಪ್ರಸಕ್ತ ಮದುವೆ ಮತ್ತು ಇತರ ಸಮಾರಂಭಗಳ ಹಿನ್ನೆಲೆಯಲ್ಲಿ ಪೂರೈಕೆ ಕೂಡ ಕಮ್ಮಿ ಇದ್ದು ಬೆಲೆ ಏರಿಕೆಯಾಗಿದೆ.

Shwetha M