ದುಬಾರಿ ಬೆಲೆಗೆ ಮಾರಾಟವಾಯ್ತು ಮಾವಿನ ಹಣ್ಣು! – ಒಂದು ಹಣ್ಣಿನ ರೇಟ್ ಎಷ್ಟು ಗೊತ್ತಾ?

ದುಬಾರಿ ಬೆಲೆಗೆ ಮಾರಾಟವಾಯ್ತು ಮಾವಿನ ಹಣ್ಣು! – ಒಂದು ಹಣ್ಣಿನ ರೇಟ್ ಎಷ್ಟು ಗೊತ್ತಾ?

ಏಪ್ರಿಲ್, ಮೇ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳದ್ದೇ ಕಾರುಬಾರು. ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಹೀಗಿರುವಾದ ಇಲ್ಲೊಂದು ಮಾವಿನ ಹಣ್ಣು ಸಾವಿರಾರು ರೂಪಾಯಿಗೆ ಮಾರಾಟವಾಗಿದೆ.

ಸಾಮಾನ್ಯವಾಗಿ 1 ಕೆಜಿ ಮಾವಿನ ಹಣ್ಣಿನ ಬೆಲೆ ನೂರು, ಇನ್ನೂರು ರೂಪಾಯಿ ಇರುತ್ತದೆ. ಆದರೆ ಜಪಾನಿನ ರೈತರೊಬ್ಬರು ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ. ಇದು ವಿಶ್ವದ ದುಬಾರಿ ಮಾವಿನ ಹಣ್ಣಾಗಿದ್ದು, ಒಂದೊಂದು ಮಾವಿನ ಹಣ್ಣು ಬರೋಬ್ಬರಿ 19 ಸಾವಿರ ರೂಪಾಯಿಗೆ ಮಾರಾಟವಾಗಿದೆ.

ಇದನ್ನೂ ಓದಿ: ಫಸ್ಟ್ ತಿನ್ನಿ ಆಮೇಲೆ ಬಿಲ್ ಪೇ ಮಾಡಿ! – ಮಾವು ಖರೀದಿಗೂ ಬಂತು ಇಎಂಐ!

ಜಪಾನಿನ 62 ವರ್ಷ ವಯಸ್ಸಿನ ಹಿರೊಯಿಕಿ ನಗಾಕುವಾ ಎಂಬುವವರು ಮೂಲತಃ ತೈಲ ವ್ಯಾಪಾರಿಯಾಗಿದ್ದವರು. ಒಂದು ದಿನ ಅವರಿಗೆ ತಾನು ನಿಸರ್ಗದ ಮೂಲದಿಂದ ನೈಸರ್ಗಿಕವಾಗಿ ಏನನ್ನಾದರೂ ಉತ್ಪಾದಿಸಬೇಕು ಎಂಬ ಬಯಕೆ ಮೂಡುತ್ತದೆ. ಆಗ ಅವರು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದ್ದ ತೈಲ ವ್ಯಾಪಾರವನ್ನು ತೊರೆದು ಮಾವು ಬೆಳೆಯಲು ಮುಂದಾಗುತ್ತಾರೆ. ಅವರಿಗೆ ಮತ್ತೊಬ್ಬ ರೈತ ಮಿಯಾಝಕಿ ಮಾರ್ಗದರ್ಶನ ನೀಡುತ್ತಾರೆ. ಅವರ ಮಾರ್ಗದರ್ಶನದಂತೆ ಹಿರೊಯಿಕಿ ನಗಾರುವಾ ಚಳಿಗಾಲದಲ್ಲಿ ಮಾವು ಬೆಳೆಯುವ ಸಾಹಸಕ್ಕೆ ಮುಂದಾಗುತ್ತಾರೆ.

ಈ ಮಾವಿನ ತೋಟವಿರುವ ಜಪಾನಿನ ಹೊರಾಯಿಡೊದಲ್ಲಿ ಚಳಿಗಾಲದಲ್ಲಿ ಇಬ್ಬನಿ ಪ್ರಮಾಣ ತೀವ್ರವಾಗಿರುತ್ತದೆ. ಡಿಸೆಂಬರ್ ತಿಂಗಳಲ್ಲಿ ಮನೆಯ ಹೊರಗಿನ ವಾತಾವರಣ -8 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ಇರುತ್ತದೆ. ಆದರೆ, ನಗಾರುವ ನಿರ್ಮಾಣ ಮಾಡಿರುವ ಹಸಿರು ಮನೆಯಲ್ಲಿನ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತೋರಿಸುತ್ತಿರುತ್ತದೆ. ನೈಸರ್ಗಿಕ ಸಂಪನ್ಮೂಲವಾದ ಮಂಜು ಗಡ್ಡೆ ಹಾಗೂ ಬಿಸಿ ನೀರಿನ ಬುಗ್ಗೆಗಳು, ಚಳಿಗಾಲದಲ್ಲಿ ದೊರೆಯುವ ಮಂಜು ಗಡ್ಡೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ನಗಾಕುವಾ, ಬೇಸಿಗೆಯಲ್ಲಿ ಅದನ್ನು ತಮ್ಮ ಹಸಿರು ಮನೆಯನ್ನು ತಂಪಾಗಿಡಲು ಬಳಸಿಕೊಳ್ಳುತ್ತಾರೆ. ಇದರಿಂದ ಮಾವಿನ ಹಣ್ಣುಗಳು ನಿಧಾನಕ್ಕೆ ಮಾಗುತ್ತವೆ. ಹಾಗೆಯೇ ಚಳಿಗಾಲದಲ್ಲಿ ತಮ್ಮ ಹಸಿರು ಮನೆಯನ್ನು ಬೆಚ್ಚಗಿಡಲು ನೈಸರ್ಗಿಕ ಬಿಸಿ ನೀರಿನ ಬುಗ್ಗೆಗಳನ್ನು ಬಳಸಿಕೊಂಡು ಒಂದು ಋತುವಿಗೆ ಸುಮಾರು 5,000 ಮಾವಿನ ಹಣ್ಣುಗಳನ್ನು ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

suddiyaana