ಜೈಸ್ವಾಲ್ KISS ಕೊಟ್ಟಿದ್ಯಾರಿಗೆ? – ಹಿಟ್‌ಮ್ಯಾನ್ ಕಾಮಿಡಿ ಅಪೀಲ್!- YJಗೆ ಪೆಟ್ಟು.. ಪಾಂಡ್ಯಾಗೆ ನೋವು!

ಮುಂಬೈ ಇಂಡಿಯನ್ಸ್ ಸೋಲಲೆಂದೇ ಆಡಿತ್ತಾ ಅನ್ಸುತ್ತೆ.. ಯಾಕಂದ್ರೆ ಸುಲಭದ ಕ್ಯಾಚನ್ನು ಸಿಕ್ಸರ್‌ಗೆ ತಳ್ಳಿ.. ಹಿಡಿಯಬಹುದಾದ ಕ್ಯಾಚ್ ಕೈಚೆಲ್ಲಿ.. ಪಿಚ್ ಕ್ಯಾಚ್‌ಗೆ ಅಪೀಲ್ ಮಾಡಿ.. ಆರ್ ಆರ್ ವಿರುದ್ಧ ಮಗುಚಿ ಬಿದ್ದಿದೆ.. ನಿಜಕ್ಕೂ ಪ್ಲೇ ಆಫ್ ಗೆ ಹೋಗಬೇಕು ಎನ್ನುವ ಆಸೆಯನ್ನೇ ಕೈಚೆಲ್ಲಿದವರಂತೆ ಆಡಿ ಮುಂಬೈ ಸೋತಿದೆ.. ಯಶಸ್ವಿ ಜೈಸ್ವಾಲ್ ಭರ್ಜರಿ ಸೆಂಚುರಿಯೊಂದಿಗೆ ಕಂಬ್ಯಾಕ್ ಆಗಿರೋದು ಆರ್‌ಆರ್‌ಗೆ ಖುಷಿಯ ಸಮಾಚಾರ.. ಕೇವಲ ಆರ್ ಆರ್‌ಗೆ ಮಾತ್ರವಲ್ಲ.. ಟಿ20 ವರ್ಲ್ಡ್ ಕಪ್‌ಗೂ ಮೊದಲು ಇದು ಟೀಂ ಇಂಡಿಯಾಗೂ ಶುಭ ಸುದ್ದಿಯೇ.. ಮುಂಬೈ ವಿರುದ್ಧದ ಮ್ಯಾಚ್‌ನಲ್ಲಾದ ಕೆಲ ಇಂಟ್ರೆಸ್ಟಿಂಗ್ ಘಟನೆಗಳ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಂಪೈರ್ ವಿರುದ್ಧ ಅಸಮಾಧಾನ ಹೊರಹಾಕಿದ್ದೇ ತಪ್ಪಾಯ್ತು – ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐ ಕ್ರಮ
ಮುಂಬೈ ಟೀಂ ಎಲ್ಲಾ ರೀತಿಯ ಸ್ಟಾರ್‌ಗಳನ್ನು ಹೊಂದಿದ್ದರೂ ಗೆಲ್ಲೋ ಟೀಂ ಆಗಿ ಇನ್ನೂ ಕನ್ವರ್ಟ್ ಆಗಿಯೇ ಇಲ್ಲ.. ಕಳೆದ ಸೀಸನ್‌ನಲ್ಲಿ ಶುರುವಾದ ಮುಂಬೈ ಇಂಡಿಯನ್ಸ್‌ನ ಅಧಃಪತನ ಈಗ ಕ್ಯಾಪ್ಟನ್ ಚೇಂಜ್ ಆದ್ರೂ ಬದಲಾಗಿಲ್ಲ.. ಟೀಂ ಎಫರ್ಟ್ ಅನ್ನೋದು ಮುಂಬೈ ಇಂಡಿಯನ್ಸ್‌ನಲ್ಲಿ ಮರೀಚಿಕೆಯಾಗಿದೆ.. ಆದ್ರೆ ಐಪಿಎಲ್‌ನ ಟೇಬಲ್ ಟಾಪರ್ ರಾಜಸ್ಥಾನ ರಾಯಲ್ಸ್ ಮಾತ್ರ ತಾನ್ಯಾಕೆ ನಂ.1 ಅನ್ನೋದನ್ನು ಮುಂಬೈ ವಿರುದ್ಧ ಮತ್ತೆ ಸಾಬೀತುಪಡಿಸಿದೆ.. ಬ್ಯಾಟಿಂಗ್.. ಬೌಲಿಂಗ್.. ಫೀಲ್ಡಿಂಗ್ ಎಲ್ಲದ್ರಲ್ಲೂ ಮುಂಬೈ ಇಂಡಿಯನ್ಸ್ ಅನ್ನು ಮೀರಿಸಿದ ಆರ್‌ಆರ್ ಗೆದ್ದು ಬೀಗಿದೆ..
