ಸಿಕ್ಸರ್ ಬಾರಿಸಿದರೂ ಸ್ಕೋರ್ ಬೋರ್ಡ್ನಲ್ಲಿ ದಾಖಲಾಗಲಿಲ್ಲ – ರಿಂಕು ಸಿಂಗ್ ಸಿಕ್ಸರ್ ಕಥೆ ಏನು?
ಆಸ್ಟ್ರೇಲಿಯಾ ವಿರುದ್ಧದ ಫಸ್ಟ್ ಟಿ-20 ಮ್ಯಾಚ್ನ್ನ ಟೀಂ ಇಂಡಿಯಾ ರೋಚಕವಾಗಿ ಗೆದ್ದುಕೊಂಡಿದೆ. ಟೀಂ ಇಂಡಿಯಾ ಟಾಸ್ ಗೆದ್ದು ಆಸ್ಟ್ರೇಲಿಯಾವನ್ನ ಮೊದಲು ಬ್ಯಾಟಿಂಗ್ಗೆ ಇಳಿಸಿತ್ತು. ಅಸ್ಸೀಗಳು 20 ಓವರ್ನಲ್ಲಿ ಕೇವಲ 3 ವಿಕೆಟ್ಗಳನ್ನ ಕಳೆದುಕೊಂಡು ಬರೋಬ್ಬರಿ 208 ರನ್ ಗಳಿಸಿದ್ದರು. ಇತ್ತ ಟೀಂ ಇಂಡಿಯಾ 8 ವಿಕೆಟ್ಗಳನ್ನ ಕಳೆದುಕೊಂಡು ಕೊನೆಗೂ ಟಾರ್ಗೆಟ್ನ್ನ ಚೇಸ್ ಮಾಡಿತ್ತು. ಆದ್ರೆ ಈ ಮ್ಯಾಚ್ನಲ್ಲಿ ಕೆಲ ಇಂಟ್ರೆಸ್ಟಿಂಗ್ ಬೆಳವಣಿಗೆಗಳು ನಡೆದಿದೆ. ಅದ್ರಲ್ಲೂ ರಿಂಕು ಸಿಂಗ್ ಲಾಸ್ಟ್ ಬಾಲ್ಗೆ ಹೊಡೆದ ಸಿಕ್ಸ್ ಕೌಂಟೇ ಆಗಿಲ್ಲ. ಸಿಕ್ಸರ್ ಹೊಡೆದ್ರೂ ಸಿಕ್ಕಿದ್ದು ಒಂದು ರನ್ ಮಾತ್ರ. ಇದಕ್ಕೆ ಕಾರಣ ಏನು ಅನ್ನೋದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗ್ರೇಟ್ ಚೇಸರ್ ರಿಂಕು ಸಿಂಗ್..!- ಮೊದಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಭಾರತ
ಆಸ್ಟ್ರೇಲಿಯಾ ವಿರುದ್ಧದ ಫಸ್ಟ್ ಟಿ-20 ಮ್ಯಾಚ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಆಫ್ ಅಟ್ರಾಕ್ಷನ್ ಅಂದ್ರೆ ಕ್ಯಾಪ್ಟನ್ ಸೂರ್ಯಕುಮಾರ್ ಮತ್ತು ಫಿನಿಷರ್ ರಿಂಕು ಸಿಂಗ್. ಈ ಮ್ಯಾಚ್ನಲ್ಲಿ ಒಟ್ಟು ಮೂವರು ಬ್ಯಾಟ್ಸ್ಮನ್ಗಳು ತಂಡದ ಗೆಲುವಿಗೆ ಪ್ರಮುಖ ಕಾರಣರಾದ್ರು. ಇಶಾನ್ ಕಿಶನ್ 58 ರನ್ ಹೊಡೆದಿದ್ರು. ಸೂರ್ಯಕುಮಾರ್ ಯಾದವ್ 80 ರನ್ ಮಾಡಿದ್ರು. ನಂತರ ರಿಂಕು ಸಿಂಗ್ ಅತ್ಯಂತ ಕ್ರೂಶಿಯಲ್ ಇನ್ನಿಂಗ್ಸ್ ಆಡಿ 22 ರನ್ ಮಾಡಿದ್ರು. ರಿಂಕು ಸಿಂಗ್ರ ಆ 22 ರನ್ನಿಂದಾಗಿಯೇ ಟೀಂ ಇಂಡಿಯಾ ಈ ಮ್ಯಾಚ್ನ್ನ ಗೆಲ್ಲೋಕೆ ಸಾಧ್ಯವಾಯ್ತು. ಯಾಕಂದ್ರೆ ಕೊನೆಯಲ್ಲಿ ಟೀಂ ಇಂಡಿಯಾ ಮೇಲಿಂದ ಮೇಲೆ ವಿಕೆಟ್ಗಳನ್ನ ಕಳೆದುಕೊಂಡು ಒಂದಷ್ಟು ಡ್ರಾಮಾ ನಡೀತು. ಇನ್ನೇನು ಮ್ಯಾಚ್ ಸೋತೇ ಬಿಟ್ರು ಅನ್ನೋ ಟೈಮ್ನಲ್ಲಿ ಫಿನಿಷಿಂಗ್ ಮಾಸ್ಟರ್ ರಿಂಕು ಸಿಂಗ್ ತಮ್ಮ ನ್ಯಾಚ್ಯುರಲ್ ಸ್ಟೈಲ್ನಲ್ಲಿ ಫೀಯರ್ಲೆಸ್ ಆಗಿ ಬ್ಯಾಟ್ ಬೀಸಿದ್ರು. ಕೊನೆಯ 6 ಬಾಲ್ಗಳಲ್ಲಿ ಗೆಲ್ಲೋಕೆ 7 ರನ್ಗಳು ಬೇಕಾಗಿತ್ತು. ಲಾಸ್ಟ್ ಓವರ್ನಲ್ಲಿ ಭಾರತದ ಮೂರು ವಿಕೆಟ್ಗಳು ಬಿತ್ತು. ಕೊನೆಗೆ ಒಂದು ಬಾಲ್ನಲ್ಲಿ ತಂಡಕ್ಕೆ ಒಂದು ರನ್ನ ಅವಶ್ಯಕತೆ ಇತ್ತು. ಈ ವೇಳೆ ರಿಂಕು ಸಿಂಗ್ ಹ್ಯೂಜ್ ಸಿಕ್ಸ್ ಹೊಡೆದ್ರು. ಆದ್ರೆ ಸಿಕ್ಸ್ ಕೌಂಟ್ ಆಗಲೇ ಇಲ್ಲ. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ನಲ್ಲಿ ರಿಂಕು ಸಿಂಗ್ 22 ರನ್ ಹೊಡೆದಿದ್ದಾರೆ. ಈ ಪೈಕಿ 4 ಬೌಂಡರಿ ಇತ್ತೇ ಹೊರತು ರಿಂಕು ಲಾಸ್ಟ್ ಬಾಲ್ಗೆ ಸಿಕ್ಸ್ ಹೊಡೆದಿದ್ದು ಕೌಂಟೇ ಆಗಿಲ್ಲ. ಹೀಗಾಗಿ ಟೀಂ ಇಂಡಿಯಾದ ಲಾಸ್ಟ್ ರನ್ ಬಗ್ಗೆ ಒಂದಷ್ಟು ಕನ್ಫ್ಯೂಷನ್ ಕ್ರಿಯೇಟ್ ಆಗಿತ್ತು. ಬಳಿಕ ಅಂಪೈರ್ಗಳು ಅದನ್ನ ನೋ ಬಾಲ್ ಅಂತಾ ಪರಿಗಣಿಸ್ತಾರೆ. ನೋ ಬಾಲ್ ಆಗಿದ್ರಿಂದ ಭಾರತದ ಗೆಲುವಿಗೆ ಬೇಕಾಗಿದ್ದ ಒಂದು ರನ್ ಅಲ್ಲೇ ಬಂದಿತ್ತು.
ಹಾಗಿದ್ದರೆ ರಿಂಕು ಸಿಂಗ್ ಹೊಡೆದಿದ್ದು ಸಿಕ್ಸರ್ ಆಗಿಲ್ಲ ಯಾಕೆ ಅನ್ನೋದು ಇಲ್ಲಿರುವ ಪ್ರಶ್ನೆ. ಮ್ಯಾಚ್ನ ಕೊನೆಯ ಬಾಲ್ನ್ನ ರಿಂಕು ಸಿಂಗ್ ಲಾಂಗ್ ಆನ್ನತ್ತ ಸಿಕ್ಸ್ ಹೊಡೀತಾರೆ. ಆದ್ರೆ ಅದಕ್ಕೆ 6 ರನ್ಗಳು ಸಿಗೋದಿಲ್ಲ. ಅದು ನೋ ಬಾಲ್ ಆಗಿದ್ರಿಂದ ಒಂದು ರನ್ ಮಾತ್ರ ಸಿಕ್ಕಿದೆ. ಸೀನ್ ಅಬಾಟ್ ಎಸೆದ ಆ ಕೊನೆಯ ಬಾಲ್ ನೋಬಾಲ್ ಆಗಿರೋದು ಅವರು ಓವರ್ಸ್ಟೆಪ್ ಆಗಿರೋದ್ರಿಂದ. ಅಂದ್ರೆ ಬೌಲಿಂಗ್ ಮಾರ್ಕ್ ಬಳಿ ಲೈನ್ನನ್ನ ಕ್ರಾಸ್ ಮಾಡಿದ್ರು. ಹೀಗಾಗಿ ಅದು ನೋಬಾಲ್ ಆಗಿತ್ತು. ಆ ಬಾಲ್ಗೆ ರಿಂಕು ಸಿಂಗ್ ಸಿಕ್ಸ್ ಹೊಡೀತಾರೆ. ಆದ್ರೆ ರೂಲ್ಸ್ ಪ್ರಕಾರ ಅದು ಸಿಕ್ಸ್ ಅಂತಾ ಕೌಂಟ್ ಆಗಲ್ಲ. ಯಾಕಂದ್ರೆ ಸೀನ್ ಅಬಾಟ್ ಬಾಲ್ ಡೆಲಿವರಿ ಮಾಡೋ ಮುನ್ನವೇ ನೋ ಬಾಲ್ ಹಾಕಿದ್ದರು. ಆಗಲೇ ಹೇಳಿದ ಹಾಗೆ ಓವರ್ ಸ್ಟೆಪ್ ಆಗಿ ನೋಬಾಲ್ ಹಾಕಿದ್ರು. ಓವರ್ಸ್ಟೆಪ್ ಆಗಿದ್ರಿಂದಾಗಿ ಬಾಲ್ ಬ್ಯಾಟ್ಸ್ಮನ್ನತ್ತ ಬರೋ ಮುನ್ನವೇ ನೋ ಬಾಲ್ ಆಗಿತ್ತು. ಇಲ್ಲಿ ನೋ ಬಾಲ್ ಕೌಂಟ್ ಆಗಿರೋದು ಬಾಲ್ಡೆಲಿವರಿ ಆಗೋ ಮುನ್ನ ಮತ್ತು ಓವರ್ಸ್ಟೆಪ್ ಆದಾಗಲೇ. ಹೀಗಾಗಿ ರಿಂಕು ಸಿಂಗ್ ಸಿಕ್ಸ್ ಹೊಡೆದ್ರೂ, ಬೌಂಡರಿ ಬಾರಿಸಿದ್ರು ಅದು ಲೆಕ್ಕಕ್ಕಿಲ್ಲ. ಅಲ್ಲಿ ಸಿಗೋದು ಒಂದೇ ರನ್. ಯಾಕಂದ್ರೆ ಸೀನ್ ಅಬಾಟ್ ಓವರ್ಸ್ಟೆಪ್ ಆದಾಗಲೇ ಭಾರತ ಅಲ್ಲಿ ಮ್ಯಾಚ್ ಗೆದ್ದಾಗಿತ್ತು. ಅಂದ್ರೆ ರಿಂಕು ಸಿಕ್ಸರ್ ಹೊಡೆಯೋ ಮುನ್ನವೇ ಭಾರತ ಮ್ಯಾಚ್ ಗೆದ್ದಿತ್ತು. ಇಲ್ಲಿ ಭಾರತ ಮ್ಯಾಚ್ ಗೆದ್ದ ಮೇಲೆ ರಿಂಕು ಸಿಂಗ್ ಸಿಕ್ಸರ್ ಹೊಡೆದಿದ್ದು ಅಂತಾ ಆಗುತ್ತೆ. ಆದ್ರೆ ಈ ರೂಲ್ಸ್ಗೆ ಇನ್ನೊಂದು ಟ್ವಿಸ್ಟ್ ಕೂಡ ಇದೆ. ಒಂದು ವೇಳೆ ಭಾರತಕ್ಕೆ ಗೆಲ್ಲೋಕೆ ಒಂದಕ್ಕಿಂತ ಹೆಚ್ಚು ರನ್ ಅಗತ್ಯ ಇರ್ತಿದ್ರೆ ಆಗ ರಿಂಕು ಸಿಂಗ್ ಸಿಕ್ಸರ್ ಕೌಂಟ್ ಆಗ್ತಿತ್ತು. ಆದ್ರೆ ಗೆಲ್ಲೋಕೆ ಕೇವಲ ಒಂದು ರನ್ ಬೇಕಾಗಿತ್ತು. ಓವರ್ಸ್ಟೆಪ್ ನೋಬಾಲ್ನಲ್ಲೇ ಆ ಒಂದು ರನ್ ಬಂತು. ಹೀಗಾಗಿ ರಿಂಕು ಸಿಕ್ಸರ್ ಹೊಡೆದ್ರೂ ರೂಲ್ಸ್ ಪ್ರಕಾರ ಭಾರತ ಮತ್ತು ರಿಂಕು ಸಿಂಗ್ಗೆ ಸಿಕ್ಕಿರೋದು ಒಂದೇ ರನ್. 208ರನ್ ಆಗಿದ್ದಾಗ ರಿಂಕು ಸಿಂಗ್ ಸಿಕ್ಸರ್ ಹೊಡೆದ್ರೂ ಟೀಂ ಇಂಡಿಯಾದ ಸ್ಕೋರ್ 209ರನ್ ಆಗಿದೆ. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ನಲ್ಲಿ ರಿಂಕು ಸಿಂಗ್ ಒಂದೇ ಒಂದು ಸಿಕ್ಸರ್ ಹೊಡೆದಿಲ್ಲ ಅಂತಾನೆ ಕನ್ಸಿಡರ್ ಮಾಡಲಾಗಿದೆ.