ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿನಿ ನೇಣಿಗೆ ಶರಣು – ಕಾರಣ ಕೇಳಿದ್ರೆ ಅಯ್ಯೋ ಅನ್ನಿಸುತ್ತೆ
17 ವರ್ಷದ ವಿದ್ಯಾರ್ಥಿನಿ. ಮನೆಯವರ ಪಾಲಿಗೆ ಅವಳೇ ನಗುವಾಗಿದ್ದಳು. ಆದರೆ ಹೊಟ್ಟೆನೋವು ಅನ್ನೋ ರೋಗ ಅವಳ ಬದುಕನ್ನೇ ಬಲಿ ಪಡೆದಿದೆ. ಹೊಟ್ಟೆ ನೋವು ತಾಳಲಾರದೇ ಕಾಲೇಜು ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ಇಂಥಾದ್ದೊಂದು ದುರಂತ ನಡೆದಿದೆ.
ಇದನ್ನೂ ಓದಿ : ಮದುವೆಯಾಗದೇ ಗರ್ಭಿಣಿಯಾದ ಅಪ್ರಾಪ್ತ ಮಗಳು – ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಕುಟುಂಬಸ್ಥರು
ನಂಜನಗೂಡು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ 17 ವರ್ಷ ವಯಸ್ಸಾಗಿತ್ತು. ಮೃತ ರೇಣುಕಾ ನಂಜನಗೂಡು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ರೇಣುಕಾಗೆ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವಿನ ಹಾದಿ ಹಿಡಿದಿದ್ದಾಳೆ. ವಿದ್ಯಾರ್ಥಿನಿ ಗೋಳೂರು ಗ್ರಾಮದ ಮಹದೇವು ಎಂಬುವರ ಪುತ್ರಿಯಾಗಿದ್ದಳು. ವಿದ್ಯಾರ್ಥಿನಿಗೆ ಪದೇಪದೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಮನನೊಂದಿದ್ದ ಆಕೆ, ಮಾನಸಿಕವಾಗಿ ಕುಗಿದ್ದಳು. ಆಸ್ಟತ್ರೆಗಳನ್ನು ಸುತ್ತಿದರೂ ಹೊಟ್ಟೆನೋವು ಕಡಿಮೆಯಾಗುತ್ತಿಲ್ಲ ಎಂಬ ಚಿಂತಿಸುತ್ತಿದ್ದ ವಿದ್ಯಾರ್ಥಿನಿ, ಕೊನೆಗೆ ಸಾವಿಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗಳನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಕರಣ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ, ಪಿಎಸ್ಐ ರಾಮಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.