ಮೊದ್ಲಿಗೆ ನಿಮಗೆ ಯಶಸ್ವಿ ಜೈಸ್ವಾಲ್ ಕಿಸ್ಸಿಂಗ್ ಬಗ್ಗೆ ಹೇಳಲೇಬೇಕು.. ಈ ಸೀಸನ್‌ನಲ್ಲಿ ಸೋತತ ಬ್ಯಾಟಿಂಗ್ ಫೈಲ್ಯೂರ್ ಅನುಭವಿಸಿದ್ದರು ಜೈಸ್ವಾಲ್.. ಬಿಗ್ ಸ್ಕೋರ್ ಮಾಡೋದಿಕ್ಕೆ ಸಾಧ್ಯವೇ ಆಗಿರಲಿಲ್ಲ.. ಟೀಂ ಇಂಡಿಯಾದ ಭರವಸೆಯ ಓಪನರ್ ಜೈಸ್ವಾಲ್, ಐಪಿಎಲ್‌ನಲ್ಲಿ ಮಾತ್ರ ನಿರಾಶೆ ಮಾಡಿದ್ದರು.. ಈ ಸೀಸನ್‌ನ ಮೊದಲ 7 ಮ್ಯಾಚ್‌ಗಳಿಂದ ಜೈಸ್ವಾಲ್ ಗಳಿಸಿದ್ದು ಕೇವಲ 121 ರನ್.. ಇದರಲ್ಲಿ 39 ರನ್ ಹೊಡೆದಿದ್ದೇ ಅತಿಹೆಚ್ಚಿನ ಸ್ಕೋರ್ ಆಗಿತ್ತು.. ಓಪನರ್ ಬ್ಯಾಟ್ಸ್‌ಮನ್ ಇಷ್ಟೊಂದು ಬ್ಯಾಟಿಂಗ್ ವೈಫಲ್ಯ ಕಂಡರೆ ಆ ಟೀಂ ಅವರನ್ನು ಟಿ20ಯಲ್ಲಿ ಉಳಿಸಿಕೊಳ್ಳೋದು ಕಷ್ಟ.. ಹಾಗಿದ್ದರೂ ಆರ್ ಆರ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಹಾಗೂ ಹೆಡ್ ಕೋಚ್ ಕುಮಾರ ಸಂಗಕ್ಕಾರ ಅವರಿಗೆ ಮಾತ್ರ ಜೈಸ್ವಾಲ್ ಮೇಲಿನ ನಂಬಿಕೆ ಕಮ್ಮಿ ಆಗಿರಲಿಲ್ಲ.. ಇಂಪ್ಯಾಕ್ಟ್ ಪ್ಲೇಯರ್ ಆಪ್ಷನ್ ಕೂಡ ಟೀಂನಲ್ಲಿ ಜೈಸ್ವಾಲ್ ಸ್ಥಾನವನ್ನು ಗಟ್ಟಿ ಮಾಡಿತ್ತು.. ಆದ್ರೆ ತನ್ನ ಬ್ಯಾಟಿಂಗ್ ಶೈಲಿಗೆ ತಕ್ಕಂತೆ ಆಡದ ಜೈಸ್ವಾಲ್ ಮಾತ್ರ ಒಳಗೊಳಗೇ ಬೆಸ್ಟ್ ಪರ್ಫಾರ್ಮ್ ಮಾಡಲು ಕಾಯ್ತಾ ಇದ್ರು.. ಅದಕ್ಕೆ ತಕ್ಕಂತೆ ಮುಂಬೈ ವಿರುದ್ಧ ಮಿಂಚಿದ್ದಾರೆ.. ಅದರಲ್ಲೂ ಅದ್ಧೂರಿ ಶತಕದ ಜೊತೆಗೆ ಕಂಬ್ಯಾಕ್ ಮಾಡಿರುವ ಜೈಸ್ವಾಲ್ 60 ಎಸೆತಗಳಲ್ಲಿ 90 ರನ್ ಬಾರಿಸಿ ಮಿಂಚಿದ್ರು.. ಅದರಲ್ಲೂ 7 ಸಿಕ್ಸರ್ ಮತ್ತು 9 ಫೋರ್ ಸಿಡಿಸುವ ಮೂಲಕ ಅಬ್ಬರಿಸಿದ್ರು.. ಇನ್ನು ಈ ಮ್ಯಾಚ್‌ನಲ್ಲಿ ಬಹುಷಃ ಜೈಸ್ವಾಲ್ ಕೂಡ ಸೆಂಚುರಿ ನಿರೀಕ್ಷೆ ಮಾಡಿರಲಿಲ್ಲ ಅನ್ಸುತ್ತೆ..
ಕಳೆದ 7 ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ಮಾಡಿದ್ದ ಜೈಸ್ವಾಲ್‌ಗೆ ಈ ಸೀಸನ್‌ನಲ್ಲಿ ಮೊದಲ ಹಾಫ್ ಸೆಂಚುರಿ ಬಾರಿಸಿದಾಗಲೇ ಜಗತ್ತನ್ನು ಗೆದ್ದಂಗೆ ಆಗಿತ್ತು.. ಇದೇ ಕಾರಣಕ್ಕಾಗಿ ಹಾಫ್ ಸೆಂಚುರಿ ವೇಳೆ ತಮ್ಮ ಎಂದಿನ ಶೈಲಿಯಲ್ಲಿ ಕೈಯನ್ನು ಮುಷ್ಟಿ ಮಾಡಿ ತೋಳಿನ ಪವರ್ ತೋರಿಸಿದ ಜೈಸ್ವಾಲ್ ನಂತರ ಆರ್‌ಆರ್‌ನ ಡಗೌಟ್ ಕಡೆಗೆ ಫ್ಲೈಯಿಂಗ್ ಕಿಸ್ ರವಾನಿಸಿದ್ರು.. ಈ ಮೂಲಕ ತನ್ನ ವೈಫಲ್ಯದಲ್ಲೂ ಬೆನ್ನಿಗೆ ನಿಂತ ಟೀಂ ಸದಸ್ಯರಿಗೆ ವಿಶೇಷವಾದ ಧನ್ಯವಾದ ಸಲ್ಲಿಸಿದ್ರು ಜೈಸ್ವಾಲ್.. ಅಲ್ಲದೆ ತಮ್ಮ ಸೆಂಚುರಿಯ ಬಗ್ಗೆ ಮಾತಾಡಿದ ಜೈಸ್ವಾಲ್, ಈ ಸೀಸನ್‌ನಲ್ಲಿ ಎಲ್ಲಾ ರೀತಿಯಲ್ಲೂ ಉತ್ತಮ ಬ್ಯಾಟಿಂಗ್ ಮಾಡಲು ಎಫರ್ಟ್ ಹಾಕಿದ್ದೆ.. ಆದ್ರೆ ಮೊದಲ 7 ಪಂದ್ಯಗಳಲ್ಲಿ ತನ್ನಿಂದ ಒಳ್ಳೆಯ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.. ಹಾಗಿದ್ದರೂ ಇಂತಹ ಕಠಿಣ ಸಮಯದಲ್ಲಿ ತನ್ನ ಬೆನ್ನಿಗೆ ಕುಮಾರ ಸಂಗಕ್ಕಾರ ಹಾಗೂ ಸಂಜು ಬಾಯ್ ನಿಂತಿದ್ದರು ಎಂದು ಅಭಿನಂದನೆ ಸಲ್ಲಿಸಿದ್ರು.. ಇದು ಯಶಸ್ವಿ ಜೈಸ್ವಾಲ್ ದೊಡ್ಡತನವಾದ್ರೆ ಟೀಂ ಕ್ಯಾಫ್ಟನ್ ಸಂಜು ಸ್ಯಾಮ್ಸನ್ selfless ಕ್ರಿಕೆಟ್ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.. ಒಂದ್ಕಡೆ ಟೀಂ ಇಂಡಿಯಾದಲ್ಲಿ ಆಡಲು ಜೈಸ್ವಾಲ್ ಸೇರಿದಂತೆ ಯಂಗ್ ಪ್ಲೇಯರ್ಸ್ ಜೊತೆ ಕಾಂಪೀಟ್ ಮಾಡ್ತಿದ್ದರೂ ಸಂಜು ಮಾತ್ರ ಯಂಗ್‌ಸ್ಟರ್ ಯಶಸ್ವಿ ವಿಫಲರಾದಾಗ ಅವರ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ದಾರೆ.. ಅಲ್ಲದೆ ಯಶಸ್ವಿ ಜೈಸ್ವಾಲ್ ಸೆಂಚುರಿ ಹೊಡೆಯೋದಿಕ್ಕೂ ಕೂಡ ಕ್ರೀಸ್‌ನಲ್ಲಿದ್ದ ಸಂಜುವೇ ಕಾರಣಕರ್ತರಾದ್ರು.. ಜೈಸ್ವಾಲ್ 95 ರನ್ ಗಳಿಸಿದ ನಂತರ ತುಂಬಾನೇ ಸ್ಲೋ ಆಗಿದ್ರು.. ಹಾರ್ದಿಕ್ ಪಾಂಡ್ಯಾರಂತವರು ಕ್ರೀಸ್‌ನಲ್ಲಿ ಇರುತ್ತಿದ್ದರೆ, ಯಶಸ್ವಿ ಸೆಂಚುರಿ ಬಾರಿಸೋದಿಕ್ಕೂ ಮೊದಲೇ ಟೀಂ ಗೆಲ್ಲುವಂತೆ ಮಾಡಿ ಬಿಡುತ್ತಿದ್ದರು.. ಆದ್ರೆ ಸಂಜು ಒಂದ್ಕಡೆ ಚೆನ್ನಾಗಿ ಆಡ್ತಿದ್ದರೂ ಯಶಸ್ವಿ ಸೆಂಚುರಿ ಮಾಡಲಿ ಅಂತ ಸಿಂಗಲ್ ತಗೊಂಡು, ಸ್ಟ್ರೈಕ್ ಬಿಟ್ಟುಕೊಟ್ಟು ಶತಕ ಕಂಪ್ಲೀಟ್ ಆಗುವಂತೆ ನೋಡಿಕೊಂಡ್ರು..
