ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – ಸ್ಪೆಷೆಲ್ ಪೋಸ್ಟರ್ ರಿಲೀಸ್ ಮಾಡಿದ ಸಲಾರ್ ಟೀಮ್

ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – ಸ್ಪೆಷೆಲ್ ಪೋಸ್ಟರ್ ರಿಲೀಸ್ ಮಾಡಿದ ಸಲಾರ್ ಟೀಮ್

ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್‌ 41ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಾಲಿವುಡ್‌ನ ರಾಜಕುಮಾರ ಅಂತಾನೇ ಫೇಮಸ್ ಆಗಿರುವ ಪೃಥ್ವಿರಾಜ್ ಸುಕುಮಾರನ್‌ ಬಹುಬೇಡಿಕೆಯ ನಟ ಕೂಡಾ ಹೌದು. ಒಬ್ಬ ಅದ್ಭುತ ಹೀರೋ.. ಒಬ್ಬ ಭಯಂಕರ ವಿಲನ್, ರೋಮ್ಯಾಂಟಿಕ್ ಇಮೇಜ್ ಇವೆಲ್ಲಾ ಕೂಡಾ ಪೃಥ್ವಿರಾಜ್ ಸುಕುಮಾರನ್‌ ಅವರನ್ನು ಪರಿಪೂರ್ಣ ಕಲಾವಿದನಾಗಿ ನೋಡುವಂತೆ ಮಾಡಿದೆ. ಇದೀಗ ಪೃಥ್ವಿರಾಜ್ ಸುಕುಮಾರನ್‌ ಹುಟ್ಟುಹಬ್ಬಕ್ಕೆ ಸಲಾರ್ ಚಿತ್ರತಂಡ ಸಖತ್ ಸರ್‌ಪ್ರೈಸ್ ನೀಡಿದೆ. ಇದು ಅಭಿಮಾನಿಗಳಿಗೂ ಖುಷಿ ನೀಡಿದೆ.

ಇದನ್ನೂ ಓದಿ: ಡಿಸೆಂಬರ್ 22ರಂದು ಸಲಾರ್ ಸಿನಿಮಾ ರಿಲೀಸ್ – ಶಾರುಖ್ ಖಾನ್ ಚಿತ್ರದ ಜೊತೆಗೆ ಪ್ರಭಾಸ್ ಸಿನಿಮಾ ಫೈಟ್..!

ಪ್ರಶಾಂತ್‌ ನೀಲ್‌ ನಿರ್ದೇಶನದ ಪ್ರಭಾಸ್‌ ಹೀರೋ ಆಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಸಲಾರ್. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್‌ ರೋಲ್ ಯಾವುದು ಎಂದು ತಿಳಿದುಕೊಳ್ಳಲು ಅಭಿಮಾನಿ ಕೂಡಾ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಇದೀಗ ಸಲಾರ್‌ ಚಿತ್ರತಂಡ ಖ್ಯಾತನಟ ಪೃಥ್ವಿರಾಜ್ ಸುಕುಮಾರನ್‌ಗೆ ಬರ್ತ್‌ಡೇ ವಿಶ್ ಮಾಡುತ್ತಾ, ಸ್ಪೆಷಲ್ ಗಿಫ್ಟ್ ನೀಡಿದೆ. ಸಿನಿಮಾದಲ್ಲಿ ನೆಗೆಟಿವ್‌ ಶೇಡ್‌ ನಲ್ಲಿ ಕಾಣಿಸಿಕೊಳ್ಳಲಿರುವ ಪೃಥ್ವಿರಾಜ್ ಸುಕುಮಾರನ್‌ ಅವರ ಹುಟ್ಟುಹಬ್ಬಕ್ಕೆ ಸ್ಪೆಷೆಲ್‌ ಪೋಸ್ಟರ್‌ ರಿಲೀಸ್‌ ಮಾಡಿದೆ.

ಡಿಸೆಂಬರ್‌ 22 ರಂದು ಸಲಾರ್ ಸಿನಿಮಾ ರಿಲೀಸ್‌ ಆಗಲಿದೆ. ಈಗಾಗಲೇ ಟೀಸರ್‌ ಮೂಲಕ ಸಲಾರ್ ಹೈಪ್‌ ಹೆಚ್ಚಿದೆ. ಮಾಲಿವುಡ್‌ ಸ್ಟಾರ್‌ ನಟ ಪೃಥ್ವಿರಾಜ್ ಸುಕುಮಾರನ್‌ ಸಿನಿಮಾದಲ್ಲಿ ‘ವರ್ಧರಾಜ ಮನ್ನಾರ್’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 16 ರಂದು ಪೃಥ್ವಿರಾಜ್ ಸುಕುಮಾರನ್‌ ಅವರ 41ನೇ ಹುಟ್ಟುಹಬ್ಬವಾಗಿದ್ದರಿಂದ ಸಲಾರ್ ತಂಡ ಅವರ ಪಾತ್ರದ ಸ್ಪೆಷೆಲ್‌ ಪೋಸ್ಟರ್‌ ರಿಲೀಸ್‌ ಮಾಡಿ ಬರ್ತ್‌ ಡೇ ವಿಶ್‌ ಮಾಡಿದೆ.

ಎರಡು ಪಾರ್ಟ್‌ ಗಳಲ್ಲಿ ಸಲಾರ್‌ ಸಿನಿಮಾ ರಿಲೀಸ್‌ ಆಗಲಿದೆ. ಪ್ರಭಾಸ್‌ ಜೊತೆ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗಪತಿ ಬಾಬು, ಟಿನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮತ್ತು ರಾಮಚಂದ್ರರಾಜು ಮುಂತಾದವರು ಸಲಾರ್ ಚಿತ್ರದಲ್ಲಿ ನಟಿಸಿದ್ದಾರೆ.

Sulekha