ನನ್ನ ಬಿಟ್ಟುಹೋದೆಯಾ ಅಮ್ಮಾ.. – ಲೀಲಮ್ಮನ ಫೋಟೋ ಮುಂದೆ ಮುದ್ದಿನ ಶ್ವಾನದ ಮೂಕ ರೋದನೆ

ನನ್ನ ಬಿಟ್ಟುಹೋದೆಯಾ ಅಮ್ಮಾ.. – ಲೀಲಮ್ಮನ ಫೋಟೋ ಮುಂದೆ ಮುದ್ದಿನ ಶ್ವಾನದ ಮೂಕ ರೋದನೆ

ಅಮ್ಮ.. ಲೀಲಮ್ಮ.. ಕರೆದರೆ ಸಾಕು ಅಮ್ಮನೆದುರು ಪ್ರತ್ಯಕ್ಷ ಮುದ್ದಿನ ಶ್ವಾನ ಬ್ಲ್ಯಾಕಿ. ಕರಿಯ ಅಂದರೂ ಸಾಕು.. ಓಡೋಡಿ ಬರುತ್ತದೆ. ಅಮ್ಮನ ಎದುರು ತುಂಟಾಟ, ತರಲೆ ಎಲ್ಲಾ ಬಂದ್.. ಅಮ್ಮ ಹೇಳಿದನ್ನು ಕೇಳುವ ರೀತಿ ನೋಡಿದರೆ ಕರಿಯನ ನಿಯತ್ತು ಅರ್ಥವಾಗುತ್ತದೆ. ರಿಯಾಲಿಟಿ ಶೋವೊಂದರಲ್ಲೂ ವೇದಿಕೆ ಹಂಚಿಕೊಂಡಿದ್ದ ಲೀಲಮ್ಮನ ಪ್ರೀತಿಯ ಬ್ಲ್ಯಾಕಿ. ಈಗ ತನ್ನೊಡತಿ ತನ್ನನ್ನು ಬಿಟ್ಟು ಬಾರದಲೋಕಕ್ಕೆ ಹೋಗಿದ್ದಾಳೆ ಎಂಬುದು ಶ್ವಾನದ ಅರಿವಿಗೂ ಬಂದಿದೆ. ಅಮ್ಮನ ನೋಡುತ್ತಾ ಇದ್ದ ಶ್ವಾನ ಈಗ ಅಮ್ಮನ ಫೋಟೋ ಮಾತ್ರ ನೋಡುತ್ತಿದ್ದಾನೆ. ತಾನಿದ್ದ ಜಾಗದಿಂದ ಒಂದು ಚೂರು ಕದಲುತ್ತಿಲ್ಲ.. ತನ್ನ ಒಡತಿಯ ಫೋಟೋವನ್ನು ದೃಷ್ಟಿಸುತ್ತಾ ಮೂಕವಾಗಿ ರೋದಿಸುತ್ತಿದ್ದಾನೆ.

ಇದನ್ನೂ ಓದಿ: ತಂದೆ ಕಾರಣ, ತಾಯಿಯೇ ಸತ್ಯ – ಅಮ್ಮನ ಅಗಲಿಕೆಯ ದುಃಖದಲ್ಲಿ ವಿನೋದ್‌ರಾಜ್‌ ನೋವಿನ ಮಾತು..!