ಇನ್ನು ಯಶಸ್ವಿ ಸೆಂಚುರಿ ಹೊಡೆಯೋದ್ರಲ್ಲಿ ಮುಂಬೈ ಫೀಲ್ಡರ್ಸ್ ಪಾತ್ರವೂ ಇತ್ತು.. ಅದರಲ್ಲೂ ಹಾಫ್ ಸೆಂಚುರಿ ಹೊಡೆದ ನಂತರ ಕೆಟ್ಟ ಶಾಟ್ ಒಂದಕ್ಕೆ ಜೈಸ್ವಾಲ್ ಕೈಹಾಕಿದ್ದರು.. ಬಾಲ್ ನೇರವಾಗಿ ನೇಹಲ್ ವಧೇರಾ ಕೈಗೆ ಹೋಗಿ ಬಿದ್ದಿತ್ತು.. ಆದ್ರೆ ಆ ಬಾಲನ್ನು ಕ್ಯಾಚ್ ಡ್ರಾಪ್ ಜೊತೆಗೆ ಬೌಂಡರಿಯಾಚೆಗೆ ತಳ್ಳಿ ಸಿಕ್ಸರ್ ಆಗುವಂತೆ ಮಾಡಿದ್ರು.. ಅಲ್ಲಿಂದ ನಂತರ ಜೈಸ್ವಾಲ್ ಸೆಂಚುರಿಯನ್ನು ಬಾರಿಸಿಯೇ ಸಿದ್ಧ ಎಂಬಂತೆಯೇ ಆಡಿದ್ರು..
ಇನ್ನು ಗೆರಾಲ್ಡ್ ಕೋಯಿಟ್ಜೆ ಬೌಲಿಂಗ್ ವೇಳೆ ವೇಗವಾಗಿ ಹೋದ ಬಾಲ್ ಹೋಗಿ ಯಶಸ್ವಿಯ ಎದೆಯ ಕೆಳ ಭಾಗಕ್ಕೆ ತಾಗಿತು.. ಜೈಸ್ವಾಲ್‌ಗೆ ಬಾಲ್ ಹೊಡೆದ ರಭಸ ಕಂಡ ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯೂ ಕೂಡ ಎದೆ ಹಿಡ್ಕೊಂಡು ನೋವು ಅನುಭವಿಸಿದ್ರು.. ಟೀಂ ಇಂಡಿಯಾದಲ್ಲಿ ಸಹ ಆಟಗಾರ ಆಗಿರುವ ಯಶಸ್ವಿಯ ಆಟಕ್ಕೆ ಹಾರ್ದಿಕ್ ಕಂಪ್ಲೀಟ್ ಆಗಿ ಮನಸೋತಿದ್ದು, ಅವರ ಮುಖದಲ್ಲೇ ಗೊತ್ತಾಗುತ್ತಿತ್ತು..
ಈ ಮ್ಯಾಚ್‌ನಲ್ಲಿಇನ್ನೊಂದು ತಮಾಷೆ ನಡೆಯಿತು.. ಬುಮ್ರಾ ಬೌಲಿಂಗ್‌ನಲ್ಲಿ ಯಶಸ್ವಿ ಹೊಡೆದ ಬಾಲನ್ನು ಎಕ್ಸ್‌ಟ್ರಾ ಕವರ್‌ನಲ್ಲಿ ಫೀಲ್ಡ್ ಮಾಡ್ತಿದ್ದ ರೋಹಿತ್ ಶರ್ಮಾ ಡೈವ್ ಮಾಡಿ ಹಿಡಿದ್ರು.. ಬಾಲ್ ಬಂದ ವೇಗಕ್ಕೆ ತಾನು ಕ್ಯಾಚ್ ಹಿಡಿದುಬಿಟ್ಟೆ ಅಂದ್ಕೊಂಡು ರೋಹಿತ್ ಶರ್ಮಾ, ಅಂಪೈರ್ ಕಡೆಗೆ ನೋಡಿ ಅಪೀಲ್ ಮಾಡಿದ್ರು.. ಆದ್ರೆ ಶರ್ಮಾ ಅಪೀಲ್‌ನಲ್ಲೂ ಕಾನ್ಫಿಡೆನ್ಸ್ ಇರಲಿಲ್ಲ.. ನೋಡಿದ್ರೆ ಬಾಲ್ ರೋಹಿತ್ ಶರ್ಮಾ ಕೈ ಸೇರುವ ಮೊದಲೇ ಪಿಚ್ ಆಗಿತ್ತು..
