ಮೂರು ತಿಂಗಳಲ್ಲಿ ಆರು ಬಾರಿ ಮಾತ್ರ ಶಾಲೆಗೆ – ನೋವನ್ನು ಬಚ್ಚಿಟ್ಟುಕೊಂಡೇ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದ ವಿದ್ಯಾರ್ಥಿನಿ

ಮೂರು ತಿಂಗಳಲ್ಲಿ ಆರು ಬಾರಿ ಮಾತ್ರ ಶಾಲೆಗೆ – ನೋವನ್ನು ಬಚ್ಚಿಟ್ಟುಕೊಂಡೇ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದ ವಿದ್ಯಾರ್ಥಿನಿ

ಆಕೆ ಹದಿಹರೆಯಕ್ಕೆ ಕಾಲಿಟ್ಟ ಹುಡುಗಿ. ಈಗಿನ್ನೂ ಹತ್ತನೇ ತರಗತಿ. ಆದರೆ, ಯಾಕೋ ಮಂಕಾಗಿ ಹೋಗಿದ್ದಳು. ಮನೆಯಲ್ಲಿ ಅಪ್ಪ ಅಮ್ಮನಿಗೆ ಅವರದ್ದೇ ಜವಾಬ್ದಾರಿಗಳು. ಈ ನಡುವೆ ಕಳೆದ ಮೂರು ತಿಂಗಳಿಂದ ಕೇವಲ ಮೂರು ಬಾರಿಯಷ್ಟೇ ತನ್ನ ಶಾಲೆಗೆ ಹೋಗಿದ್ದಳು. ಎಸ್ಎಸ್ಎಲ್‌ಸಿ ಮೊದಲೇ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ತಿರುವು ನೀಡುವ ಹಂತ. ಹೀಗಿದ್ದರೂ ಈಕೆಗೆ ಅದೇನೋ ನೋವು. ಏನಾಯ್ತು ಮಗಳೇ ಎಂದು ತಂದೆ ತಾಯಿ ಕೇಳುವಷ್ಟರಲ್ಲಿ ಆಕೆಯೇ ಈ ಲೋಕದಿಂದ ದೂರ ಆಗಿದ್ದಾಳೆ.

ಇದನ್ನೂ ಓದಿ: ಬಾಲ ತುಳಿದ ಸಿಟ್ಟೋ.. ಬಾಲಕನ ಮೇಲೆ ದ್ವೇಷವೋ? – ಹುಡುಕಿಕೊಂಡು ಬಂದು 9 ಬಾರಿ ಕಚ್ಚಿಹೋದ ವಿಷಸರ್ಪ..!

ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ 15 ವರ್ಷದ ಹುಡುಗಿ ಜೆಸ್ಸಿಕಾ ಹೆತ್ತವರ ಜೊತೆ ವಾಸವಾಗಿದ್ದಳು. ಆದರೆ, ಆಗಸ್ಟ್ 29ರಂದು ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಜೆಸ್ಸಿಕಾ ಮೃತಪಟ್ಟಿದ್ದಾಳೆ. ಬೆಳಿಗ್ಗೆ 10.30ಕ್ಕೆ ಈ ದಾರುಣ ಘಟನೆ ಸಂಭವಿಸಿದೆ. ಜೆಸ್ಸಿಕಾ, ತಾನು ವಾಸವಿದ್ದ ಫ್ಲೋರ್‌ನ ಮೇಲಿನ ಫ್ಲೋರ್‌ಗೆ ಹೋಗಿದ್ದಳು. ಆದ್ರೆ, ಅದೇನಾಯ್ತೋ ಏನು 12ನೇ ಮಹಡಿ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಜೆಸ್ಸಿಕಾಳ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೂಲತಃ ತಮಿಳುನಾಡಿನ ಮೂಲದ ಕುಟುಂಬ ಕಳೆದ ಎರಡು ವರ್ಷದಿಂದ ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ ವಾಸವಿತ್ತು. ಜೆಸ್ಸಿಕಾಳ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದುಮ ತಂದೆ ಸಹ ಉದ್ಯೋಗಿಯಾಗಿದ್ದಾರೆ. ಇನ್ನು 10ನೇ ತರಗತಿ ವ್ಯಸಾಂಗ ಮಾಡುತ್ತಿದ್ದ ಜೆಸ್ಸಿಕಾ, ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದ್ದು, ಇದರಿಂದ ಇತ್ತಿಚೆಗೆ ಶಾಲೆಗೂ ಸಹ ಸರಿಯಾಗಿ ಹೊಗುತ್ತಿರಲಿಲ್ಲವಂತೆ. ಕಳೆದ ಮೂರು ತಿಂಗಳಲ್ಲಿ 6 ದಿನ ಮಾತ್ರ ತರಗತಿಗೆ ಹೋಗಿದ್ದಳಂತೆ. ಈ ಹಿನ್ನೆಲೆಯಲ್ಲಿ ಬಾಲಕಿ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಪ್ರತಿಕ್ರಿಯಿಸಿದ್ದು, 15 ವರ್ಷದ ಹುಡುಗಿ ಜೆಸ್ಸಿಕಾ ಎನ್ನುವ ಬಾಲಕಿ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ತಂದೆ ಸಾಫ್ಟ್ ವೇರ್ ಇಂಜಿನಿಯರ್. ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇಂದು ಬೆಳಗ್ಗೆ ಬಾಲಕಿ ಶಾಲೆಗೆ ಹೋಗಿ ಪುನಃ ವಾಪಸ್ ಬಂದಿದ್ದಾರೆ. ನಂತರ ಟೀಚರ್ ತಾಯಿಗೆ ಕರೆ ಮಾಡಿ ಮಗಳು ಶಾಲೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ನಂತರ ಪೋಷಕರು ಪರಿಶೀಲನೆ ಮಾಡಿದಾಗ ಜೆಸ್ಸಿಕಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕವಾಗಿ ಬಾಲಕಿ ಶಾಲೆಗೆ ಹೋಗಿ ಕ್ಲಾಸ್ ಅಟೆಂಡ್ ಮಾಡದೆ ವಾಪಸ್ ಬರುತ್ತಿದ್ದಳು ಎಂದು ತಿಳಿದುಬಂದಿದೆ. ಅದ್ರೆ ಘಟನೆ ನಿಖರ ಕಾರಣ ಏನು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

suddiyaana