ಮದುವೆ ಒಪ್ಪಿಲ್ಲ ಎಂದು ಗರ್ಲ್‌ಫ್ರೆಂಡ್‌ನ ಕೊಂದ! – ಯೂಟ್ಯೂಬ್ ನೋಡಿ ಪ್ರೇಮಿಯ ಆತ್ಮ ವಶೀಕರಣಕ್ಕೆ ಯತ್ನಿಸಿದ!

ಮದುವೆ ಒಪ್ಪಿಲ್ಲ ಎಂದು ಗರ್ಲ್‌ಫ್ರೆಂಡ್‌ನ ಕೊಂದ! – ಯೂಟ್ಯೂಬ್ ನೋಡಿ ಪ್ರೇಮಿಯ ಆತ್ಮ ವಶೀಕರಣಕ್ಕೆ ಯತ್ನಿಸಿದ!

ಪ್ರೀತಿ ಕುರುಡು, ಪ್ರೇಮಕ್ಕೆ ಕಣ್ಣಿಲ್ಲ ಅಂತಾರೆ. ಆದ್ರೆ ಇತ್ತೀಚೆಗೆ ಪ್ರೀತಿಗೆ ಬೆಲೆ ಇಲ್ಲ. ಪ್ರೀತಿಸಿದವರು ತಮ್ಮ ಮಾತು ಕೇಳಿಲ್ಲ ಅಂದ್ರೆ ಕೊಲ್ಲುವ ಮಟ್ಟಕ್ಕೂ ಹೋಗ್ತಾರೆ. ಇದೀಗ ಇಲ್ಲೊಂದು ಕಡೆ ಕೂಡ ಇಂತಹದ್ದೇ ಘಟನೆ ನಡೆದಿದೆ. ಪ್ರೇಯಸಿಯನ್ನು ಕೊಂದು ಆತ್ಮದ ವಶೀಕರಣಕ್ಕೆ ಯತ್ನಿಸಿರುವ ವಿಚಿತ್ರ ಘಟನೆ ನಡೆದಿದೆ.

ಇದನ್ನೂ ಓದಿ: ಖ್ಯಾತ ನಟಿ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್​ಮೇಲ್! –  ಆ ದಿನ ಆಗಿದ್ದೇನು?

ಮಧ್ಯಪ್ರದೇಶದಲ್ಲಿ  ಇಂದೋರ್‌ನ ದ್ವಾರಕಪುರಿಯ ಅಪಾರ್ಟ್ಮೆಂಟ್‌ವೊಂದರಲ್ಲಿ  ಈ ಘಟನೆ ನಡೆದಿದೆ. ಪಿಯೂಷ್ ಧಮ್ನೋಡಿಯಾ ಎಂಬಾತ ತನ್ನೊಂದಿಗೆ ಸಂಬಂಧದಲ್ಲಿದ್ದ 24 ವರ್ಷದ ಗೆಳತಿಯನ್ನು ಹತ್ಯೆ ಮಾಡಿ, ಬಳಿಕ ಶವದ ಜೊತೆ ವಿಕೃತಿ ಮೆರೆದಿದ್ದಾನೆ.

ಪಿಯೂಷ್ ಹಾಗೂ ಆತನ ಗೆಳತಿ ಜೊತೆ ಮದುವೆ ವಿಚಾರಕ್ಕೆ ಜಗಳವಾಗಿತ್ತು. ಬಳಿಕ ಪಿಯೂಷ್ ಯುವತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆಕೆ ಅನಾರೋಗ್ಯದ ಕಾರಣ ಹೇಳಿ ನಿರಾಕರಿಸಿದಾಗ, ಬಲವಂತವಾಗಿ ಅತ್ಯಾ*ರ ಎಸಗಿದ್ದಾನೆ. ನಂತರ ನಿನಗೊಂದು ಗಿಫ್ಟ್ ಕೊಡುತ್ತೇನೆ ಎಂದು ಹೇಳಿ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ, ಹಗ್ಗದಿಂದ ಕೈಕಾಲುಗಳನ್ನು ಕಟ್ಟಿದ್ದಾನೆ. ಬಳಿಕ ಆಕೆಯ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿದ್ದಾನೆ. ಪ್ರಜ್ಞೆ ತಪ್ಪಿದ ಬಳಿಕ ಎದೆಗೆ ಚಾಕುವಿನಿಂದ ಇರಿದು ಕೊ* ಮಾಡಿದ್ದಾನೆ. ಇರಿತದ ರಭಸಕ್ಕೆ ಚಾಕುವೇ ಮುರಿದು ಹೋಗಿದೆ ಎನ್ನಲಾಗಿದೆ. ಬಳಿಕ ಅಲ್ಲಿಂದ ಮಹಾರಾಷ್ಟ್ರದ ಪನ್ವೇಲ್‌ಗೆ ಆರೋಪಿ ಪ್ರಯಾಣಿಸಿದ್ದಾನೆ. ಬಳಿಕ ಖಾಸಗಿ ಹೋಟೆಲ್‌ನಲ್ಲಿ ಯುವತಿ ಆತ್ಮ ವಶೀಕರಣಕ್ಕೆ ಮಾಟಮಂತ್ರ ಮಾಡಿದ್ದ. ಆತ್ಮದ ಜೊತೆಗೆ ಮಾತುಕತೆ ನಡೆಸಲು ಆರೋಪಿ ಯತ್ನಿಸಿದ್ದ.

ಯುವತಿ ನಾಪತ್ತೆಯಾದ ಬಳಿಕ ಫೆ.11 ರಂದು ಯುವತಿ ತಂದೆಯಿಂದ ದೂರು ದಾಖಲಾಗಿತ್ತು. ಫೆ.13 ರಂದು ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರು ಯುವತಿ ಮೃತದೇಹ ಪತ್ತೆಹಚ್ಚಿದ್ದಾರೆ. ಬಳಿಕ ಆರೋಪಿ ಪಿಯೂಷ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.  ಇಬ್ಬರೂ ಎಂಬಿಎ ಓದುತ್ತಿದ್ದರು. ಮದುವೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಕುಟುಂಬಸ್ಥರ ಒಪ್ಪಿಗೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದ ಹಿನ್ನೆಲೆ ಮದುವೆಗೆ ಯುವತಿ ನಿರಾಕರಿಸಿದ್ದಳು. ಈ ಬಗ್ಗೆ ಮಾತುಕತೆಗೆ ಬಂದಾಗ ಜಗಳ ಏರ್ಪಟ್ಟು ಹತ್ಯೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ.

Shwetha M

Leave a Reply

Your email address will not be published. Required fields are marked *