ನೆಲಮಂಗಲದ ಬಳಿಯಿರುವ ಸೊಲದೇವನಹಳ್ಳಿಯಲ್ಲಿ ಸುಂದರ ಮನೆಯನ್ನು ಲೀಲಾವತಿ ಬಹಳ ಇಷ್ಟಪಟ್ಟು ಕಟ್ಟಿದ್ದರು. ಮತ್ತು ತಮ್ಮ ಬದುಕಿನ ಹೆಚ್ಚಿನ ಸಮಯವನ್ನು ಇದೇ ಮನೆಯಲ್ಲಿ ಕಳೆದರು. ಅವರು ಬದುಕಿರುವಾಗ ಮನೆ ಸದಾ ಚಟುವಟಿಕೆಗಳಿಂದ ಕೂಡಿರುತಿತ್ತು. ಮತ್ತು ಜನರಿಂದ ಗಿಜಿಗಿಡುತಿತ್ತು. ಇವತ್ತು ಮನೆಯಲ್ಲಿ ನೀರವ ಮೌನ. ಅದರಲ್ಲೂ ಲೀಲಾವತಿ ಅಮ್ಮನ ಪ್ರೀತಿಯ ನಾಯಿ ಬ್ಲ್ಯಾಕಿಯಂತೂ ನೋವಿನಲ್ಲಿ ಕಣ್ಣೀರು ಸುರಿಸುತ್ತಿದೆ. ಲೀಲಮ್ಮನಿಗೆ ಬ್ಲ್ಯಾಕಿ ಅಂದರೆ ತುಂಬಾ ಪ್ರೀತಿ. ಲೀಲಾವತಿ ಅವರ ಫೋಟೋವನ್ನು ದಿಟ್ಟಿಸುತ್ತಾ ಬ್ಲ್ಯಾಕಿ ಮೌನವಾಗಿ ರೋದಿಸುತ್ತಿದೆ. ಮನೆಯ ಒಡತಿ ಇಲ್ಲ ಎಂಬುದು ಮುದ್ದಿನ ಶ್ವಾನದ ಅರಿವಿಗೂ ಬಂದಿದೆ. ಮನೆಯ ಮುಂಭಾಗದಲ್ಲೇ ಒಡತಿಯ ಫೋಟೋ ದಿಟ್ಟಿಸಿ ನೋಡುತ್ತಲೇ ಇದೆ. ಮನೆಯ ಬಾಗಿಲನ್ನು ಬಿಟ್ಟು ಕದಲುತ್ತಿಲ್ಲ. ಮನೆಯಂಗಳದಲ್ಲೇ ಗಂಟೆಗಳ ಕಾಲ ಕದಲದೇ ಕುಳಿತ ನಾಯಿಯನ್ನು ನೋಡಿದವರಿಗೂ ದುಃಖ ಉಮ್ಮಳಿಸಿ ಬರುತ್ತಿದೆ.

ಪ್ರಾಣಿಪ್ರಿಯೆಯಾಗಿದ್ದ ಲೀಲಾವತಿ ಅವರು ಬ್ಲ್ಯಾಕಿ ಎನ್ನುವ ನಾಯಿ ಸಾಕಿದ್ದರು. ಈ ನಾಯಿ ಅವರಿಗೆ ಅತ್ಯಂತ ಮೆಚ್ಚಿನದ್ದಾಗಿತ್ತು. ಬ್ಲ್ಯಾಕಿ, ಕರಿಯ ಹೀಗೆ ಪ್ರೀತಿಯಿಂದ ತನ್ನ ಶ್ವಾನವನ್ನು ಮುದ್ದಿಸುತ್ತಿದ್ದರು ಲೀಲಾವತಿ. ಕಳೆದ ಅನೇಕ ವರ್ಷಗಳಿಂದ ಲೀಲಾವತಿಯವರ ಅಚ್ಚುಮೆಚ್ಚಿನ ಶ್ವಾನವಾಗಿದ್ದ ಕರಿಯ, ರಾತ್ರಿಯಿಂದ ಆಹಾರ ಸೇವಿಸುತ್ತಿಲ್ಲ. ಎರಡು ಕಾಲುಗಳಲ್ಲಿ ಬಹುತೇಕ ಸ್ವಾಧೀನ ಕಳೆದುಕೊಂಡಿದ್ದರೂ, ತೆವಳಿಕೊಂಡೇ ಮನೆಯ ಒಳಗೆ ಬಂದು ಕೆಲ ಕಾಲ ಕೂತಿದ್ದ. ಕರಿಯನ ಮೂಕ ವೇದನೆಗೆ ಕೊನೆ ಎಲ್ಲಿ ಇನ್ನು.. ತಾಯಿ ಪ್ರೀತಿಕೊಟ್ಟ ಲೀಲಮ್ಮ ಕಾಲನಲ್ಲಿ ಲೀನವಾಗಿದ್ದಾರೆ. ಆದರೆ, ಬ್ಲ್ಯಾಕಿಗೆ ತನ್ನೊಡತಿಯ ವಾತ್ಸಲ್ಯ ಇನ್ನು ಸಿಗುವುದಿಲ್ಲ ಅನ್ನೋದೇ ಸತ್ಯ.. ಮೂಕಪ್ರಾಣಿಯ ಈ ನೋವು ನಿಜಕ್ಕೂ ಮನಕಲಕುತ್ತಿದೆ..

Sulekha