ಇಡೀ ಮ್ಯಾಚ್‌ನಲ್ಲಿ ಸಂದೀಪ್ ಶರ್ಮಾ ಭರ್ಜರಿ ಬೌಲಿಂಗ್ ಮೂಲಕ ಐದು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ್ರು.. ಈ ಸೀಸನ್‌ನಲ್ಲಿ ಸಂದೀಪ್ ಶರ್ಮಾ ಅವರನ್ನು ಆರ್ ಆರ್ ತಂಡ ತುಂಬಾ ಚ್ಯೂಸಿಯಾಗಿ ಪ್ಲೇಯಿಂಗ್ ಲೆವೆನ್‌ನಲ್ಲಿ ಆಡಿಸುತ್ತಿದೆ.. ಕೆಲ ಮ್ಯಾಚ್‌ಗಳಲ್ಲಿ ರೆಸ್ಟ್ ಕೊಡುತ್ತಾ ಇಂಪಾರ್ಟೆಂಟ್ ಮ್ಯಾಚ್‌ಗಳಿಗಾಗಿ ಅವರನ್ನು ಮೀಸಲಿಟ್ಟಿದೆ.. ಈ ಮೂಲಕ ಬೆಸ್ಟ್ ರಿಸಲ್ಟ್ ಪಡೆಯೋದ್ರಲ್ಲೂ ಯಶಸ್ವಿಯಾಗಿದೆ.. ಆರ್‌ಆರ್ ತಂಡದ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಮುಂಬೈ ಟೀಂ ನೀಡಿದ 180 ರನ್‌ಗಳ ಟಾರ್ಗೆಟ್ ಕೂಡ ಸಣ್ಣದಾಗಿ ಕಾಣಿಸ್ತು.. ಹೆಚ್ಚೇನೂ ಟೆನ್ಶನ್ ಇಲ್ಲದೆ ಬ್ಯಾಟಿಂಗ್ ಮಾಡಿದ ಆರ್ ಆರ್ ಈ ಸೀಸನ್‌ನಲ್ಲಿ ಪ್ಲೇಆಫ್ ಪ್ರವೇಶಿಸುವ ಹೊಸ್ತಿಲಲ್ಲಿ ನಿಂತಿದೆ.. ಇನ್ನು ಒಂದೇ ಒಂದು ಮ್ಯಾಚ್ ಗೆದ್ದರೂ ಆರ್‌ಆರ್‌ನ ಪ್ಲೇಆಫ್ ಟಿಕೆಟ್ ಕನ್ಫರ್ಮ್ ಆಗಲಿದೆ.. ಆದ್ರೆ ಐದು ಬಾರಿಯ ಚಾಂಪಿಯನ್ ಮುಂಬೈ ಮಾತ್ರ ಕ್ಯಾಪ್ಟನ್ ಬದಲಾದ್ರೂ ಆಡಿದ 8 ಮ್ಯಾಚ್‌ಗಳ ನಂತರವೂ ಏಳನೇ ಸ್ಥಾನದಲ್ಲಿದೆ.. ಹೀಗಾಗಿ ಇಲ್ಲಿಂದ ಪ್ಲೇಆಫ್ ತಲುಪಬೇಕು ಅಂದ್ರೆ ಮುಂಬೈ ಟೀಂ ನಿಜಕ್ಕೂ ಮ್ಯಾಜಿಕ್ ಮಾಡಲೇಬೇಕಿದೆ..