ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌ – ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್‌ ಹೆಚ್ಚಳ!

ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌ – ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್‌ ಹೆಚ್ಚಳ!

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಫ್ರೀ ಗ್ಯಾರಂಟಿಗಳಿಗೆ ಜನರು ಫುಲ್‌ ಖುಷಿಯಾಗಿದ್ದರು. ಬೆಲೆ ಏರಿಕೆಯಿಂದ ನಿಟ್ಟುಸಿರು ಬಿಡುವಂತಾಗಿದೆ. ಇನ್ನಾದರೂ ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ಜನರು ಅಂದುಕೊಳ್ಳುತ್ತಿರುವಾಗಲೇ ಸರ್ಕಾರ ಜನರಿಗೆ ದರ ಏರಿಕೆಯ ಶಾಕ್‌ ನೀಡಿದೆ. ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್ ಹೆಚ್ಚಳವಾಗಿದ್ದು ಮೇ ತಿಂಗಳ ಬಿಲ್ ನಲ್ಲಿ ನಿಗದಿತ ಶುಲ್ಕ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಗೆ ಸಿದ್ಧವಾಯ್ತು ಸಮಿತಿ – ಸೂಲಿಬೆಲೆ ಪಾಠಕ್ಕೆ ಕತ್ತರಿ!

ಗೃಹ ಬಳಕೆ ವಿದ್ಯುತ್‌ ಸಂಪರ್ಕಕ್ಕೆ ಪ್ರತಿ ಕಿ.ವ್ಯಾ ಗೆ 100 ರೂಪಾಯಿ ನಿಗದಿತ ಶುಲ್ಕ ಇತ್ತು. ಈ ಶುಲ್ಕವನ್ನು110 ರೂಪಾಯಿ ಏರಿಕೆ ಮಾಡಲಾಗಿದ್ದು, ಮೇ ತಿಂಗಳಿನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿಲಾಗಿದೆ. ಈಗಾಗಲೇ ಪ್ರತಿ ಯೂನಿಟ್ ಬೆಲೆ 70 ಪೈಸೆ ಹೆಚ್ಚಳವಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಫಿಕ್ಸೆಡ್ ಚಾರ್ಜ್ ಕೂಡ ದಿಢೀರ್ ಆಗಿ ಏರಿಕೆಯಾಗಿದೆ. ಗೃಹಬಳಕೆ ಸಂಪರ್ಕಕ್ಕೆ 50 ಕಿ.ವ್ಯಾ.ವರೆಗೆ ಪ್ರತಿ ಕಿ.ವ್ಯಾಗೆ 110 ರೂ. ನಿಗದಿತ ಶುಲ್ಕ ನಿಗದಿ ಮಾಡಲಾಗಿದೆ. 50 ಕೆ.ವಿ.ಮೇಲ್ಪಟ್ಟ ಬಳಕೆಗೆ ಪ್ರತಿ‌ ಕೆ.ವಿ.ಗೆ 210 ರೂ ನಿಗದಿ ಮಾಡಲಾಗಿದೆ.

ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ ಕಿ.ವ್ಯಾ.ಗೆ 125 ರೂ ಇದ್ದ ದರ ಮೇ ತಿಂಗಳಿನಿಂದ ‌200 ರೂ.ಗೆ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ 50 ಕಿ.ವ್ಯಾ.ಮೇಲಿನ ಬಳಕೆಗೆ ಪ್ರತಿ ಕಿ.ವ್ಯಾ.ಗೆ 300 ರೂ ನಿಗದಿ ಮಾಡಲಾಗಿದೆ.

ಇನ್ನು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಫಿಕ್ಸೆಡ್ ಮೊತ್ತವೂ ಉಚಿತವಾಗಿದೆ. ಅರ್ಹ ಫಲಾನುಭವಿಗಳಿಗೆ ನಿಗದಿತ ಶುಲ್ಕ ಹೊರೆ ಇರುವುದಿಲ್ಲ. ಗೃಹಜ್ಯೋತಿ ಫಲಾನುಭವಿಗಳ ಫಿಕ್ಸೆಡ್ ಚಾರ್ಜ್ ಸರ್ಕಾರವೇ ಪಾವತಿಸಲಿದೆ. ಆದರೆ ಜನರು ಏಪ್ರಿಲ್ ಹಾಗೂ ಮೇ ತಿಂಗಳ ಬಾಕಿ ಪಾವತಿ ಮಾಡುವುದು ಮಾಡಲೇಬೇಕು ಎಂದು ಸರ್ಕಾರ ಹೇಳಿದೆ.

suddiyaana